ಕಲಬುರಗಿ: ವಾಮಾಚಾರ ಮಾಡಿ ಯುವತಿ ಮದುವೆಯಾದ ಆರೋಪ! ಕುಟುಂಬಸ್ಥರಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ
ಖಾಸಿಪತಿ ಬಳ್ಳಾರಿ ಮೂಲದ ಯುವತಿಯನ್ನು ಮದುವೆಯಾಗಿದ್ದ. ಮನೆಯವರಿಗೆ ಹೇಳದೆ ಯುವತಿ ಮದುವೆಯಾಗಿದ್ದಾಳಂತೆ. ಮನೆಯವರಿಗೆ ಮಾಹಿತಿ ನೀಡದೆ ಮದುವೆಯಾಗಿದ್ದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಯುವಕನೊಬ್ಬ ವಾಮಾಚಾರ ಮಾಡಿ ಯುವತಿಯನ್ನು ಮದುವೆಯಾದ ಆರೋಪ ಕೇಳಿಬಂದಿದೆ. ವಾಮಾಚಾರ ಮಾಡಿ ಯುವತಿಯನ್ನು ಮದುವೆಯಾಗಿದ್ದಾನೆ ಅಂತ ಯುವಕನಿಗೆ ಯುವತಿಯ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಲಬುರಗಿಯ ಶಹಾಬಜಾರ್ ತಾಂಡಾ ನಿವಾಸಿಯಾಗಿರುವ ಖಾಸಿಪತಿಗೆ ಯುವತಿ ಕುಟುಂಬಸ್ಥರು ಥಳಿಸಿದ್ದಾರೆ. ಖಾಸಿಪತಿ ಬಳ್ಳಾರಿ ಮೂಲದ ಯುವತಿಯನ್ನು ಮದುವೆಯಾಗಿದ್ದ. ಮನೆಯವರಿಗೆ ಹೇಳದೆ ಯುವತಿ ಮದುವೆಯಾಗಿದ್ದಾಳಂತೆ. ಮನೆಯವರಿಗೆ ಮಾಹಿತಿ ನೀಡದೆ ಮದುವೆಯಾಗಿದ್ದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಗೆ ನಾಲ್ವರಿಂದ ಥಳಿತ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಬೇಕರಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ನಾಲ್ವರು ಥಳಿಸಿದ್ದಾರೆ. ಹಲ್ಲೆಯ ದೃಶ್ಯ ಬೇಕರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅ.18 ರಂದು ಘಟನೆ ನಡೆದಿದ್ದು. ತಡವಾಗಿ ಬೆಳಕಿಗೆ ಬಂದಿದೆ. ಸದ್ದಾಂ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.
ನೀರು ಪಾಲಾಗಿದ್ದ ಯುವಕರ ಶವ ಪತ್ತೆ ಉಡುಪಿ: ನೀರು ಪಾಲಾಗಿದ್ದ ಯುವಕರ ಶವ ಪತ್ತೆಯಾಗಿದೆ. ಅನಾಸ್, ಶ್ರೇಯಸ್ ಶವ ಪತ್ತೆಯಾಗಿದೆ. ಮಂಗಳವಾರ ಈಜಲೆಂದು ಮೂವರು ಯುವಕರು ನೀರಿಗೆ ಇಳಿದಿದ್ದರು. ಉಗ್ಗೇಲುಬೆಟ್ಟು ಮಡಿಸಾಲು ಬಳಿ ನೀರುಪಾಲಾಗಿದ್ದರು. ನೀರುಪಾಲಾದವರಿಗಾಗಿ ನದಿಯಲ್ಲಿ ಶೋಧ ನಡೆಸಿದ್ದರು. ಇಂದು ಅನಾಸ್(16), ಶ್ರೇಯಸ್(18) ಶವ ಪತ್ತೆಯಾಗಿದೆ.
ಇದನ್ನೂ ಓದಿ
ರಾಜಸ್ಥಾನದ ಜೈಪುರದಲ್ಲಿ ಗ್ಯಾಂಗ್ರೇಪ್, ಯುವತಿಗೆ ಡ್ರಗ್ಸ್ ನೀಡಿ ಐವರಿಂದ ಪೈಶಾಚಿಕ ಕೃತ್ಯ
ಚುನಾವಣೆಗೂ ಮುನ್ನ ಹೆಚ್ಚಾಯ್ತು ಕಾವು; ಸಭಾಪತಿ ಬಸವರಾಜ ಹೊರಟ್ಟಿ ಕಡೆ ವ್ಯಕ್ತಿಯಿಂದ ಜೀವ ಬೆದರಿಕೆ ಆರೋಪ, ಕೇಸ್ ದಾಖಲು
Published On - 11:48 am, Wed, 20 October 21