ಕಲಬುರಗಿ: ಬೃಹತ​​ ಶೋಭಾ ಯಾತ್ರೆ, ಭಾಷಣಕ್ಕೆ ಅವಕಾಶ ಕೊಟ್ಟಿಲ್ಲವೆಂದು ಜಿಲ್ಲಾಡಳಿತ ವಿರುದ್ಧ ಗರಂ ಆದ ಸಿದ್ದಲಿಂಗ ಸ್ವಾಮೀಜಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 24, 2022 | 7:49 PM

ಅಂಗಡಿ ಮುಗ್ಗಟ್ಟು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಶೋಭಾ ಯಾತ್ರೆಯಲ್ಲಿ ಹಿಂದೂಗಳು ಭಾಗಿಯಾಗಿದ್ದು, ಕೇಸರಿ ಧ್ವಜ ಹಿಡಿಕೊಂಡು ಜೈ ಶ್ರೀರಾಮ ಘೋಷಣೆಯೊಂದಿಗೆ ಡಿಜೆ ಸೌಂಡ್​ಗೆ ಯುವಕರು ಹೆಜ್ಜೆ ಹಾಕಿದ್ದಾರೆ.

ಕಲಬುರಗಿ: ಬೃಹತ​​ ಶೋಭಾ ಯಾತ್ರೆ, ಭಾಷಣಕ್ಕೆ ಅವಕಾಶ ಕೊಟ್ಟಿಲ್ಲವೆಂದು ಜಿಲ್ಲಾಡಳಿತ ವಿರುದ್ಧ ಗರಂ ಆದ ಸಿದ್ದಲಿಂಗ ಸ್ವಾಮೀಜಿ
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ
Follow us on

ಕಲಬುರಗಿ: ಇಂದು‌ ಶೋಭಾಯಾತ್ರೆಯಲ್ಲಿ ಭಾಷಣಕ್ಕೆ ಅವಕಾಶ ಕೊಟ್ಟಿಲ್ಲ. ಇಂದು ಜಿಲ್ಲಾಡಳಿತ ನನ್ನ ಭಾಷಣಕ್ಕೆ ನಿರ್ಬಂಧವನ್ನು ಹೇರಿದೆ ಎಂದು ಜಿಲ್ಲೆಯ ಆಳಂದದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಗರಂ ಆದರು. ಭಾರತದದ ಸಂವಿಧಾನವೆ ಹೇಳಿದೆ ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೂ ಕೂಡಾ ನಮ್ಮ‌ ಭಾಷಣಕ್ಕೆ ಪೊಲೀಸರು ಅಡ್ಡಿಪಡಿಸಿದ್ದಾರೆ ಇದನ್ನ ಖಂಡಿಸುವೆ. ಆಳಂದ ಕಾಶ್ಮೀರ ಅಥವಾ ಕೇರಳದಲ್ಲಿಲ್ಲ. ಆಳಂದ ಇರೋದು ಕರ್ನಾಟಕದಲ್ಲಿ. 2023ರ ಜ.23ರಂದು ಬೃಹತ್ ಹಿಂದೂ ಇಲ್ಲಿಯೇ ಹಮ್ಮಿಕೊಂಡಿದ್ದೇವೆ. ಅದನ್ನ ತಡೆಯಲು ಯಾವ ಶಕ್ತಿಯಿಂದಲೂ‌ ಸಾಧ್ಯವಿಲ್ಲ. 1 ಲಕ್ಷ ಜನ‌ರನ್ನು ಸೇರಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.

ಶ್ರೀರಾಮನವಮಿ ಅಂಗವಾಗಿ ಶ್ರೀರಾಮಸೇನೆ ನೇತೃತ್ವದಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬೃಹತ​​ ಶೋಭಾ ಯಾತ್ರೆ ನಡೆಯಿತು. ಪಟ್ಟಣದ ರಾಮ ಮಾರುಕಟ್ಟೆಯಲ್ಲಿ ಯಾತ್ರೆಗೆ ಚಾಲನೆ ನೀಡಿದ್ದು, ಸಂಜೆ ಗಣೇಶ್ ಮಂದಿರ ಬಳಿ ಅಂತ್ಯವಾಯಿತು. ಯಾತ್ರೆಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ವಿವಿಧ ಮಠಗಳ ಸ್ವಾಮೀಜಿಗಳು, ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಶೋಭಾ ಯಾತ್ರೆ ಮಾರ್ಗದಲ್ಲಿರುವ ಮಸೀದಿ, ದರ್ಗಾಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಅಂಗಡಿ ಮುಗ್ಗಟ್ಟು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಶೋಭಾ ಯಾತ್ರೆಯಲ್ಲಿ ಹಿಂದೂಗಳು ಭಾಗಿಯಾಗಿದ್ದು, ಕೇಸರಿ ಧ್ವಜ ಹಿಡಿಕೊಂಡು ಜೈ ಶ್ರೀರಾಮ ಘೋಷಣೆಯೊಂದಿಗೆ ಡಿಜೆ ಸೌಂಡ್​ಗೆ ಯುವಕರು ಹೆಜ್ಜೆ ಹಾಕಿದ್ದಾರೆ. ಕಳೆದ ಮಾರ್ಚ್ 1 ರಂದು ಲಾಡ್ಲೆ ಮಸಾಕ್ ದರ್ಗಾದಲ್ಲಿರುವ ಶಿವನ ಲಿಂಗ ಶುದ್ದೀಕರಣ ವೇಳೆ ಆಳಂದ ಪಟ್ಟಣದಲ್ಲಿ ಗಲಾಟೆ ನಡೆದಿತ್ತು. ಈ ಹಿನ್ನಲೆ ಇಂದು ಕೂಡ ಆಳಂದ ಪಟ್ಟಣದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿದೆ.

ಇದನ್ನೂ ಓದಿ:

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರದ 3ಡಿ ದೃಶ್ಯ ನೋಡಿ ವಿಮರ್ಶೆ ನೀಡಿದ ಆರ್​ಜಿವಿ

Virat Kohli: ವಿರಾಟ್ ಕೊಹ್ಲಿ ಕಳಪೆ ಫಾರ್ಮ್​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ RCB ಮಾಜಿ ನಾಯಕ

Published On - 4:43 pm, Sun, 24 April 22