ಕಲಬುರಗಿ: ಮುಡಬೂಳ ಗ್ರಾಮದಲ್ಲಿ ವಿಶ್ವನಾಥ್ ಸಂಗಾವಿ ಎಂಬುವವರ ಕೊಲೆ ಪ್ರಕರಣದಲ್ಲಿ ‘ಮಾಮು ಟೀ ಅಂಗಡಿ’ ಸಿನಿಮಾ ನಿರ್ಮಾಪಕ ಶಿವಮಂದ್ರಪ್ಪ ಸಣ್ಣೂರಕರನನ್ನು ಚಿತ್ತಾಪುರ ಪೊಲೀಸರು ಬಂಧಿಸಿದ್ದಾರೆ. ಅದೇ ಚಿತ್ರದಲ್ಲಿ ಆತನ ಪುತ್ರ ಅಭಿಷೇಕ ಕೂಡಾ ನಟಿಸಿದ್ದ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮುಡಬೂಳ ಗ್ರಾಮದಲ್ಲಿ ಭಾನುವಾರ ರಾತ್ರಿ ವಿಶ್ವನಾಥ್ ಸಂಗಾವಿ ಕೊಲೆ ನಡೆದಿತ್ತು. ಸಿನಿ ನಿರ್ಮಾಪಕ ಶಿವಮಂದ್ರಪ್ಪ ಪುತ್ರ ಅಭಿಷೇಕ್ ಸೇರಿ 17 ಜನರ ವಿರುದ್ಧ ದೂರು ದಾಖಲಾಗಿತ್ತು. ಕಲ್ಲು, ಬಡಿಗೆಯಿಂದ ಹೊಡೆದು ವಿಶ್ವನಾಥ್ ಸಂಗಾವಿಯನ್ನು ಕೊಂದಿದ್ದರು. ನಿರ್ಮಾಪಕ ಶಿವಮಂದ್ರಪ್ಪ ಕುಟುಂಬದ 17 ಜನರ ವಿರುದ್ಧ ದೂರು ದಾಖಲಾಗಿದೆ. ಸಂಗಾವಿ ಕುಟುಂಬದವರ ದೂರು ಆಧರಿಸಿ ಈಗ ಶಿವಮಂದ್ರಪ್ಪನ ಬಂಧನವೂ ಆಗಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ವಿದೇಶಕ್ಕೆ ಹಾರಿದ ಆರೋಪಿ ಯುವಕನ ವಿರುದ್ಧ ದೂರು
ಶಿವಮೊಗ್ಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ಯುವಕ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಅಜ್ಜಿ ಮತ್ತು ಮೊಮ್ಮಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಶಿವಮೊಗ್ಗದ ಹೊಳೆಹೊನ್ನೂರು ಸದಾಶಿವಪುರದ ಹಕ್ಕಿ ಪಿಕ್ಕಿ ಕ್ಯಾಂಪ್ ನಲ್ಲಿ ಈ ಹೇಯ ಘಟನೆ ನಡೆದಿತ್ತು. ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಕೂಡ ಆರೋಪಿ ಯುವಕ ವಿದೇಶಕ್ಕೆ ಹಾರಿದ್ದಾನೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇನ್ನು ಆರೋಪಿ ವಿದೇಶಕ್ಕೆ ಪರಾರಿಯಾದ ಬಳಿಕ, ವಿದೇಶದಿಂದಲೇ ಬಾಧಿತ ಅಪ್ರಾಪ್ತೆಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲ ದಿನಗಳ ಹಿಂದೆ ಯುವಕನ ಕಡೆಯವರಿಂದ ಅಪ್ರಾಪ್ತೆ ಮೇಲೆ ಹಲ್ಲೆ ನಡೆಸುವ ಯತ್ನವೂ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ಅಪ್ರಾಪ್ತ ಬಾಲಕಿ ತನ್ನ ಅಜ್ಜಿ ಜೊತೆ ವಾಸವಿದ್ದಾಳೆ. ಆರೋಪಿ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕಿ ಮತ್ತು ಅಜ್ಜಿ ಆಗ್ರಹಿಸಿದ್ದಾರೆ. ಯುವಕ ಮತ್ತು ಆತನ ಕುಟುಂಬದ ವಿರುದ್ಧ ಶಿವಮೊಗ್ಗ ಎಸ್.ಪಿ. ಕಚೇರಿಗೆ ಬಂದ ಸಂತ್ರಸ್ತೆ ದೂರು ನೀಡಿದ್ದಾರೆ. ತನ್ನ ಜೀವನದ ಜೊತೆ ಚೆಲ್ಲಾಟವಾಡಿದ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಅವರಿಬ್ಬರೂ ಒತ್ತಾಯಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.