AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ಆರೋಪಿ ದಿವ್ಯಾ ಹಾಗರಗಿ ಕಾಣಿಸಿಕೊಂಡರು ಬಿಜೆಪಿ ಟ್ವೀಟ್​​ನಲ್ಲಿ! ಜೊತೆಗೆ ಯಾರಿದ್ದಾರೆ ನೋಡಿ!

ಬೆಂಗಳೂರು: ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಾದರಿ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ನೇಮಕಾತಿ ಪ್ರಕ್ರಿಯೆಲ್ಲಿ ಅಕ್ರಮಗಳು ನಡೆದಿವೆ. ಅದರ ಪ್ರಮುಖ ಆರೋಪಿ ಎಂದು ಮೊದಲ ಏಟಿಗೆ ಗುರುತಿಸಿಕೊಂಡ ದಿವ್ಯಾ ಹಾಗರಗಿ ಅಂದು ಪರಾರಿಯಾದವರು ಇದುವರೆಗೂ ತನಿಖಾಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಎಲ್ಲಿ ಹೋದರು ಆರೋಪಿ ದಿವ್ಯಾ ಹಾಗರಗಿ ಎಂದು ವ್ಯಾಪಕ ಟೀಕೆಗಳು, ಚರ್ಚೆಗಳು ನಡೆದಿರುವಾಗ ರಾಜ್ಯ ಆಡಳಿತಾರೂಢ ಕರ್ನಾಟಕ ಬಿಜೆಪಿ ಮಂದಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಖುದ್ದಾಗಿ ಅಲ್ಲ; ಬದಲಿಗೆ ಹಳೆಯ ಫೋಟೋ […]

PSI Recruitment Scam: ಆರೋಪಿ ದಿವ್ಯಾ ಹಾಗರಗಿ ಕಾಣಿಸಿಕೊಂಡರು ಬಿಜೆಪಿ ಟ್ವೀಟ್​​ನಲ್ಲಿ! ಜೊತೆಗೆ ಯಾರಿದ್ದಾರೆ ನೋಡಿ!
PSI Recruitment Scam: ಆರೋಪಿ ದಿವ್ಯಾ ಹಾಗರಗಿ ಕಾಣಿಸಿಕೊಂಡರು ಬಿಜೆಪಿ ಟ್ವೀಟ್​​ನಲ್ಲಿ! ಜೊತೆಗೆ ಯಾರಿದ್ದಾರೆ ನೋಡಿ!
TV9 Web
| Updated By: ಸಾಧು ಶ್ರೀನಾಥ್​|

Updated on:Apr 26, 2022 | 5:01 PM

Share

ಬೆಂಗಳೂರು: ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಾದರಿ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ನೇಮಕಾತಿ ಪ್ರಕ್ರಿಯೆಲ್ಲಿ ಅಕ್ರಮಗಳು ನಡೆದಿವೆ. ಅದರ ಪ್ರಮುಖ ಆರೋಪಿ ಎಂದು ಮೊದಲ ಏಟಿಗೆ ಗುರುತಿಸಿಕೊಂಡ ದಿವ್ಯಾ ಹಾಗರಗಿ ಅಂದು ಪರಾರಿಯಾದವರು ಇದುವರೆಗೂ ತನಿಖಾಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಎಲ್ಲಿ ಹೋದರು ಆರೋಪಿ ದಿವ್ಯಾ ಹಾಗರಗಿ ಎಂದು ವ್ಯಾಪಕ ಟೀಕೆಗಳು, ಚರ್ಚೆಗಳು ನಡೆದಿರುವಾಗ ರಾಜ್ಯ ಆಡಳಿತಾರೂಢ ಕರ್ನಾಟಕ ಬಿಜೆಪಿ ಮಂದಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಖುದ್ದಾಗಿ ಅಲ್ಲ; ಬದಲಿಗೆ ಹಳೆಯ ಫೋಟೋ ಒಂದರಲ್ಲಿ. ಅದನ್ನು ಫೋಟೋ ಸಮೇತ ಕರ್ನಾಟಕ ಬಿಜೆಪಿ ಟ್ವೀಟ್​ ಮಾಡಿ, ವಿರೋಧ ಪಕ್ಷವಾದ ಕರ್ನಾಟಕ ಕಾಂಗ್ರೆಸ್ ನ ಅಂಗಳಕ್ಕೆ ಚೆಂಡನ್ನು ಎಸೆದಿದೆ. ಏಕೆಂದರೆ ಇದುವರೆಗೂ ರಾಜ್ಯ ಕಾಂಗ್ರೆಸ್​ ಮಂದಿ ಆರೋಪಿ ದಿವ್ಯಾ ಹಾಗರಗಿ ಬಿಜೆಪಿ ಪಾರ್ಟಿಯವರು ಎಂದು ಬೊಬ್ಬಿಡುತ್ತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಆ ಮಹಿಳೆ ತಮ್ಮ ಪಕ್ಷದವರಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದರು. ಇದೀಗತಾನೆ BJP Karnataka ಟ್ವೀಟ್​ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (KPCC President DK Shivakumar) ಜೊತೆಯಿರುವ ದಿವ್ಯಾ ಹಾಗರಗಿ (Divya Hagaragi) ಫೋಟೋಗಳನ್ನು ಬಟಾಬಯಲು ಮಾಡಿದೆ.

ನಾಲ್ಕು ವರ್ಷಗಳ ಹಿಂದೆಯೇ ಕಾಂಗ್ರೆಸ್ ನಾಯಕನ ಸಂಪರ್ಕದಲ್ಲಿದ್ದ ಆರೋಪಿ ದಿವ್ಯಾ: KPCC ಅಧ್ಯಕ್ಷ ಡಿಕೆ ಶಿವಕುಮಾರ್​ ಜೊತೆ ಆರೋಪಿ ದಿವ್ಯಾ ಇರುವ ಫೋಟೋವನ್ನು ಬಿಜೆಪಿ ಕರ್ನಾಟಕ ಟ್ವೀಟ್​ ಮಾಡುತ್ತಿದ್ದಂತೆ ಅದೀಗ ಫುಲ್ ವೈರಲ್ ಆಗುತ್ತಿದೆ. ತೀವ್ರ ಚರ್ಚೆಗಳನ್ನೂ ಹುಟ್ಟುಹಾಕಿದೆ. 2018ರ ಜೂನ್ 14ರಂದು ದಿವ್ಯಾ ಹಾಗರಗಿ ಮತ್ತು ಡಿಕೆ ಶಿವಕುಮಾರ್ ಭೇಟಿ ನೆರವೇರಿತ್ತು.

ದಿವ್ಯ ಹಾಗರಗಿ ಜೊತೆಗೆ ಫೋಟೊ -ಫಸ್ಟ್ ನನಗೆ ನೋಟಿಸ್ ಕೊಡಲು ಹೇಳಿ ಎಂದ ಡಿಕೆಶಿ KPCC ಅಧ್ಯಕ್ಷ ಡಿಕೆ ಶಿವಕುಮಾರ್​ ಜೊತೆ ಆರೋಪಿ ದಿವ್ಯಾ ಇರುವ ಫೋಟೋವನ್ನು ಬಿಜೆಪಿ ಕರ್ನಾಟಕ ಟ್ವೀಟ್​ ಮಾಡಿದ್ದು, ಅದೀಗ ಫುಲ್ ವೈರಲ್ ಆಗಿದೆ. ಈ ಬಗ್ಗೆ ಡಿ ಕೆ ಶಿವಕುಮಾರ್ ಅವರು ಟಿವಿ9 ಜೊತೆ ಮಾತನಾಡಿದ್ದು, ದಿವ್ಯ ಹಾಗರಗಿ ಜೊತೆಗೆ ಫೋಟೊ ವಿಚಾರವಾಗಿ ಫಸ್ಟ್ ನನಗೆ ನೋಟಿಸ್ ಕೊಡಲು ಹೇಳಿ. ನನ್ನನ್ನು ಕರೆಯಲು ಹೇಳಿ. ನನಗೂ ಆ ಫೋಟೊ ಯಾವುದು ಅಂತಾ ಗೊತ್ತಿಲ್ಲ. ಇರಬಹುದು, ಯಾರಾದ್ರು ಬಂದು ನನ್ನ ಜೊತೆಗೆ ಫೋಟೊ ತೆಗೆಸಿಕೊಂಡಿರಬಹುದು. ನನಗೂ ನೋಟಿಸ್ ಕೊಡ್ಲಿ ಎಂದು ಪ್ರತಿಕ್ರಿಯಿಸಿದ್ದಾರೆ.

DKS : PSI ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಜೊತೆ ನಿಮ್ ಫೋಟೋ ವೈರಲ್ ಆಗಿದೆ ಸರ್

BJP Karnataka ಟ್ವೀಟ್ ಸಾರಾಂಶ ಹೀಗಿದೆ: ಪಿಎಸ್ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ!

ಪ್ರಿಯಾಂಕ ಖರ್ಗೆಯವರೇ, ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಆಪಾದಿಸಿದ್ದೀರಿ. ಆದರೆ ಇಲ್ಲಿ‌‌ ನೋಡಿ..!!! ಈ ಚಿತ್ರ ಏನು ಹೇಳುತ್ತದೆ? ಎಷ್ಟೊಂದು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ! ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ವಿವರಿಸಬಹುದೇ?

Published On - 2:26 pm, Tue, 26 April 22