AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ಕೊವಿಡ್​ನಿಂದ ಮೃತಪಟ್ಟ ನೌಕರನ ಮೊಬೈಲ್ ಬಳಸಿದ್ದ ಕಿಂಗ್​ಪಿನ್​​! ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ಆರೋಪಿಗಳು ನೇಮಕಾತಿ ಅಕ್ರಮಕ್ಕೆ ಬೇರೆಯವರ ಮೊಬೈಲ್ನ ಬಳಸಿದ್ದಾರೆ. ತಮ್ಮ ಮೊಬೈಲ್ ಬಳಸಿದರೆ ಸಿಕ್ಕಿಹಾಕಿಕೊಳ್ಳುತ್ತೇವೆ ಅಂತ ಬೇರೆಯವರ ನಂಬರ್ ಬಳಸಿದ್ದಾರೆ. ಡೀಲ್ ಮಾಡುವಾಗಲೇ ಬೇರೆಯವರ ಹೆಸರಲ್ಲಿ ಇರುವ ಸಿಮ್ ತರಬೇಕು ಅಂತ ಕಿಂಗ್ಪಿನ್ಗಳು ಹೇಳುತ್ತಿದ್ದರು.

PSI Recruitment Scam: ಕೊವಿಡ್​ನಿಂದ ಮೃತಪಟ್ಟ ನೌಕರನ ಮೊಬೈಲ್ ಬಳಸಿದ್ದ ಕಿಂಗ್​ಪಿನ್​​! ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಪೊಲೀಸ್ ಠಾಣೆ ಸೆಲ್​ನಲ್ಲಿರುವ ಕಿಂಗ್​ಪಿನ್​ಗಳು
TV9 Web
| Updated By: sandhya thejappa|

Updated on:Apr 25, 2022 | 10:52 AM

Share

ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ಕಿಂಗ್​ಪಿನ್​ ಆಗಿರುವ ರುದ್ರಗೌಡ ಪಾಟೀಲ್ ಕೊವಿಡ್​ನಿಂದ (Covid) ಮೃತಪಟ್ಟ ನೌಕರ ಲಕ್ಷ್ಮೀಪುತ್ರ ಎಂಬುವವರ ಮೊಬೈಲ್​ನ ಬಳಸಿದ್ದಾನೆ. ಜೊತೆಗೆ ತನ್ನ ಬಳಿಯೇ ಮೊಬೈಲ್​ನ ಇಟ್ಟುಕೊಂಡಿದ್ದ ರುದ್ರಗೌಡ ಪಾಟೀಲ್, ಅದೇ ಮೊಬೈಲ್​ನಿಂದ ನೇಮಕಾತಿಯಲ್ಲಿ ಅಕ್ರಮವೆಸಗಿದ್ದಾನೆ.

ಆರೋಪಿಗಳು ನೇಮಕಾತಿ ಅಕ್ರಮಕ್ಕೆ ಬೇರೆಯವರ ಮೊಬೈಲ್​ನ ಬಳಸಿದ್ದಾರೆ. ತಮ್ಮ ಮೊಬೈಲ್ ಬಳಸಿದರೆ ಸಿಕ್ಕಿಹಾಕಿಕೊಳ್ಳುತ್ತೇವೆ ಅಂತ ಬೇರೆಯವರ ನಂಬರ್ ಬಳಸಿದ್ದಾರೆ. ಡೀಲ್ ಮಾಡುವಾಗಲೇ ಬೇರೆಯವರ ಹೆಸರಲ್ಲಿ ಇರುವ ಸಿಮ್ ತರಬೇಕು ಅಂತ ಕಿಂಗ್ಪಿನ್ಗಳು ಹೇಳುತ್ತಿದ್ದರು. ಬಂಧಿತ ಗನ್ ಮ್ಯಾನ್ ಹಯ್ಯಾಳೆ ದೇಸಾಯಿ ತನ್ನ ಸ್ನೇಹಿತ ಪೇದೆ ರುದ್ರಗೌಡ ಮೊಬೈಲ್ ತಗೆದುಕೊಂಡು ಹೋಗಿದ್ದ. ಮೊಬೈಲ್ ಕೊಟ್ಟಿದ್ದ ಶರಣಬಸಪ್ಪ ಮತ್ತು ಪೇದೆ ರುದ್ರಗೌಡರನ್ನು ಸಿಐಡಿ ಪೊಲೀಸರು ಸದ್ಯ ಬಂಧಿಸಿದ್ದಾರೆ.

ಪೇದೆ ರುದ್ರಗೌಡ ಮತ್ತು ಗನ್​ ಮ್ಯಾನ್ ಹಯ್ಯಾಳಿ ದೇಸಾಯಿ ಆತ್ಮೀಯ ಸ್ನೇಹಿತರು. ಪೇದೆ ರುದ್ರಗೌಡ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ. ಆಗ ಹಯ್ಯಾಳಿ ದೇಸಾಯಿ ರುದ್ರಗೌಡನ ಮೊಬೈಲ್ ತಗೆದುಕೊಂಡು ಹೋಗಿದ್ದ.

ಈ ಪ್ರಕರಣದಲ್ಲಿ ಸದ್ಯ ಸುಮಾರು 15 ಜನರು ಅರೆಸ್ಟ್ ಆಗಿದ್ದಾರೆ. ಇಂದು ಸಿಐಡಿ ಡಿಜಿ ಪಿಎಸ್ ಸಂದು ಕಲಬುರಗಿಗೆ ಆಗಮಿಸುತ್ತಾರೆ. ತನಿಖೆಯ ಬಗ್ಗೆ ಸಿಐಡಿ ಡಿಜಿ ಸಂಪೂರ್ಣ ವಿವರ ಪಡೆಯುತ್ತಾರೆ.

ಇದನ್ನೂ ಓದಿ

Stock Market Updates: ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ ತಲ್ಲಣ; ಟಾಟಾ ಸ್ಟೀಲ್ ಷೇರು ತಲಾ 50 ರೂ. ಕುಸಿತ

PBKS vs CSK: ಐಪಿಎಲ್​​ನಲ್ಲಿಂದು ಪಂಜಾಬ್-ಚೆನ್ನೈ ಮುಖಾಮುಖಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಜಡೇಜಾ ಪಡೆ

Published On - 10:40 am, Mon, 25 April 22