ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ; ಸಿಐಡಿ ಪೊಲೀಸರಿಂದ ಮತ್ತೊಬ್ಬ ಅಭ್ಯರ್ಥಿ ಅರೆಸ್ಟ್!
ಬಂಧಿತ ಸುನಿಲ್ ಕುಮಾರ್ ಮೂಲತಃ ಕಲಬುರಗಿ ನಿವಾಸಿ. ಬೆಂಗಳೂರಲ್ಲಿ ನಿನ್ನೆ ದಾಖಲೆ ಪರಿಶೀಲನೆಗೆ ಹಾಜರಾಗಿದ್ದ. ಸಿಐಡಿ ಅಧಿಕಾರಿಗಳು ಸುನಿಲ್ ಕುಮಾರ್ನ ದಾಖಲೆ ಪರಿಶೀಲಿಸಿದ್ದರು. ಪರಿಶೀಲನೆ ವೇಳೆ ಪರೀಕ್ಷಾ ಅಕ್ರಮವೆಸಗಿರುವುದು ಕಂಡುಬಂದಿತ್ತು
![ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ; ಸಿಐಡಿ ಪೊಲೀಸರಿಂದ ಮತ್ತೊಬ್ಬ ಅಭ್ಯರ್ಥಿ ಅರೆಸ್ಟ್!](https://images.tv9kannada.com/wp-content/uploads/2022/04/Arrest.jpg?w=1280)
ಕಲಬುರಗಿ: 545 ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ಈಗಾಗಲೇ ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು (CID Police) ಮತ್ತೊಬ್ಬ ಅಭ್ಯರ್ಥಿ ಸುನಿಲ್ನ ಬಂಧಿಸಿದ್ದಾರೆ. ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕಲಬುರಗಿಗೆ ಕರೆತಂದಿದ್ದಾರೆ. ಬಂಧನಕ್ಕೊಳಗಾಗಿರುವ ಸುನಿಲ್ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ. ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪಿಎಸ್ಐ ಪರೀಕ್ಷೆ ಬರೆದಿದ್ದ. ವಿಚಾರಣೆ ವೇಳೆ ಈತ ಅಕ್ರಮವೆಸಗಿರುವುದು ಕಂಡುಬಂದಿತ್ತು.
ಬಂಧಿತ ಸುನಿಲ್ ಕುಮಾರ್ ಮೂಲತಃ ಕಲಬುರಗಿ ನಿವಾಸಿ. ಬೆಂಗಳೂರಲ್ಲಿ ನಿನ್ನೆ ದಾಖಲೆ ಪರಿಶೀಲನೆಗೆ ಹಾಜರಾಗಿದ್ದ. ಸಿಐಡಿ ಅಧಿಕಾರಿಗಳು ಸುನಿಲ್ ಕುಮಾರ್ನ ದಾಖಲೆ ಪರಿಶೀಲಿಸಿದ್ದರು. ಪರಿಶೀಲನೆ ವೇಳೆ ಪರೀಕ್ಷಾ ಅಕ್ರಮವೆಸಗಿರುವುದು ಕಂಡುಬಂದಿತ್ತು. ಹೀಗಾಗಿ ಇಂದು ಅರೆಸ್ಟ್ ಮಾಡಿ ಕಲಬುರಗಿಗೆ ಕರೆತಂದಿದ್ದಾರೆ. ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಸದ್ಯ 16 ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಇನ್ನು ಅಕ್ರಮದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ ಜೊತೆ ಅಭ್ಯರ್ಥಿ ಸುನಿಲ್ ಕುಮಾರ್ ಸಂಪರ್ಕ ಹೊಂದಿದ್ದ. ರುದ್ರಗೌಡ ಪಾಟೀಲ್ ಸುನಿಲ್ ಕುಮಾರ್ಗೆ ಎಲೆಕ್ಟ್ರಾನಿಕ್ ಡಿವೈಸ್ ನೀಡಿದ್ದ. ಅಕ್ರಮಕ್ಕಾಗಿಯೇ ರುದ್ರಗೌಡ ಪಾಟೀಲ್ಗೆ ಸುನಿಲ್ ಐವತ್ತು ಲಕ್ಷ ಹಣ ನೀಡಿದ್ದ.
ದಿವ್ಯಾ ಹಾಗರಗಿಯನ್ನು ಪೊಲೀಸರು ಇನ್ನೂ ಬಂಧಿಸಿಲ್ಲ; ಶರಣಪ್ರಕಾಶ್ ಪಾಟೀಲ್: ಸರ್ಕಾರ ಪರೀಕ್ಷಾ ಅಕ್ರಮ ಕೇಸ್ ತನಿಖೆಯ ದಿಕ್ಕು ತಪ್ಪಿಸುತ್ತಿದೆ ಅಂತ ಕಲಬುರಗಿಯಲ್ಲಿ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಬೇಕು. ದಿವ್ಯಾ ಹಾಗರಗಿಯನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ದಿವ್ಯಾ ಮನೆಗೆ ಸಚಿವರು ಹೋಗಿ ಬಂದಿದ್ದಾರೆ ಅಂತ ಬಂಧಿಸಿಲ್ವಾ? ಪರೀಕ್ಷಾ ಕೇಂದ್ರ ಮಂಜೂರು ಮಾಡಲು ಲೆಟರ್ ಕೊಟ್ಟಿದ್ದಾರೆ. ಡಾ.ಉಮೇಶ್ ಜಾಧವ್ ಪತ್ರ ಕೊಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ ಎಂದರು.
ಇದನ್ನೂ ಓದಿ
ಕೇಂದ್ರೀಯ ವಿದ್ಯಾಲಯಗಳಲ್ಲಿ ಎಂಪಿ ಕೋಟಾ ರದ್ದು, ಪ್ರವೇಶ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಕೇಂದ್ರ
PSI Recruitment Scam: ಆರೋಪಿ ದಿವ್ಯಾ ಹಾಗರಗಿ ಕಾಣಿಸಿಕೊಂಡರು ಬಿಜೆಪಿ ಟ್ವೀಟ್ನಲ್ಲಿ! ಜೊತೆಗೆ ಯಾರಿದ್ದಾರೆ ನೋಡಿ!
Published On - 2:33 pm, Tue, 26 April 22