ಕಲಬುರಗಿ: ನಾನು ನಿಮ್ಮ ಸೋದರಮಾವನೆಂದು ಪ್ರಭಾರಿ ಮುಖ್ಯೋಪಾಧ್ಯಾಯನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

| Updated By: ವಿವೇಕ ಬಿರಾದಾರ

Updated on: Sep 03, 2023 | 8:44 AM

ನಾನು ನಿಮ್ಮ ಸೋದರಮಾವ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹೇಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುವದು, ಮೈ ಮುಟ್ಟುವದನ್ನು ಮಾಡುತ್ತಿದ್ದ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯನನ್ನು ಪೊಲೀಸರು ವಶಕ್ಕೆ ಪಡೆದುಕೊಂದಿದ್ದಾರೆ.

ಕಲಬುರಗಿ: ನಾನು ನಿಮ್ಮ ಸೋದರಮಾವನೆಂದು ಪ್ರಭಾರಿ ಮುಖ್ಯೋಪಾಧ್ಯಾಯನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ವಾಡಿ ಪೊಲೀಸ್​ ಠಾಣೆ
Follow us on

ಕಲಬುರಗಿ: ವಿದ್ಯಾರ್ಥಿನಿಯರಿಗೆ (Student) ಮತ್ತು ಅತಿಥಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಭಾರಿ ಮುಖ್ಯೋಪಾಧ್ಯಾಯನನ್ನು (Headmaster) ವಾಡಿ ಠಾಣೆೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಠಾಣಾ ವ್ಯಾಪ್ತಿಯಲ್ಲಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುವದು, ಮೈ ಮುಟ್ಟುವದನ್ನು ಮಾಡುತ್ತಿದ್ದನು.

ಅಲ್ಲದೇ ನಾನು ನಿಮ್ಮ ಸೋದರಮಾವ, ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಹೇಳುತ್ತಿದ್ದನಂತೆ. ಹೀಗೆಯೇ ಅತಿಥಿ ಶಿಕ್ಷಕಿಗೂ ಕೂಡಾ ಪ್ರಭಾರಿ ಮುಖ್ಯೋಪಾಧ್ಯಾಯ ಕಿರುಕುಳ ನೀಡುತ್ತಿದ್ದನಂತೆ. ಈತನಿಂದ ರೋಸಿ ಹೋದ ವಿದ್ಯಾರ್ಥಿನಿಯರು ಬಿಇಒಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯರ ದೂರು ಪಡೆದ ಚಿತ್ತಾಪುರ ಬಿಇಒ, ವಾಡಿ ಪೊಲೀಸ್ ಠಾಣೆೆಗೆ ದೂರು ನೀಡಿದ್ದಾರೆ. ಸದ್ಯ ವಾಡಿ ಠಾಣೆ ಪೊಲೀಸರು ಆರೋಪಿ ಪ್ರಭಾರಿ ಮುಖ್ಯೋಪಾಧ್ಯಾಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 ನನ್ನ ಮಗಳ ವಿಚಾರಕ್ಕೆ ಬರಬೇಡ ಎಂದಿದ್ದಕ್ಕೆ ಬಾಲಕಿ ತಂದೆಯ ಕೊಲೆ

ಬೆಂಗಳೂರು: ನನ್ನ ಮಗಳ ವಿಚಾರಕ್ಕೆ ಬರಬೇಡ ಎಂದು ಬುದ್ದಿ ಹೇಳಲು ಹೋಗಿದ್ದ ತಂದೆಯನ್ನೇ (Father) ಕೊಲೆ ಮಾಡಿರುವ ಘಟನೆ ಅಶೋಕ್ ನಗರ ಪೊಲೀಸ್  ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ನಡೆದಿದೆ. ಅನ್ವರ್ ಹುಸೇನ್ ಕೊಲೆಯಾದ ವ್ಯಕ್ತಿ. ಝಹೀದ್ ಕೊಲೆಗೈದ ಆರೋಪಿ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ದಿನಗಳಿಂದ ಆರೋಪಿ ಝಹೀದ್ ಪ್ರೀತಿಸುವಂತೆ 15 ವರ್ಷದ ಅಪ್ರಾಪ್ತ ಬಾಲಕಿಯ ಬೆನ್ನು ಬಿದ್ದಿದ್ದನು. ಈ ವಿಚಾರವನ್ನು ಅಪ್ರಾಪ್ತ ಬಾಲಕಿ ತಂದೆ ಅನ್ವರ್ ಹುಸೇನ್​ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಅನ್ವರ್​ ಹುಸೇನ್​​ ಮೂರು ತಿಂಗಳ ಹಿಂದೆಯೇ ಆರೋಪಿ ಝಹೀದ್​​ಗೆ ಬುದ್ದಿ ಹೇಳಿದ್ದರು. ಆದರೂ ಮಾತು ಕೇಳದ ಝಹೀದ್ ಪ್ರೀತಿಸುವಂತೆ ಮತ್ತೆ ದುಂಬಾಲು ಬಿದ್ದಿದ್ದನು.

ಇದನ್ನೂ ಓದಿ: ಮಗಳನ್ನು ಹತ್ಯೆಗೈದಿದ್ದ ತಂದೆಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಈ ವಿಚಾರವನ್ನು ಝಹೀದ್ ಅಣ್ಣ ಬಿಲಾಲ್ ಹಾಗೂ ಕುಟುಂಬಸ್ಥರಿಗೆ ತಿಳಿಸಲೆಂದು ನಿನ್ನೆ (ಸೆ.01) ರಾತ್ರಿ ಅನ್ವರ್​ ಹುಸೇನ್ ಆರೋಪಿಯ ಮನೆ ಬಳಿ ಹೋಗಿದ್ದಾರೆ. ಕುಟಂಬಸ್ಥರೊಂದಿಗೆ ಅನ್ವರ್​​ ಹುಸೇನ್​ ಮಾತನಾಡುತ್ತಿರುವಾಗಲೇ, ಝಹೀದ್ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ಏಕಾಏಕಿ ಅನ್ವರ್ ಹುಸೇನ್ ಕುತ್ತಿಗೆಗೆ ಇರಿದಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಅನ್ವರ್​ ಹುಸೇನ್​​ರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅನ್ವರ್​ ಹುಸೇನ್ ಮೃತಪಟ್ಟಿದ್ದಾರೆ. ಇನ್ನು ಪ್ರಕರಣ ಸಂಬಂಧ ಝಹೀದ್ ಅಣ್ಣ ಬಿಲಾಲ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ತಲೆಮರಿಸಿಕೊಂಡಿರುವ ಅರೋಪಿ ಝಹೀದ್​ಗಾಗಿ ಹುಡಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:41 am, Sun, 3 September 23