ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಆರೋಪಿಗಳಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ, ಜಾಮೀನು ನೀಡದಂತೆ ಸಿಐಡಿ ಮನವಿ

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಆರೋಪಿಗಳಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ, ಜಾಮೀನು ನೀಡದಂತೆ ಸಿಐಡಿ ಮನವಿ
ಮಹಾಂತೇಶ್ ಪಾಟೀಲ

ಆರೋಪಿಗಳು ಸಂಘಟಿತ ಅಪರಾಧ ಮಾಡಿದ್ದಾರೆ. ಜಾಮೀನು ನೀಡಿದರೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗಳಿಗೆ ಬೇಲ್ ನೀಡದಂತೆ ಕೋರ್ಟ್ಗೆ ಮನವಿ ಮಾಡಿದ್ದು ಸಿಐಡಿ ಅಧಿಕಾರಿಗಳು ಸಲ್ಲಿಸಿದ ಅರ್ಜಿ ಸಂಜೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.

TV9kannada Web Team

| Edited By: Ayesha Banu

Apr 25, 2022 | 3:15 PM

ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಪ್ರಕರಣದ ಆರೋಪಿಗಳಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಅರ್ಚನಾ ಹೊನಗೇರಿ, ಕಾಶಿನಾಥ್, ಸುನಂದಾ ಅವರು ಕಲಬುರಗಿ ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಸಿಐಡಿ ಮನವಿ ಮಾಡಿದೆ.

ಆರೋಪಿಗಳು ಸಂಘಟಿತ ಅಪರಾಧ ಮಾಡಿದ್ದಾರೆ. ಜಾಮೀನು ನೀಡಿದರೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗಳಿಗೆ ಬೇಲ್ ನೀಡದಂತೆ ಕೋರ್ಟ್ಗೆ ಮನವಿ ಮಾಡಿದ್ದು ಸಿಐಡಿ ಅಧಿಕಾರಿಗಳು ಸಲ್ಲಿಸಿದ ಅರ್ಜಿ ಸಂಜೆ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇನ್ನು ಸಿಐಡಿ ಡಿಜಿಪಿ ಪಿ.ಎಸ್.ಸಂಧು, ಎಸ್ಪಿ ರಾಘವೇಂದ್ರ ಹೆಗಡೆ ಪ್ರಕರಣದ ಬಗ್ಗೆ ನಿಖಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಕಲಬುರಗಿಯಲ್ಲಿರುವ ಈಶಾನ್ಯ ವಲಯದ ಐಜಿಪಿ ಕಚೇರಿಯಲ್ಲಿ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ.

ಬಗೆದಷ್ಟು ಬಯಲಾಗ್ತಿದೆ PSI ಬ್ರಹ್ಮಾಂಡ ಭ್ರಷ್ಟಾಚಾರ ಮೆಡಿಕಲ್‌ ಟೆಸ್ಟ್ ಮುಗಿಸಿ ಬರುವಾಗ ಮಹಾಂತೇಶ್ ಪಾಟೀಲ ಮಾಧ್ಯಮಗಳ ಮೇಲೆ ಧಿಮಾಕು ತೋರಿಸಿದ್ದರು. ರುದ್ರಗೌಡ ಅರೆಸ್ಟ್ ವೇಳೆ ಬಿರಿಯಾನಿ ಬೇಕು ಅಂದಿದ್ದರು. ಸೆಲ್‌ನಲ್ಲೇ ಚೇರ್‌ ಕೊಟ್ಟು ರಾಜಾತಿಥ್ಯ ಮಾಡಿದ್ದಾರೆ. ರುದ್ರಗೌಡ ಬಿಂದಾಸ್ ಆಗಿ ಬಾಸ್‌ ರೀತಿ ಕುಳಿತಿರೋ ಫೋಟೋ ವೈರಲ್ ಆಗಿದ್ದೇ ತಡ, ಕಲಬುರಗಿ ಎಂ.ಬಿ.ನಗರ ಠಾಣೆ ಸಿಬ್ಬಂದಿ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದಿದ್ದಾರೆ. ಸೆಲ್ ಅನ್ನ ಸಿಐಡಿ ಸುಪರ್ದಿಗೆ ನೀಡಲಾಗಿದೆ. ಅವರೇ ಕುರ್ಚಿ ನೀಡಿರಬೇಕು ಅನ್ನೋ ಉಡಾಫೆ ಉತ್ತರ ಕೊಟ್ಟಿದ್ದಾರೆ.

ಇನ್ನೂ ಮತ್ತೊಬ್ಬ ಆರೋಪಿ ಮಹಾಂತೇಶ್‌ ಪಾಟೀಲ್‌ನ ಕೈಗೆ, ಬೇಡಿ ಹಾಕಿ ಕರೆದುಕೊಂಡು ಬರುವಾಗ್ಲೂ ಒಂಚೂರು ಪಶ್ಚಾತಾಪವಿದ್ದಂತೆ ಕಾಣಲಿಲ್ಲ. ಬದಲಾಗಿ ಮಾಧ್ಯಮಗಳ ಮುಂದೆಯೇ ಧಿಮಾಕು ತೋರ್ಸಿದ್ದಾನೆ. ಹಾಕ್ರಿ ಹಾಕ್ರಿ ಚಂದ್ರ ಹಾಕ್ರಿ.. ಟಿವಿ ನ್ಯೂಸ್‌ನಲ್ಲಿ ಹಾಕ್ರಿ. ರೊಕ್ಕ ಕೊಟ್ರೂ ಟಿವಿಯಲ್ಲಿ ಜಾಹೀರಾತು ಬರೋದಿಲ್ಲ. ಈಗ ಬರಲಿ ಚೆಂದ ಬರಲಿ ಅಂತ ದೌಲತ್ತಿನ ಮಾತುಗಳನ್ನಾಡಿದ್ದಾನೆ.

ಮಹಾ ಅಕ್ರಮದ ಸುಳಿವು ನೀಡಲಿದೆ ಮೊಬೈಲ್ ಕಾಲ್ಸ್ ಪರೀಕ್ಷೆ ವೇಳೆ ಅಕ್ರಮಕ್ಕಾಗಿ ಕಿಂಗ್‌ಪಿನ್‌ಗಳು ಬೇಜಾನ್ ಮೊಬೈಲ್‌ ಕರೆಗಳನ್ನ ಮಾಡಿದ್ದಾರೆ. ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರಕ್ಕೂ ಕಾಲ್‌ಗಳು ಬಂದಿವೆ. ಇದೇ ಕಾರಣಕ್ಕಾಗಿ ಪರೀಕ್ಷೆ ದಿನ ಬಂದಿರೋ ಕಾಲ್‌ಗಳ ಬೆನ್ನುಬಿದ್ದಿದೆ ಸಿಐಡಿ. ಇಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಆದ್ರೆ, ಖತರ್ನಾಕ್ ಕಿಲಾಡಿಗಳು ಬೇರೆಯವರ ಸಿಮ್‌ ಬಳಸಿ, ಅಕ್ರಮವೆಸಗಿದ್ದಾರೆ. ಡೀಲ್ ಮಾಡಿಕೊಂಡಿದ್ದ ಪರೀಕ್ಷಾರ್ಥಿಗಳಿಗೂ ಬೇರೆ ಬೇರೆ ಹೆಸರಿನ ಸಿಮ್‌ ತರಲು ಮೊದಲೇ ಡೀಲ್ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ರುದ್ರಗೌಡ ತಗ್ಲೊಕೊಂಡಿದ್ದೆ, ಸ್ನೇಹಿತ ಹಯ್ಯಾಳಿ ದೇಸಾಯಿಗೆ ತನ್ನ ಮೊಬೈಲ್ ಕೊಟ್ಟು.

ಇದನ್ನೂ ಓದಿ: ‘ಕೆಜಿಎಫ್ 2’ ಚಿತ್ರಕ್ಕಾಗಿ ಯಶ್, ಸಂಜಯ್ ದತ್, ರವೀನಾ, ಪ್ರಶಾಂತ್ ನೀಲ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ

Follow us on

Related Stories

Most Read Stories

Click on your DTH Provider to Add TV9 Kannada