Bengaluru: ಸೂಟ್​ಕೇಸ್​ ಚಕ್ರ ತುಂಡಾಗಿದ್ದಕ್ಕೆ ಬೆಂಗಳೂರಿನ ಪ್ರಯಾಣಿಕನಿಗೆ 8,000 ರೂ. ನೀಡಿದ ಏರ್​ಲೈನ್ಸ್​!

Bengaluru: ಸೂಟ್​ಕೇಸ್​ ಚಕ್ರ ತುಂಡಾಗಿದ್ದಕ್ಕೆ ಬೆಂಗಳೂರಿನ ಪ್ರಯಾಣಿಕನಿಗೆ 8,000 ರೂ. ನೀಡಿದ ಏರ್​ಲೈನ್ಸ್​!
ಸಾಂದರ್ಭಿಕ ಚಿತ್ರ

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕಳಪೆ ಸೇವೆಗಾಗಿ ಏರ್‌ಲೈನ್‌ಗೆ ಛೀಮಾರಿ ಹಾಕಿದ್ದಾರೆ. ಹಾಗೇ, ಗ್ರಾಹಕರ ಲಗೇಜ್‌ಗೆ ಪರಿಹಾರವಾಗಿ 8 ಸಾವಿರ ರೂ. ನೀಡಲು ಸೂಚಿಸಿದ್ದಾರೆ.

TV9kannada Web Team

| Edited By: Sushma Chakre

Apr 26, 2022 | 6:47 PM

ಬೆಂಗಳೂರು: ಬೆಂಗಳೂರಿನ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಯಾಣ ಮಾಡುವಾಗ ತನ್ನ ಲಗೇಜ್​ಗೆ ಡ್ಯಾಮೇಜ್ ಆಗಿದ್ದರಿಂದ ವಿಮಾನ ಸಂಸ್ಥೆಯ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ತನ್ನ ಟ್ರಾಲಿ ಬ್ಯಾಗ್‌ನಲ್ಲಿ ಚಕ್ರ ಕಾಣೆಯಾದ ಕಾರಣ ಖಾಸಗಿ ವಿಮಾನಯಾನ ಸಂಸ್ಥೆಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿದ್ದ ಅವರು ಸತತ 4 ವರ್ಷಗಳ ಕಾಲ ನ್ಯಾಯಕ್ಕಾಗಿ ಕಾದಿದ್ದರು. ಇದೀಗ ಖಾಸಗಿ ವಿಮಾನಯಾನ ಸಂಸ್ಥೆಯು ಆ ವ್ಯಕ್ತಿಗೆ 8,000 ರೂ. ಪಾವತಿಸುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿದೆ. ಪ್ರಯಾಣಿಕನ ಟ್ರಾಲಿ ಬ್ಯಾಗ್​ನಲ್ಲಿದ್ದ ಚಕ್ರ ಬಿದ್ದು ಹೋಗಿದ್ದಕ್ಕೆ ಖಾಸಗಿ ಏರ್​ಲೈನ್ಸ್​ ಆ ಪ್ರಯಾಣಿಕನಿಗೆ 8,000 ರೂ. ಹಣ ನೀಡಿದೆ.

ಬೆಂಗಳೂರಿನ ರಬಿ ಕುಮಾರ್ ಪಾಧಿ ಎಂಬ ವ್ಯಕ್ತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಎರಡು ಕಡೆಯ ಕಾನೂನು ಹೋರಾಟ ನಾಲ್ಕು ವರ್ಷಗಳ ಕಾಲ ನಡೆಯಿತು ಎಂಬುದು ಗಮನಿಸಬೇಕಾದ ಸಂಗತಿ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಲಗೇಜ್​ನ ಚಕ್ರ ಕಾಣೆಯಾಗಿರುವುದು ಆ ಪ್ರಯಾಣಿಕನ ಗಮನಕ್ಕೆ ಬಂದಿತ್ತು. ಈ ಬಗ್ಗೆ ತಾನು ಪ್ರಯಾಣಿಸಿದ ವಿಮಾನದ ಸಿಬ್ಬಂದಿ ಬಳಿ ವಿಚಾರಿಸಿದಾಗ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕಳಪೆ ಸೇವೆಗಾಗಿ ಏರ್‌ಲೈನ್‌ಗೆ ಛೀಮಾರಿ ಹಾಕಿದ್ದಾರೆ. ಹಾಗೇ, ಗ್ರಾಹಕರ ಲಗೇಜ್‌ಗೆ ಪರಿಹಾರವಾಗಿ 8 ಸಾವಿರ ರೂ ಹಾಗೂ 45 ದಿನಗಳಲ್ಲಿ ಅವರ ನ್ಯಾಯಾಲಯದ ವೆಚ್ಚವನ್ನು ಭರಿಸಲು ಹೆಚ್ಚುವರಿ 3,000 ರೂ. ನೀಡಲು ಸೂಚಿಸಿದ್ದಾರೆ. 2017ರಲ್ಲಿ ಪಾಧಿ ಅವರು ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. 2017ರ ಜುಲೈನಲ್ಲಿ ಈ ಘಟನೆ ಸಂಭವಿಸಿದಾಗ ಅವರ ಟ್ರಾಲಿ ಬ್ಯಾಗ್​ನ ಚಕ್ರ ಕಾಣೆಯಾಗಿತ್ತು. ಆ ಬ್ಯಾಗ್​ಗಾದ ಹಾನಿಯನ್ನು ಸರಿದೂಗಿಸಲು, ವಿಮಾನಯಾನ ಸಂಸ್ಥೆಯು ಆ ವ್ಯಕ್ತಿಗೆ 1,000 ರೂ.ಗಳನ್ನು ನೀಡಿತ್ತು. ನಂತರ ಅಂತಿಮ ಪರಿಹಾರವಾಗಿ ಮೊತ್ತವನ್ನು 3,000 ರೂ.ಗೆ ಹೆಚ್ಚಿಸಿತ್ತು.

ಆದರೆ, ಏರ್​ಲೈನ್ಸ್​ನ ಈ ಆಫರ್‌ನಿಂದ ಸಮಾಧಾನಗೊಳ್ಳದ ಪಾಧಿ ಅವರು ಏರ್‌ಲೈನ್‌ನ ಗ್ರಾಹಕ ಸೇವಾ ವ್ಯವಸ್ಥಾಪಕರ ವಿರುದ್ಧ ಶಾಂತಿನಗರದಲ್ಲಿರುವ ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.

ತನ್ನ ಬ್ಯಾಗ್​ಗೆ 20,000 ರೂ. ಕೊಟ್ಟು ಖರೀದಿಸಿದ್ದೆ ಎಂದು ಪ್ರಯಾಣಿಕ ಹೇಳಿದರು. ನ್ಯಾಯಾಧೀಶರು ಎರಡೂ ಕಡೆಯ ವಾದಗಳನ್ನು ಆಲಿಸಿದರು. ಲಗೇಜ್‌ಗಾಗಿ 20,000 ರೂ.ಗಳನ್ನು ನೀಡಿದ್ದ ಬಗ್ಗೆ ಪ್ರಯಾಣಿಕನು ಬಿಲ್ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ 3 ತಿಂಗಳು ಕಾದ ನ್ಯಾಯಾಲಯ ಆ ವ್ಯಕ್ತಿಗೆ 8,000 ರೂ. ಪರಿಹಾರ ನೀಡಲು ಏರ್​ಲೈನ್ಸ್​ಗೆ ಸೂಚಿಸಿದೆ.

ಇದನ್ನೂ ಓದಿ: Viral News: 23 ಲಕ್ಷ ಕೊಟ್ಟು ಅಪರೂಪದ ಕುದುರೆ ಖರೀದಿಸಿದ ವ್ಯಾಪಾರಿ; ಸ್ನಾನ ಮಾಡಿಸಿದಾಗ ಬಯಲಾಯ್ತು ಅಸಲಿ ಸತ್ಯ!

Viral Video: ಮೊನಾಲಿಸಾ ಪೇಂಟಿಂಗ್​ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಸೀರಿಯಲ್​ ನಾಯಕಿ; ಈ ವಿಡಿಯೋ ಮಿಸ್ ಮಾಡಬೇಡಿ!

Follow us on

Related Stories

Most Read Stories

Click on your DTH Provider to Add TV9 Kannada