PSI Scam Case: ಜಾಮೀನು ಪಡೆದು ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್​ಗೆ ಕಾಂಗ್ರೆಸ್ ನಾಯಕರಿಂದ ಸತ್ಕಾರ

| Updated By: ಆಯೇಷಾ ಬಾನು

Updated on: Dec 17, 2022 | 10:16 AM

ಮಾಜಿ MLC ಅಲ್ಲಮಪ್ರಭು ಪಾಟೀಲ್ ಸೇರಿ ಅನೇಕರು ಮಹಾಂತೇಶ್ ಪಾಟೀಲ್​ಗೆ ಸತ್ಕಾರ ಮಾಡಿ ಜೈಲಿನಿಂದ ಹೊರ ಬಂದಿದ್ದಕ್ಕೆ ಸಂಭ್ರಮಾಚರಣೆ ಮಾಡಿದ್ದಾರೆ.

PSI Scam Case: ಜಾಮೀನು ಪಡೆದು ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್​ಗೆ ಕಾಂಗ್ರೆಸ್ ನಾಯಕರಿಂದ ಸತ್ಕಾರ
ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್​ಗೆ ಸತ್ಕಾರ
Follow us on

ಕಲಬುರಗಿ: 545 PSI ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಆರೋಪಿ ಮಹಾಂತೇಶ್ ಪಾಟೀಲ್​ಗೆ ಜಾಮೀನು ಸಿಕ್ಕಿದೆ. ‘ಕೈ’ ಮುಖಂಡ ಮಹಾಂತೇಶ್ ನಿನ್ನೆ(ಡಿ.17) ಜೈಲಿನಿಂದ ಮನೆಗೆ ಬಂದಿದ್ದಾರೆ. ಈ ಹಿನ್ನೆಲೆ ಕೆಲ ಕಾಂಗ್ರೆಸ್ ಮುಖಂಡರು ಮಹಾಂತೇಶ್ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ಜಾಮೀನಿನ ಮೇಲೆ ಹೊರಗೆ ಬರ್ತಿದ್ದಂತೆ ಮಹಾಂತೇಶ್​ಗೆ ಅತಿಥಿ ಸತ್ಕಾರ ನಡೆದಿದೆ.

ಮಾಜಿ MLC ಅಲ್ಲಮಪ್ರಭು ಪಾಟೀಲ್ ಸೇರಿ ಅನೇಕರು ಮಹಾಂತೇಶ್ ಪಾಟೀಲ್​ಗೆ ಸತ್ಕಾರ ಮಾಡಿ ಜೈಲಿನಿಂದ ಹೊರ ಬಂದಿದ್ದಕ್ಕೆ ಸಂಭ್ರಮಾಚರಣೆ ಮಾಡಿದ್ದಾರೆ. ಕಲಬುರಗಿ ನಗರದಲ್ಲಿರುವ ಆರೋಪಿ ಮಹಾಂತೇಶ್ ಪಾಟೀಲ್ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಇನ್ನು ಮಹಾಂತೇಶ್ ಪಾಟೀಲ್ ಸಹೋದರ ರುದ್ರಗೌಡ ಪಾಟೀಲ್ ಇಡಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅಕ್ರಮವಾಗಿ ಪಿಎಸ್​ಐ ಪರೀಕ್ಷೆ ಬರೆಯಲು ಸಹಾಯ ಮಾಡಿದ ಆರೋಪದ ಮೇಲೆ ಏಪ್ರಿಲ್​ನಲ್ಲಿ ಮಹಾಂತೇಶ್ ಪಾಟೀಲ್​ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಡಿ.15ರಂದು ಕಲಬುರಗಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ: PSI Recruitment Scam: ಅಮೃತ್ ಪಾಲ್ ವಿರುದ್ಧ ಪ್ರಾಸಿಕ್ಯೂಷನ್​ಗೆ ಸರ್ಕಾರ ಅನುಮತಿ

PSI Recruitment Scam: ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣ (PSI Recruitment Scam) ಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಕಿಂಗ್ ಪಿನ್​​ ರುದ್ರಗೌಡ ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್​ಗೆ ಕಲಬುರಗಿ ಹೈಕೋರ್ಟ್​ ಪೀಠದಿಂದ ಜಾಮೀನು ಮಂಜೂರು ಮಾಡಲಾಗಿದೆ. ಜಿಲ್ಲೆಯ ಚೌಕ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್​ನಲ್ಲಿ ಜಾಮೀನು ನೀಡಲಾಗಿದೆ. ಪ್ರಕರಣದಲ್ಲಿ ಕಿಂಗ್ ಪಿನ್ ರುದ್ರಗೌಡ ಪಾಟೀಲ್​ನ್ನು ಈ ಹಿಂದೆ ಅರೆಸ್ಟ್ ಮಾಡಲಾಗಿತ್ತು. ಸಹಚರರಿಬ್ಬರಿಗ ರುದ್ರಗೌಡ ಜೊತೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ. ಬಂಧಿತ ಆರೋಪಿಗಳು ಬ್ಲೂಟೂತ್ಗಳನ್ನು ಸರಬರಾಜು ಮಾಡುತ್ತಿದ್ದರು. ಜೊತೆಗೆ, ರುದ್ರಗೌಡ ಪಾಟೀಲ್ ಜೊತೆ ಸೇರಿ ಅಭ್ಯರ್ಥಿಗಳ ಜೊತೆ ಡೀಲ್ ಮಾಡುತ್ತಿದ್ದರು. ಅಕ್ರಮವಾಗಿ ಪರೀಕ್ಷೆ ಬರೆಯಲು ಸಿದ್ದರಿದ್ದವರನ್ನು ಹುಡುಕಿ ರುದ್ರಗೌಡ ಪಾಟೀಲ್​ಗೆ ಭೇಟಿ ಮಾಡಿಸುತ್ತಿದ್ದರು.

ಎಸ್​ಐ ಹಗರಣದ ಪ್ರಮುಖ ಆರೋಪಿಗೆ ಜಾಮೀನು

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿಗೆ ಹಾಗೂ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಅಭ್ಯರ್ಥಿಗೆ ನ್ಯಾಯಾಲಯವು ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ. ಪಿಎಸ್​ಐ ಹಗರಣದ ಎ1 ಜಾಗೃತ್ ಹಾಗೂ ಮಹಿಳಾ ಕೋಟಾದಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದ ರಚನಾಗೆ ಜಾಮೀನು ಸಿಕ್ಕಿದೆ. ಆರೋಪಿಗಳ ಪರ ವಕೀಲ ಶ್ಯಾಮ್​ಸುಂದರ್​ ಅವರು ವಾದ ಮಾಡಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:11 am, Sat, 17 December 22