AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

M.ಲಕ್ಷ್ಮಣ್ ಗೆ ಲೀಗಲ್ ನೋಟಿಸ್ ನೀಡಿದ ಶಾಸಕ ಸಿ.ಟಿ.ರವಿ; ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಎಚ್ಚರಿಕೆ

ಏಪ್ರಿಲ್ 17ರಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಆರೋಪ ಮಾಡಿದ್ದರು. ಸಿ.ಟಿ.ರವಿ 500 ಎಕರೆ ಜಮೀನು ಹೊಂದಿದ್ದಾರೆಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಂ.ಲಕ್ಷ್ಮಣ್ಗೆ ಸಿ.ಟಿ.ರವಿ ಲೀಗಲ್ ನೋಟಿಸ್ ಕಳಿಸಿದ್ದಾರೆ.

M.ಲಕ್ಷ್ಮಣ್ ಗೆ ಲೀಗಲ್ ನೋಟಿಸ್ ನೀಡಿದ ಶಾಸಕ ಸಿ.ಟಿ.ರವಿ; ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಎಚ್ಚರಿಕೆ
ಸಿ.ಟಿ. ರವಿ
TV9 Web
| Updated By: ಆಯೇಷಾ ಬಾನು|

Updated on:Apr 26, 2022 | 3:37 PM

Share

ಬೆಂಗಳೂರು: ಶಾಸಕ ಸಿ.ಟಿ.ರವಿ ಬೇನಾಮಿಯಾಗಿ ಸುಮಾರು 500 ಎಕರೆ ಜಮೀನು ಹೊಂದಿದ್ದು ಆಸ್ತಿ ಮಾಡಿದ್ದಾರೆ. ‘ಲೂಟಿ’ ರವಿ ಎಂದು ಆರೋಪ ಮಾಡಿದ್ದ KPCC ವಕ್ತಾರ M.ಲಕ್ಷ್ಮಣ್ ಗೆ ಲೀಗಲ್ ನೋಟಿಸ್ ನೀಡಲಾಗಿದೆ. ನೋಟಿಸ್ ತಲುಪಿದ 48 ಗಂಟೆ ಒಳಗೆ ಕ್ಷಮೆ ಕೇಳಿ ಆರೋಪ ಹಿಂಪಡೆಯಬೇಕು ಇಲ್ಲದಿದ್ದರೆ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್ 17ರಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಆರೋಪ ಮಾಡಿದ್ದರು. ಸಿ.ಟಿ.ರವಿ 500 ಎಕರೆ ಜಮೀನು ಹೊಂದಿದ್ದಾರೆಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಂ.ಲಕ್ಷ್ಮಣ್ಗೆ ಸಿ.ಟಿ.ರವಿ ಲೀಗಲ್ ನೋಟಿಸ್ ಕಳಿಸಿದ್ದಾರೆ. ಹಾಗೂ 48 ಗಂಟೆ ಒಳಗೆ ಕ್ಷಮೆ ಕೇಳಿ ಆರೋಪ ಹಿಂಪಡೆಯಬೇಕು ಇಲ್ಲದಿದ್ದರೆ ಮಾನನಷ್ಟ ಮೊಕದ್ದಮ್ಮೆ ಹೂಡುವುದಾಗಿ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.

ಸಿ.ಟಿ.ರವಿ ನೀಡಿರುವ ನೋಟಿಸ್​ಗೆ ಕಾನೂನಿನ ಮೂಲಕ ಉತ್ತರಿಸುವೆ ಇನ್ನು ಸಿ.ಟಿ. ರವಿ ತಮ್ಮ ವಿರುದ್ಧ ನೀಡಿರುವ ನೋಟಿಸ್​ ವಿಚಾರಕ್ಕೆ ಸಂಬಂಧಿಸಿ ಎಂ.ಲಕ್ಷ್ಮಣ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬಹಿರಂಗವಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿ.ಟಿ.ರವಿ ನೀಡಿರುವ ನೋಟಿಸ್​ಗೆ ಕಾನೂನಿನ ಮೂಲಕ ಉತ್ತರಿಸುವೆ. ಈ ಹಿಂದೆ ಅವರ ಕಾರು ಅಪಘಾತ ಸಂಭವಿಸಿದಾಗ ನೋಟಿಸ್ ನೀಡಿದ್ದರು. ನನ್ನನ್ನು ಸೇರಿಸಿ ರಾಮಲಿಂಗಾ ರೆಡ್ಡಿ, ಆರ್‌.ಧ್ರುವನಾರಾಯಣ್ ಅವರಿಗೂ ನೋಟಿಸ್‌ ನೀಡಿದ್ದರು. ಈಗ ಮತ್ತೆ ನನಗೆ ನೋಟಿಸ್ ನೀಡಿದ್ದಾರೆ. ಸಿ.ಟಿ.ರವಿ ಆಸ್ತಿ ಸಂಬಂಧ ಇನ್ನೂ ಕೆಲ ಮಾಹಿತಿ ಸಂಗ್ರಹಿಸುತ್ತಿದ್ದೇನೆ. 20 ವರ್ಷದ ಹಿಂದೆ ಸಿ.ಟಿ.ರವಿ ಕುಟುಂಬದ ಆಸ್ತಿ ಎಷ್ಟು ಇತ್ತು? ಸಿ.ಟಿ.ರವಿ ಅಕ್ಕ, ತಂದೆ, ತಾಯಿ ಬಳಿ ಆಸ್ತಿ ಎಷ್ಟಿತ್ತು? ಈಗ ಇರುವ ಆಸ್ತಿಯ ಬಗ್ಗೆ ಬಹಿರಂಗಪಡಿಸುವಂತೆ ಕೇಳಿದ್ದೇನೆ. ಅದಕ್ಕೆ ಅವರು ಉತ್ತರ ಕೊಡುವ ಬದಲು ನೋಟಿಸ್ ನೀಡಿದ್ದಾರೆ. ನಾನು ವಕೀಲರ ಮೂಲಕ ಉತ್ತರ ನೀಡುತ್ತೇನೆ ಎಂದು ಎಂ.ಲಕ್ಷ್ಮಣ್​ ತಿಳಿಸಿದ್ದಾರೆ.

ಸಿ.ಟಿ.ರವಿ ವಿರುದ್ಧ ಎಂ.ಲಕ್ಷ್ಮಣ್ ಮಾಡಿದ ಆರೋಪವೇನು? ಇವರು ಸಿ.ಟಿ ರವಿ ಅಲ್ಲ ಲೂಟಿ ರವಿ. ಬೆಂಗಳೂರು, ಮೈಸೂರು, ದೆಹಲಿ ಸೇರಿ 400 ರಿಂದ 500 ಎಕರೆ ಜಮೀನು ಇದೆ. ಸಿ.ಟಿ ರವಿ ಅವರ ಭಾವ ಸುದರ್ಶನ ಹೆಸರಿನಲ್ಲಿ ಜಮೀನು ಇದೆ. ಚಿಕ್ಕಮಗಳೂರು ಎಲ್ಲಾ ಗುತ್ತಿಗೆ ಕೆಲಸ ಮಾಡುವವರು ಸುದರ್ಶನ್. 360 ಕೋಟಿ ಮೆಡಿಕಲ್‌ ಕಾಲೇಜು ಕೆಲಸ ಮಾಡುತ್ತಿರುವವರು ಅವರೇ. ಸತ್ಯ ಹರಿಶ್ಚಂದ್ರನ ಮೊಮ್ಮಗನಂತೆ ಮಾತನಾಡುತ್ತಾರೆ. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ. 60 ಕಿಲೋ ಮೀಟರ್ ರಸ್ತೆ ಕಾಮಗಾರಿ ಅದರ ಗುತ್ತಿಗೆ ನೀಡಿರುವುದು ಅವರ ಭಾವನಿಗೆ. ನಮ್ಮ ನಾಯಕರ ವಿರುದ್ದ ಆಧಾರರಹಿತ ಆರೋಪ ಮಾಡುತ್ತಾರೆ. ಜೈಲಿಗೆ ಹೋದವರು ಅಂತಾ ಟೀಕೆ ಮಾಡುತ್ತಾರೆ. ಅಮಿತ್ ಷಾ ಎಲ್ಲಿ ಗುರುಕುಲದಲ್ಲಿದ್ದರಾ? ಬಿ.ಎಸ್ ಯಡಿಯೂರಪ್ಪ ಎಲ್ಲಿದ್ದರು? ಅಶ್ಲೀಲ ಸಿಡಿ ವಿಚಾರದಲ್ಲಿ ನಿಮ್ಮ ಸಚಿವರು ನಾಯಕರು ಬಾಂಬೆ ಬಾಯ್ಸ್ ನಿರೀಕ್ಷಣಾ ಜಮೀನು ಏಕೆ? ನೀವು ಬಿಜೆಪಿಯವರು ಆಕಾಶದಿಂದ ಬಂದಿದ್ದೀರಾ? ಎಂದು ಕೇಳಿದ್ದರು.

ನಳಿನ್ ಕುಮಾರ್ ಕಟೀಲು ನಿಮ್ಮ ವಿರುದ್ದವೂ ಆರೋಪವಿದೆ. ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕೆಲಸ. ಪ್ರತಾಪಸಿಂಹ ಶಾಸಕರ ನಡುವೆ ಗಲಾಟೆ ಆಗಿದ್ದು ಪರ್ಸೆಂಟೆಜ್ ಕಮಿಷನ್‌ಗಾಗಿ. ಈ ಎಲ್ಲಾ ಪ್ರಕರಣವನ್ನು ಇಡಿಗೆ ನೀಡಲಾಗುತ್ತದೆ. ನಿಮಗೆ ತಾಕತ್ ಇದ್ದರೆ ಇಡಿಯಿಂದ ತನಿಖೆ ಮಾಡಿಸಿ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕಾಮಗಾರಿ ಸುದರ್ಶನ ಮೂಲಕ ಮಾತ್ರ ಹೋಗುತ್ತಿದೆ. ಮೂಡಿಗೆರೆ ಕುಮಾರಸ್ವಾಮಿ ಹಾಗೂ ಸಿ.ಟಿ ರವಿ ನಡುವೆ ಇದೇ ವಿಚಾರವಾಗಿ ಗಲಾಟೆ ನಡೆದಿತ್ತು. ನಾವು ಹಿಟ್ ಅಂಡ್ ರನ್ ಮಾಡುವುದಿಲ್ಲ ಎಲ್ಲದಕ್ಕೂ ದಾಖಲೆ ಇದೆ. ಕಿಡಿ ಹೊತ್ತಿಸುವುದು ನಿಮ್ಮ ಕೆಲಸ ಎಂದು ಎಂ ಲಕ್ಷ್ಮಣ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಡಾ.ಸುಧಾಕರ್ ಕೋಟಿಗಟ್ಟಲೆ ಅವ್ಯವಹಾರ‌ದಲ್ಲಿ ಭಾಗಿ; ಸಿಟಿ ರವಿ ಸಹಿತ ಐದಾರು ಸಚಿವರ ವಿರುದ್ಧ ನೇರ ಆರೋಪ ಮಾಡಿದ ಎಂ ಲಕ್ಷ್ಮಣ್

Published On - 3:28 pm, Tue, 26 April 22