ಕಲಬುರಗಿ, ಡಿ.22: ಕಲಬುರಗಿಯಲ್ಲಿ ಮತ್ತೆ ಪೊಲೀಸರ ಕಳ್ಳಾಟ ಬಯಲಾಗಿದೆ. ಪೊಲೀಸರೇ ಮಹಿಳಾ ಕಾನ್ಸ್‌ಟೇಬಲ್ (Lady Constable) ಜೀವನದ ಜೊತೆ ಆಟವಾಡಿದ್ದು ಮದುವೆ ಮುರಿದು ಬೀಳಲು ಕಾರಣರಾಗಿದ್ದಾರೆ. ಪೊಲೀಸರೇ ಮಹಿಳಾ ಕಾನ್ಸ್‌ಟೇಬಲ್ ಮೊಬೈಲ್ ಸಿಡಿಆರ್ (Call Detail Record) ಮಾರಾಟ ಮಾಡಿದ್ದಾರೆ. ಮಹಿಳಾ ಕಾನ್ಸ್‌ಟೇಬಲ್ ಒನ್ ಸೈಡ್ ಲವ್ (One Side Love) ಮಾಡ್ತಿದ್ದ ಕಳ್ಳನಿಗೆ ಪೊಲೀಸರೇ ಸಿಡಿಆರ್ ಮಾರಾಟ ಮಾಡಿದ್ದು ಆ ಕಳ್ಳ ಮಹಿಳಾ ಪೇದೆಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಗುವಂತೆ ಮಾಡಿದ್ದಾನೆ. ಕಲಬುರಗಿಯ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ನೊಂದ ಯುವತಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ಗೆ ದೂರು ನೀಡಿದ್ದಾರೆ.
ಅಶೋಕ ನಗರ ಪೊಲೀಸ್ ಠಾಣೆಯ ಕಳ್ಳ ಮಹೇಶ್ ಎಂಬಾತನಿಗೆ ಪೊಲೀಸರೇ ಮಹಿಳಾ ಸಿಬ್ಬಂದಿಯ ಮೊಬೈಲ್ ಸಿಡಿಆರ್ ಮಾರಾಟ ಮಾಡಿದ್ದಾರೆ. ಸಿಡಿಆರ್ ಕೈಗೆ ಸಿಗುತ್ತಿದ್ದಂತೆ ಕಳ್ಳ ಮಹೇಶ್ ಅದನ್ನು ಬಳಸಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಮಹಿಳಾ ಕಾನ್ಸ್‌ಟೇಬಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಸಿಡಿಆರ್ ಕಳುಹಿಸಿ ತಾನು ಲವ್ ಮಾಡುತ್ತಿರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ನಿಶ್ಚಿತಾರ್ಥ ಮಾಡಿಕೊಂಡ ಯುವಕ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ. ಇದರಿಂದ ನೊಂದ ಮಹಿಳಾ ಸಿಬ್ಬಂದಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಎಲ್ಲೆ ಮೀರಿದ ಪ್ರೀತಿ-ಪ್ರೇಮ! ಶ್ರೀಲಂಕಾ ಯುವತಿ, ತೆಲಂಗಾಣ ಯುವಕ ನಡುವೆ ಕಂಕಣಭಾಗ್ಯ
ಇನ್ನು ಪೊಲೀಸರು ಮಹಿಳಾ ಪೇದೆ ಸಿಡಿಆರ್ ಪಡೆಯಲು ಮಾಸ್ಟರ್ ಮೈಂಡ್ ಬಳಸಿದ್ದಾರೆ. ಮಹಿಳಾ ಕಾನ್ಸ್ಟೇಬಲ್ಗೆ ಸಂಬಂಧವೇ ಇರದ ಪ್ರಕರಣದ ತನಿಖೆಗೆ ಸಿಡಿಆರ್ ಬೇಕೆಂದು ಪಡೆದುಕೊಂಡಿದ್ದಾರೆ. ಮಹಿಳಾ ಠಾಣೆಯಲ್ಲಿ ದಾಖಲಾದ ಕ್ರೈಂ ನಂಬರ್ 47 ರ ತನಿಖೆ ಹೆಸರಲ್ಲಿ ಸಿಡಿಆರ್ ಪಡೆದು ಕಳ್ಳನಿಗೆ ಮಾರಾಟ ಮಾಡಿದ್ದಾರೆ. ಆಯುಕ್ತರ ಸೂಚನೆ ಮೇರೆಗೆ ತನಿಖೆ ನಡೆಸಿದ್ದಾಗ ಪೊಲೀಸರ ಸಿಡಿಆರ್ ಕಳ್ಳತನ ಬೆಳಕಿಗೆ ಬಂದಿದೆ. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಮಹಿಳಾ ಕಾನ್ಸ್‌ಟೇಬಲ್ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೂ ಸಿಡಿಆರ್ ಪಡೆದು ದುರುಪಯೋಗ ಮಾಡಲಾಗಿದೆ ಎಂಬುವುದು ತಿಳಿದು ಬಂದಿದ್ದು ಸದ್ಯ ನಗರ ಪೊಲೀಸ್ ಆಯುಕ್ತ ಆರ್ ಚೇತನ್ ಅವರು ಪ್ರಕರಣವನ್ನ ತನಿಖೆಗೆ ನೀಡಿದ್ದಾರೆ. ಡಿಸಿಪಿ ಕನ್ನಿಕಾ ಸಿಕ್ರಿವಾಲ್ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ಮಾಡಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ