AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಲು ನಾಡಿನಲ್ಲಿದೆ 14,958 ಹೆಕ್ಟರ್ ವಿಶಾಲದ ಹಸಿರು ಲೋಕ!

ಕಲಬುರಗಿ: ಕಲಬುರಗಿ ಅಂದಾಕ್ಷಣ ತಟ್ಟಣೆ ನೆನಪಾಗುವುದು ಬಿಸಿಲನಾಡು ಅಂತ. ಬಹುತೇಕರಿಗೆ ಕಲಬುರಗಿ ಅಂದ್ರೆ ಇಂದಿಗೂ ಕೂಡಾ ಬಿಸಿಲೆ ಮೊದಲು ಕಾಣಿಸುತ್ತದೆ. ಹೀಗಾಗಿ ನೀರು ನೆರಳಲ್ಲಿದ ಊರು ಅಂತ ಹೆಚ್ಚಿನ ಜನರು ಕಲಬುರಗಿಗೆ ಬರಲು ಹಿಂದೇಟು ಹಾಕ್ತಾರೆ. ಅದು ನಿಜಾ ಕೂಡಾ ಹೌದು. ಆದ್ರೆ, ಇದೇ ಜಿಲ್ಲೆಯಲ್ಲಿ ಹಸಿರು ಸಿರಿ ಕೂಡಾ ಇದೆ. ಮಳೆಗಾಲದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುದನ್ನು ನೋಡಲು ಎರಡೂ ಕಣ್ಣುಗಳು ಸಾಲವು ಅನ್ನೋದು ಬಹುತೇಕರಿಗೆ ಗೊತ್ತಿಲ್ಲಾ. ಬಯಲು ಬಿಸಿಲ ನಾಡಲ್ಲಿದೆ ಹಸಿರು ಅರಣ್ಯ ಹೌದು ಕಲಬುರಗಿ […]

ಬಯಲು ನಾಡಿನಲ್ಲಿದೆ 14,958 ಹೆಕ್ಟರ್ ವಿಶಾಲದ ಹಸಿರು ಲೋಕ!
ಆಯೇಷಾ ಬಾನು
|

Updated on:Jun 18, 2020 | 4:12 PM

Share

ಕಲಬುರಗಿ: ಕಲಬುರಗಿ ಅಂದಾಕ್ಷಣ ತಟ್ಟಣೆ ನೆನಪಾಗುವುದು ಬಿಸಿಲನಾಡು ಅಂತ. ಬಹುತೇಕರಿಗೆ ಕಲಬುರಗಿ ಅಂದ್ರೆ ಇಂದಿಗೂ ಕೂಡಾ ಬಿಸಿಲೆ ಮೊದಲು ಕಾಣಿಸುತ್ತದೆ. ಹೀಗಾಗಿ ನೀರು ನೆರಳಲ್ಲಿದ ಊರು ಅಂತ ಹೆಚ್ಚಿನ ಜನರು ಕಲಬುರಗಿಗೆ ಬರಲು ಹಿಂದೇಟು ಹಾಕ್ತಾರೆ. ಅದು ನಿಜಾ ಕೂಡಾ ಹೌದು. ಆದ್ರೆ, ಇದೇ ಜಿಲ್ಲೆಯಲ್ಲಿ ಹಸಿರು ಸಿರಿ ಕೂಡಾ ಇದೆ. ಮಳೆಗಾಲದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುದನ್ನು ನೋಡಲು ಎರಡೂ ಕಣ್ಣುಗಳು ಸಾಲವು ಅನ್ನೋದು ಬಹುತೇಕರಿಗೆ ಗೊತ್ತಿಲ್ಲಾ.

ಬಯಲು ಬಿಸಿಲ ನಾಡಲ್ಲಿದೆ ಹಸಿರು ಅರಣ್ಯ ಹೌದು ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಹಸಿರು ಸಿರಿ ಇದೆ. ಪುಟ್ಟ ಪುಟ್ಟ ಜಲಪಾತಗಳಿವೆ. ಹಲವಾರು ಕಾಡು ಪ್ರಾಣಿಗಳಿವೆ. ಬಯಲು ನಾಡಿನ ಈ ಹಸಿರು ಚೆಲುವನ್ನು ನೋಡುವುದೇ ಕಣ್ಣಿಗೆ ಹಬ್ಬ, ಮನಸಿಗೆ ಆನಂದ. ಮಳೆಗಾಲದಲ್ಲಿ ಮಡಿಕೇರಿಯ ಚೆಲುವಿನಂತೆ ಕಲಬುರಗಿ ಜಿಲ್ಲೆಯ ಕೆಲವು ಭಾಗಗಳು ಕೂಡಾ ಕಾಣುತ್ತವೆ. ಹೀಗಾಗಿ ನಮಗೆ ಮಡಿಕೇರಿ, ಮಲೆನಾಡಿಗಿಂತ ನಮ್ಮೂರ ಮಲೆನಾಡೇ ಚೆಂದ ಅಂತಾರೆ ಕಲಬುರಗಿ ಜನ.

ಅಷ್ಟಕ್ಕೂ ಬಿಸಿಲುನಾಡು ಕಲಬುರಗಿ ಜಿಲ್ಲೆಯಲ್ಲಿರುವ ಮಲೆನಾಡು ಎಂದು ಖ್ಯಾತಿಯಾಗಿರೋದು ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶ. ಈ ಕುಂಚಾವರಂ ಅರಣ್ಯ ಪ್ರದೇಶ ಬರೋಬ್ಬರಿ 14,958 ಹೆಕ್ಟರ್ ಪ್ರದೇಶ ವ್ಯಾಪ್ತಿಯಲ್ಲಿ ಇದೆ. ಇದನ್ನು 2011 ರಲ್ಲಿ ಸಂರಕ್ಷಿತ ವನ್ಯಜೀವಿ ಧಾಮ ಅಂತಾ ಕೂಡಾ ಘೋಷಿಸಲಾಗಿದೆ.

ಮಳೆಗಾಲದಲ್ಲಿ ಹಸಿರು ಸಿರಿಯೇ ಅನಾವರಣ ಬೇಸಿಗೆಯಲ್ಲಿ ಬೋಳು ಬೋಳಾಗಿ ಕಾಣುವ ಕುಂಚಾವರಂ ಅರಣ್ಯ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಸಮುದ್ರದಲ್ಲಿನ ಚಿಪ್ಪು ಅರಳಿದಂತೆ ಹಸಿರು ಸಿರಿಯನ್ನು ಹೊತ್ತು ಅರಳುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೂಡಾ ಉತ್ತಮವಾಗಿದ್ದು, ಮೃಗಸಿರದ ಜಿಟಿಜಿಟಿ ಮಳೆಗೆ ಕುಂಚಾವರಂ ಅರಣ್ಯ ಪ್ರದೇಶ ಅಕ್ಷರಶಃ ಹಸಿರಿನಿಂದ ನಳನಳಿಸುತ್ತಿದೆ.

ಹೌದು, ಕುಂಚಾವರಂ ಅರಣ್ಯ ಇದೀಗ ಸಂಪೂರ್ಣ ಹಸಿರಾಗಿದೆ. ಬೇಸಿಗೆಯ ಬಿಸಿಲಿಗೆ ಬಸವಳದಿದ್ದ ಮರಗಳು ಇದೀಗ ಬಿಸಿಲಿನಿಂದ ದೂರವಾಗಿ ಮಳೆಯ ಹನಿಗೆ ಹಸಿರನ್ನು ಮೈದೊಡೆದು ನಿಂತಿವೆ. ಹೀಗಾಗಿ ಎಲ್ಲೆಲ್ಲೂ ಇದೀಗ ಹಸಿರೆ ಹಸಿರು ಕಂಗೋಳಿಸುತ್ತಿದೆ. ಇದೇ ಅರಣ್ಯದಲ್ಲಿರುವ ‘ಚಂದ್ರಪಳ್ಳಿ’ ಜಲಾಶಯ, ‘ಎತ್ತಪೋತ’ ಕಿರು ಜಲಪಾತಗಳು ಜನರನ್ನು ಆಕರ್ಷಿಸುತ್ತಿವೆ. ಕುಂಚಾವರಂ ಅರಣ್ಯದಲ್ಲಿ ಹಾದು ಹೋಗುವದೆೇ ಇದೀಗ ಮನಸ್ಸಿಗೆ ಮುದ ನೀಡುವ ವಿಷಯ. ಹೀಗಾಗಿ ಜಿಲ್ಲೆಯ ಬಹುತೇಕ ಜನರು ಇದೀಗ ಕುಂಚಾವರಂನ ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ರವಾಸಿಗರಿಗೆ ಉತ್ತಮ ಸಂಪರ್ಕ ಸಾಧನ ಈ ಬಾರಿ ಕೊರೊನಾದ ಆತಂಕ ಕೂಡಾ ಹೆಚ್ಚಾಗಿರುವುದರಿಂದ ಜಿಲ್ಲೆಯ ಬಹುತೇಕರಿಗೆ ಇದೀಗ ಕುಂಚಾವರಂ ಅರಣ್ಯ ಪ್ರವಾಸಿ ಕೇಂದ್ರವಾಗಿದೆ. ಕಲಬುರಗಿಯಿಂದ ಕೇವಲ 100 ಕಿಲೋ ಮೀಟರ್‌ ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಲು ಅತ್ಯುತ್ತಮ ರಸ್ತೆ ಮಾರ್ಗ ಇದೆ. ಜತೆಗೆ ಕಲಬುರಗಿ ನಗರಕ್ಕೆ ವಿಮಾನ ನಿಲ್ದಾಣ ಮತ್ತು ರೈಲ್ವೇ ಸಂಪರ್ಕ ಕೂಡಾ ಇರೋದ್ರಿಂದ ಕಲಬುರಗಿ ಹಸಿರು ಸಿರಿಯನ್ನು ಬೇರೆ ಭಾಗದವರು ಕೂಡಾ ನೋಡಿ ಆನಂದಿಸಬಹುದಾಗಿದೆ -ಸಂಜಯ್

Published On - 4:11 pm, Thu, 18 June 20

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು