ಬೆಂಗಳೂರು: ಜಿಲ್ಲೆಯ ಕಮಲಾಪುರ ಬಳಿ ಖಾಸಗಿ ಬಸ್ ದುರಂತ ಸಂಭವಿಸಿದ್ದು, ಬಸ್ನಲ್ಲಿದ್ದ 7 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ವಿಧಾನಸೌಧದಲ್ಲಿ ಸಾರಿಗೆ ಖಾತೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಒಂದೇ ಕುಟುಂಬದ 35 ಜನ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದು, ಅಪಘಾತ ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಕಳಿಸಿದ್ದೇವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ತನಿಖೆ ಪೂರ್ಣಗೊಂಡ ನಂತರ ಏನಾಗಿದೆ ಎಂದು ಹೇಳುತ್ತೇನೆ. ಖಾಸಗಿ ಬಸ್ ಆಗಿರುವುದರಿಂದ ಪರಿಹಾರದ ಬಗ್ಗೆ ಸಿಎಂ ಜತೆ ಚರ್ಚೆ ಮಾಡಲಾಗುವುದು. ಅಪಾಯ ಇರುವಲ್ಲಿ ರಸ್ತೆ ಸುರಕ್ಷತಾ ಅನುದಾನ ಬಳಸುವ ಕೆಲಸ ಮಾಡಲಾಗುತ್ತದೆ. ಸರ್ಕಾರ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ; IPL 2022: ಐಪಿಎಲ್ 2022 ರಲ್ಲಿ ಮೋಸ ನಡೆದಿದೆ ಎಂದು ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ
ಕಂದಕಕ್ಕ್ ಬಿದ್ದ ಬಸ್ನ್ನು ಎರಡು ಕ್ರೇನ್ ಬಳಸಿ ರಕ್ಷಣಾ ಸಿಬ್ಬಂದಿ ಮೇಲಕ್ಕೆ ಎತ್ತಲಾಗಿದೆ. ಘಟನಾ ಸ್ಥಳದಲ್ಲಿ ಒಂದು ಮಗು ಸೇರಿದಂತೆ ಮೂವರ ಶವಗಳು ಪತ್ತೆಯಾಗಿದ್ದು, ಬಸ್ನಲ್ಲಿ ಇಬ್ಬರ ಶವಗಳು ಸೇರಿ ಸದ್ಯ ಐವರ ಶವಗಳು ಪತ್ತೆಯಾಗಿವೆ. ಇನ್ನೂ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಖಾಸಗಿ ಬಸ್ನ ಇಬ್ಬರು ಚಾಲಕರಾದ ರವೀಂದ್ರ ಜೀಟಪ್ಪನವರ, ರವೀಂದ್ರ, ಪ್ರತಾಪ್ ನಗರ ಬೀದರ್ ನಿವಾಸಿಗಳಾಗಿದ್ದು, ಅಪಘಾತವಾಗುತ್ತಿದ್ತಂತೆ ಗ್ಲಾಸ್ ಒಡೆದು ಹೊರ ಬಂದಿದ್ದಾರೆ. ಬಸ್ ಚಾಲಕ ಸೇರಿ 16 ಗಾಯಾಳುಗಳಿಗೆ ಕಲಬುರಗಿ ನಗರದ ಯುನೈಟೆಡ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತಕ್ಕೀಡಾದ ಖಾಸಗಿ ಬಸ್‌ನಲ್ಲಿದ್ದವರೆಲ್ಲಾ ಸಂಬಂಧಿರಾಗಿದ್ದು, ಹೈದರಾಬಾದ್‌ನ ರಿಸಾಲಾ ಬಜಾರ್, ಓಲ್ಡ್ ಸಿಟಿ ನಿವಾಸಿಗಳಾಗಿದ್ದಾರೆ. ಗೋವಾದಿಂದ ಹೈದರಾಬಾದ್‌ಗೆ ವಾಪಸಾಗುತ್ತಿದ್ದಾಗ ಅಪಘಾತ ನಡೆದಿದೆ.
ಅರ್ಜುನ್ ಕುಮಾರ್(37), ಸರಳಾ(32), ಬಿವಾನ್ ಅರ್ಜುನ್(5), ಶಿವಕುಮಾರ(35), ರವಾಲಿ ಶಿವಕುಮಾರ(30), ದೀಕ್ಷಿತ್ ಶಿವಕುಮಾರ(9), ಅನಿತಾ ರಾಜು(40) ಹೊತ್ತಿಉರಿದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 7 ಜನರು ನಾಪತ್ತೆಯಾಗಿದ್ದಾರೆ. ಮಿಸ್ಸಿಂಗ್ ಆದವರ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದು, ಮಾಹಿತಿ ಸಿಕ್ಕರೆ ಮೃತರ ಹೆಸರು ಗೊತ್ತಾಗೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಟಿವಿ೯ ಗೆ ಪ್ರತ್ಯಕ್ಷದರ್ಶಿ ರಾಜಶೇಖರ್ ಮಾಹಿತಿ ನೀಡಿದ್ದು, ಮೂರು ಜನರನ್ನು ನಾನು ರಕ್ಷಣೆ ಮಾಡಿದ್ದೇನೆ. ದಿಡೀರೆನೆ ಬೆಂಕಿ ಹೊತ್ತಿಕೊಂಡಿತು. ಐದೇ ನಿಮಿಷದಲ್ಲಿ ಬೆಂಕಿ ಆವರಿಸಿಕೊಂಡಿತು. ಕೆಲವರು ಹಿಂದಿನ ಡೋರ್ನಿಂದ ಹೊರಬಂದರು. ಅನೇಕರು ಗೋಳಾಡುತ್ತಿದ್ದರು ಎಂದು ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.