Weight Loss: ಒಂದು ಹೊತ್ತು ಊಟ ಬಿಡುವುದರಿಂದ ತೂಕ ತಗ್ಗಿಸಬಹುದೇ?
ದೇಹದ ತೂಕ (Weight)ದ ವಿಚಾರ ಬಂದಾಗ ನಾವು ಸೇವನೆ ಮಾಡುವ ಆಹಾರ ಗುಣಮಟ್ಟ ಮತ್ತು ಪ್ರಮಾಣ ಬಹಳ ಮುಖ್ಯವಾಗುತ್ತದೆ. ಆಹಾರದಲ್ಲಿ ಪೌಷ್ಟಿಕಾಂಶಗಳು ಯಾವ ಪ್ರಮಾಣದಲ್ಲಿವೆ ಎಂಬುದು ಮತ್ತು ದಿನದಲ್ಲಿ ಎಷ್ಟು ಬಾರಿ ನಮ್ಮ ದೇಹ ಸೇರುತ್ತವೆ ಎಂಬುದನ್ನು ನಿರ್ಧಾರ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ದೇಹದ ತೂಕ (Weight)ದ ವಿಚಾರ ಬಂದಾಗ ನಾವು ಸೇವನೆ ಮಾಡುವ ಆಹಾರ ಗುಣಮಟ್ಟ ಮತ್ತು ಪ್ರಮಾಣ ಬಹಳ ಮುಖ್ಯವಾಗುತ್ತದೆ. ಆಹಾರದಲ್ಲಿ ಪೌಷ್ಟಿಕಾಂಶಗಳು ಯಾವ ಪ್ರಮಾಣದಲ್ಲಿವೆ ಎಂಬುದು ಮತ್ತು ದಿನದಲ್ಲಿ ಎಷ್ಟು ಬಾರಿ ನಮ್ಮ ದೇಹ ಸೇರುತ್ತವೆ ಎಂಬುದನ್ನು ನಿರ್ಧಾರ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಕೆಲವರು ಅನ್ನ ತಿಂದರೆ ದಪ್ಪ ಆಗುತ್ತಾರೆ ಎಂದು ಹೇಳುತ್ತಾರೆ. ಇನ್ನು ಕೆಲವರು ಮುದ್ದೆ ತಿಂದರೆ ದೇಹಕ್ಕೆ ಶಕ್ತಿ ಬರುತ್ತದೆ ಎಂದು ನಂಬಿದ್ದಾರೆ. ಈಗಿನ ಜೀವನಶೈಲಿಗೆ ಜನರು ಹೊಂದಿಕೊಂಡಿರುವ ಹಾಗೆ ಮನೆಯ ಆಹಾರಕ್ಕಿಂತ ಮನೆ ಹೊರಗಿನ ಜಂಕ್ ಫುಡ್ ಸೇವನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಇದರಿಂದ ರಾತ್ರಿಯ ಸಮಯದಲ್ಲಿ ಊಟ ಮಾಡಬೇಕು ಎಂದು ಅನಿಸುವುದಿಲ್ಲ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ.
ಸಮತೋಲಿತ ಡಯಟ್ ಕೇವಲ ತೂಕನಷ್ಟ ಮಾಡುವುದಷ್ಟೇ ಅಲ್ಲದೆ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾದರೆ ಯಾವ ಊಟವನ್ನು ಬಿಟ್ಟರೆ ನೀವು ತೂಕವನ್ನು ಇಳಿಸಿಕೊಳ್ಳಬಹುದು. ನಿತ್ಯವು ಯಾವುದಾದರೊಂದು ಹೊತ್ತು ಊಟ ಬಿಡುವುದರಿಂದ ತೂಕ ಇಳಿಕೆಗೆ ಸಹಾಯವಾಗಲಿದೆ.
ರಾತ್ರಿ ಊಟ ಬಿಡಬಾರದು: ನಾವು ಆರೋಗ್ಯಕರವಾಗಿ ಬದುಕಲು ಮತ್ತು ದಿನ ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಸಕ್ರಿಯತೆಯಿಂದ ಪಾಲ್ಗೊಳ್ಳಲು ಬೆಳಗಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿರುವ ಆಹಾರಗಳನ್ನು ಸೇವನೆ ಮಾಡಿ ನಂತರ ಕ್ಯಾಲರಿಗಳ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಬಂದರೆ ದೇಹಕ್ಕೆ ಸಾಕಷ್ಟು ಒಳ್ಳೆಯದು.
ಮಧ್ಯಾಹ್ನ 3ರೊಳಗೆ ಊಟ ಮುಗಿಸಿ: ಮಧ್ಯಾಹ್ನ 3 ರೊಳಗೆ ಊಟ ಮಾಡುವುದರಿಂದ ತೂಕ ಕಡಿಮೆ ಮಾಡಬಹುದು. 250 ಮಂದಿಯನ್ನು ಅಧ್ಯಯನಕ್ಕೊಳಪಡಿಸಿದಾಗ, ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಆಹಾರವನ್ನು ತಿಂದರೆ ಇಡೀ ದಿನ ಕಡಿಮೆ ಹಸಿವು ಇರುವ ಕುರಿತು ಹೇಳಿಕೊಂಡಿದ್ದಾರೆ. ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಪುರುಷರ ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
ಅಧ್ಯಯನ ಏನು ಹೇಳುತ್ತೆ?: ರಾತ್ರಿಯ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಮಲಗುವ ಅಭ್ಯಾಸ ಇದ್ದವರು ಸುಮಾರು ಒಂದು ವರ್ಷದ ಅವಧಿಯಲ್ಲಿ ಶೇಕಡ 10% ದೇಹದ ತೂಕವನ್ನು ಹೆಚ್ಚು ಮಾಡಿಕೊಂಡು ಸೊಂಟದ ಭಾಗದಲ್ಲಿ ಬೊಜ್ಜು ತುಂಬಿಕೊಂಡ ಬಗ್ಗೆ ಮತ್ತು ಅತಿಯಾದ ದೇಹದ ತೂಕವನ್ನು ಹೊಂದಿದ ಕಾರಣದಿಂದ ಅನಾರೋಗ್ಯಕರ ಜೀವನಶೈಲಿಯನ್ನು ಹೊಂದಿದ್ದರು.
ರಾತ್ರಿ ಊಟ ಬಿಟ್ಟರೆ ದೇಹದ ತೂಕ ಏಕೆ ಹೆಚ್ಚಾಗುತ್ತದೆ?: ಅಧ್ಯಯನ ಹೇಳುವ ಪ್ರಕಾರ ರಾತ್ರಿಯ ಸಮಯದಲ್ಲಿ ಊಟ ಬಿಡುವ ಕಾರಣದಿಂದ ಜನರು ಸಂಜೆಯ ಸಮಯದಲ್ಲಿ ಅನಾರೋಗ್ಯಕರ ಸ್ನ್ಯಾಕ್ಸ್ ಸೇವನೆಯ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರಿಂದ ರಾತ್ರಿ ಊಟದ ಸಮಯಕ್ಕೆ ಸರಿಯಾಗಿ ಹೊಟ್ಟೆ ಹಸಿವು ಆಗುವುದಿಲ್ಲ. ಆದರೆ ಜನರಿಗೆ ತಾವು ಅನುಸರಿಸುತ್ತಿರುವ ಆಹಾರ ಪದ್ಧತಿ ನಿಜಕ್ಕೂ ಕೆಟ್ಟ ಪರಿಣಾಮವನ್ನು ಆರೋಗ್ಯದ ಮೇಲೆ ಉಂಟು ಮಾಡುತ್ತದೆ.
ಈ ಮೇಲಿನ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ