ಬೀದರ್ ಮದರಸಾದಲ್ಲಿ ಮೊದಲಿನಿಂದಲೂ ಪೂಜೆ ಸಲ್ಲಿಸಲಾಗುತ್ತಿದೆ: ಸಿದ್ದಲಿಂಗ ಸ್ವಾಮೀಜಿ

| Updated By: ವಿವೇಕ ಬಿರಾದಾರ

Updated on: Oct 07, 2022 | 3:06 PM

ಮೊಹಮದ್ ಗವಾನ್ ಯೂನಿವರ್ಸಿಟಿಯಲ್ಲಿರೋ ಲಕ್ಷ್ಮಿ ದೇವಸ್ಥಾನಕ್ಕೆ ಪೂಜೆ ಮಾಡುವ ಪ್ರತೀತಿ ಮೊದಲಿನಿಂದ ಇದೆ. ಆದರೆ ಇದೀಗ ಮತಾಂದ ಮುಸ್ಲಿಮರು ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದರ್ ಮದರಸಾದಲ್ಲಿ ಮೊದಲಿನಿಂದಲೂ ಪೂಜೆ ಸಲ್ಲಿಸಲಾಗುತ್ತಿದೆ: ಸಿದ್ದಲಿಂಗ ಸ್ವಾಮೀಜಿ
ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ
Follow us on

ಕಲಬುರಗಿ: ಮೊಹಮದ್ ಗವಾನ್ ಯೂನಿವರ್ಸಿಟಿಯಲ್ಲಿರೋ ಲಕ್ಷ್ಮಿ ದೇವಸ್ಥಾನಕ್ಕೆ ಪೂಜೆ ಮಾಡುವ ಪ್ರತೀತಿ ಮೊದಲಿನಿಂದ ಇದೆ. ಆದರೆ ಇದೀಗ ಮತಾಂದ ಮುಸ್ಲಿಮರು ಪೂಜೆಗೆ ಅವಕಾಶ ನೀಡುತ್ತಿಲ್ಲ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದರ್​ (Bidar) ನಗರದಲ್ಲಿ ಪುರಾತತ್ವ ಇಲಾಖೆ ಸಂರಕ್ಷಣೆಯಲ್ಲಿರುವ ಪಾರಂಪರಿಕ ಕಟ್ಟಡ ಮೊಹಮದ್ ಗವಾನ್ ಯೂನಿವರ್ಸಿಟಿ (ಮದರಸಾ)ಯಲ್ಲಿ ಹಿಂದೂಗಳು ಪೂಜೆ ನಡೆಸಿ, ಘೋಷಣೆ ಕೂಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದಲಿಂಗ ಸ್ವಾಮೀಜಿ ಮಹಮ್ಮದ್ ಗವಾನ ಯೂನಿವರ್ಸಿಟಿ ಯಾವುದೇ ಧರ್ಮಕ್ಕೆ ಸೀಮಿತವಾದ ಯೂನಿವರ್ಸಿಟಿಯಲ್ಲಾ. ಆದರೆ ಈ ಯೂನಿವರ್ಸಿಟಿಯಲ್ಲಿ ಮತಾಂದ ಮುಸ್ಲಿಂರು ಒಳ ಸೇರಿದ್ದಾರೆ ಎಂದು ಕಿಡಿಕಾರಿದರು.

ನಮಾಜ ಮಾಡುವದು, ಮದರಸಾ ಶಿಕ್ಷಣ ಕೊಡಿಸುವ ಕೆಲಸ ಆರಂಭಿಸಿದ್ದಾರೆ. ವಿಜಯದಶಮಿ ದಿನ ಪೂಜೆ ಮಾಡಿದ ಹಿಂದುಗಳ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ. ಹಿಂದಿನ ಸಂಪ್ರದಾಯ ಮುಂದುವರಿಯಬೇಕು. ಮತಾಂದ ಮುಸ್ಲಿಂರನ್ನು ವಿವಿಯಿಂದ ಹೊರಗೆ ಹಾಕಬೇಕು. ಮೊದಲಿನಂತೆ ಅವಕಾಶ ನೀಡದೇ ಇದ್ದರೇ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿ ವರ್ಷ ದಸರಾ ಮೆರವಣಿಗೆ ವೇಳೆ ಗವಾನ್ ವಿವಿಗೆ ಹೋಗಿ ಪೂಜೆ ಮಾಡಿ ಬರ್ತಾರೆ: ಆರಗ ಜ್ಞಾನೇಂದ್ರ 

ಈ ಸಂಬಂಧ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ ಪ್ರತಿ ವರ್ಷ ದಸರಾ ಮೆರವಣಿಗೆ ವೇಳೆ ಗವಾನ್ ವಿವಿಗೆ ಹೋಗಿ ಪೂಜೆ ಮಾಡಿ ಬರುತ್ತಾರೆ. ಐದಾರು ಜನರು ಬಿಟ್ಟರೆ ಹೆಚ್ಚು ಜನ ಗವಾನ್ ವಿವಿಗೆ ಹೋಗುತ್ತಿರಲಿಲ್ಲ. ಈ ಬಾರಿ ಹೆಚ್ಚು ಜನ ಹೋಗಿದ್ದಕ್ಕೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈಗಾಗಲೇ ಬೀದರ್​​ ಜಿಲ್ಲಾ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಬೀದರ್​​ನಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ.ಹೆಚ್ಚು ಜನ ಹೋಗಿದ್ದಕ್ಕೆ 9 ಜನರ ವಿರುದ್ಧ FIR ದಾಖಲು ಆಗಿದೆ ಎಂದು ತಿಳಿಸಿದರು.

9 ಜನರ ವಿರುದ್ಧ ಪ್ರಕರಣ ದಾಖಲು 4 ಜನರ ಬಂಧನ

ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ನಗರ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 4 ಜನರನ್ನು ಬಂಧಿಸಲಾಗಿದೆ. ಮುನ್ನಾ, ನರೇಶ್, ಯಲ್ಲಾಲಿಂಗ್ ಮತ್ತು ಪ್ರಕಾಶ್ ಬಂಧಿತರು. ನಗರದ ಗಾಂಧಿಗಂಜ್ ಮಾರ್ಕೆಟ್​​ನಲ್ಲಿರುವ ಹಿಂದೂಗಳ ಬಂಧನ ಹಿನ್ನೆಲೆ ಬಸವೇಶ್ವರ ಮಂದಿರದಲ್ಲಿ ಹಿಂದೂಗಳ ಸಭೆ ಸೇರಿಸಿದ್ದಾರೆ.

ಹಿಂದೂಗಳು 1981 ರಿಂದ ಮಹಮ್ಮದ್ ಗವಾನ್ ಯುನಿವರ್ಸಿಟಿಯಲ್ಲಿ ಪೂಜೆ ಮಾಡುತ್ತಿದ್ದಾರೆ. ಯಾರದು ಅನುಮತಿಯಿಲ್ಲದೆ ಪ್ರತಿ ದಸರಾ ದಿವಸ ಪೂಜೆ ಮಾಡಿಕೊಂಡು ಬಂದಿದ್ದರು. ಅದರಂತೆ ಮೊನ್ನೆ ದಸರಾ ದಿವಸ ಮಹಮ್ಮದ್ ಗವಾನ್ ಯುನಿವರ್ಸಿಟಿಯಲ್ಲಿ ಪೂಜೆ ಮಾಡಿದ್ದರು. ಆದರೆ ಪೂಜೆ ಮಾಡಿದ್ದಕ್ಕೆ ಮಜೀದ್ ಕಮೀಟಿಯಿಂದ ಪೋಲೀಸರಿಗೆ ದೂರು ನೀಡಿದ್ದಾರೆ. ಪುರಾತತ್ವ ಇಲಾಖೆಯ ಆಸ್ತಿಯಲ್ಲಿ ಹಿಂದೂಗಳು ಪೂಜೆ ಮಾಡಿದ್ದಕ್ಕೆ ಮಜೀದ್ ಕಮೀಟಿ ದೂರು ನೀಡಿದೆ. ಆದರೆ ಪುರಾತತ್ವ ಇಲಾಕೆಗೂ ಮಜೀದ್ ಕಮೀಟಿಗೂ ಏನು‌ ಸಂಬಂಧವಿದೆ ಎಂದು ಹಿಂದೂಗಳು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Fri, 7 October 22