ಡಾ.ಸುಧಾಕರ್ ಕೋಟಿಗಟ್ಟಲೆ ಅವ್ಯವಹಾರದಲ್ಲಿ ಭಾಗಿ; ಸಿಟಿ ರವಿ ಸಹಿತ ಐದಾರು ಸಚಿವರ ವಿರುದ್ಧ ನೇರ ಆರೋಪ ಮಾಡಿದ ಎಂ ಲಕ್ಷ್ಮಣ್
ಗೋಪಾಲಯ್ಯ ವಿರುದ್ಧ ಆಡಿಯೋ, ವಿಡಿಯೋ ದಾಖಲೆ ಇದೆ. ಸಚಿವ ಸುಧಾಕರ್ ವಿರುದ್ಧ 2 ಸಾವಿರ ಕೋಟಿ ಅವ್ಯವಹಾರ ಆರೋಪ ಇದೆ. ಭ್ರಷ್ಟಾಚಾರದಲ್ಲಿ ಸಚಿವ ಸುಧಾಕರ್ ಪತ್ನಿ, ಸಂಬಂಧಿಕರೂ ಭಾಗಿ ಆಗಿದ್ದಾರೆ ಎಂದು ಮೈಸೂರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹೇಳಿಕೆ ನೀಡಿದ್ದಾರೆ.
ಮೈಸೂರು: ಒಂದು ಲಂಚ, ಮತ್ತೊಂದು ಮಂಚಕ್ಕೆ ವಿಕೆಟ್ಗಳು ಬಿದ್ದಿವೆ. ಲಂಚ ಸಂಬಂಧ ಇನ್ನೂ 5 ವಿಕೆಟ್ ಬೀಳುವುದು ಬಾಕಿ ಇದೆ. ಈಶ್ವರಪ್ಪ ಮೊದಲ ಬಾರಿ ಚುನಾವಣೆಗೆ ನಿಂತಾಗ ಆಸ್ತಿ ಎಷ್ಟಿತ್ತು? ಈಶ್ವರಪ್ಪ ಪುತ್ರ ಕಾಂತೇಶ್ ಎಷ್ಟು ನಿವೇಶನಗಳನ್ನು ಹೊಂದಿದ್ದಾರೆ? ಕೆಐಎಡಿಬಿ ನಿವೇಶನಗಳನ್ನು ಕಾಂತೇಶ್ ಗುತ್ತಿಗೆ ಪಡೆದಿದ್ದಾರೆ. ಹೆಚ್ಚಿನ ಹಣಕ್ಕೆ ಕೆಐಎಡಿಬಿ ನಿವೇಶನ ಬಾಡಿಗೆಗೆ ನೀಡಿದ್ದಾರೆ. ಮೊದಲು ಕೆ.ಎಸ್.ಈಶ್ವರಪ್ಪರನ್ನು ಬಂಧಿಸಬೇಕು. ರಾಜೀನಾಮೆಗೂ ಮುನ್ನ ನೂರಾರು ಪಿಡಿಒಗಳ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ 29 ಪಿಡಿಒಗಳ ವರ್ಗಾವಣೆ ಮಾಡಿದ್ದಾರೆ. ಈಶ್ವರಪ್ಪ ಹಣ ಪಡೆದು ಪಿಡಿಒಗಳ ವರ್ಗಾವಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಎರಡು ಪತ್ರ ಬರೆಯಲಾಗಿದೆ. ಆದರೂ ಮೋದಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಂತೋಷ್ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ರಾಜೀನಾಮೆ ವಿಚಾರವಾಗಿ ಮೈಸೂರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ ಹೇಳಿಕೆ ನೀಡಿದ್ದಾರೆ.
ಇನ್ನೂ ಹಲವು ಸಚಿವರ ವಿರುದ್ಧ ಬೇರೆ ಬೇರೆ ಆರೋಪವಿದೆ. ಇವರ ವಿರುದ್ಧವೂ ಕಾಂಗ್ರೆಸ್ ಹೋರಾಟ ಮಾಡುತ್ತದೆ. ಸಚಿವರಾದ ಬಿ.ಸಿ.ಪಾಟೀಲ್, ಆರ್.ಅಶೋಕ್, ಗೋಪಾಲಯ್ಯ, ಡಾ.ಅಶ್ವತ್ಥ್ ನಾರಾಯಣ ವಿರುದ್ಧ ಭ್ರಷ್ಟಾಚಾರ ಆರೋಪವಿದೆ. ಗೋಪಾಲಯ್ಯ ವಿರುದ್ಧ ಆಡಿಯೋ, ವಿಡಿಯೋ ದಾಖಲೆ ಇದೆ. ಸಚಿವ ಸುಧಾಕರ್ ವಿರುದ್ಧ 2 ಸಾವಿರ ಕೋಟಿ ಅವ್ಯವಹಾರ ಆರೋಪ ಇದೆ. ಭ್ರಷ್ಟಾಚಾರದಲ್ಲಿ ಸಚಿವ ಸುಧಾಕರ್ ಪತ್ನಿ, ಸಂಬಂಧಿಕರೂ ಭಾಗಿ ಆಗಿದ್ದಾರೆ ಎಂದು ಮೈಸೂರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹೇಳಿಕೆ ನೀಡಿದ್ದಾರೆ.
ಸಿ.ಟಿ ರವಿ ಅಲ್ಲ ಲೂಟಿ ರವಿ
ಇವರು ಸಿ.ಟಿ ರವಿ ಅಲ್ಲ ಲೂಟಿ ರವಿ. ಬೆಂಗಳೂರು, ಮೈಸೂರು, ದೆಹಲಿ ಸೇರಿ 400 ರಿಂದ 500 ಎಕರೆ ಜಮೀನು ಇದೆ. ಸಿ.ಟಿ ರವಿ ಅವರ ಭಾವ ಸುದರ್ಶನ ಹೆಸರಿನಲ್ಲಿ ಜಮೀನು ಇದೆ. ಚಿಕ್ಕಮಗಳೂರು ಎಲ್ಲಾ ಗುತ್ತಿಗೆ ಕೆಲಸ ಮಾಡುವವರು ಸುದರ್ಶನ್. 360 ಕೋಟಿ ಮೆಡಿಕಲ್ ಕಾಲೇಜು ಕೆಲಸ ಮಾಡುತ್ತಿರುವವರು ಅವರೇ. ಸತ್ಯ ಹರಿಶ್ಚಂದ್ರನ ಮೊಮ್ಮಗನಂತೆ ಮಾತನಾಡುತ್ತಾರೆ. ಅಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ. 60 ಕಿಲೋ ಮೀಟರ್ ರಸ್ತೆ ಕಾಮಗಾರಿ ಅದರ ಗುತ್ತಿಗೆ ನೀಡಿರುವುದು ಅವರ ಭಾವನಿಗೆ. ನಮ್ಮ ನಾಯಕರ ವಿರುದ್ದ ಆಧಾರರಹಿತ ಆರೋಪ ಮಾಡುತ್ತಾರೆ. ಜೈಲಿಗೆ ಹೋದವರು ಅಂತಾ ಟೀಕೆ ಮಾಡುತ್ತಾರೆ. ಅಮಿತ್ ಷಾ ಎಲ್ಲಿ ಗುರುಕುಲದಲ್ಲಿದ್ದರಾ? ಬಿ.ಎಸ್ ಯಡಿಯೂರಪ್ಪ ಎಲ್ಲಿದ್ದರು? ಅಶ್ಲೀಲ ಸಿಡಿ ವಿಚಾರದಲ್ಲಿ ನಿಮ್ಮ ಸಚಿವರು ನಾಯಕರು ಬಾಂಬೆ ಬಾಯ್ಸ್ ನಿರೀಕ್ಷಣಾ ಜಮೀನು ಏಕೆ? ನೀವು ಬಿಜೆಪಿಯವರು ಆಕಾಶದಿಂದ ಬಂದಿದ್ದೀರಾ? ಎಂದು ಕೇಳಿದ್ದಾರೆ.
ನಳಿನ್ ಕುಮಾರ್ ಕಟೀಲು ನಿಮ್ಮ ವಿರುದ್ದವೂ ಆರೋಪವಿದೆ. ಬಿಜೆಪಿಯವರಿಗೆ ಸುಳ್ಳು ಹೇಳುವುದೇ ಕೆಲಸ. ಪ್ರತಾಪಸಿಂಹ ಶಾಸಕರ ನಡುವೆ ಗಲಾಟೆ ಆಗಿದ್ದು ಪರ್ಸೆಂಟೆಜ್ ಕಮಿಷನ್‌ಗಾಗಿ. ಈ ಎಲ್ಲಾ ಪ್ರಕರಣವನ್ನು ಇಡಿಗೆ ನೀಡಲಾಗುತ್ತದೆ. ನಿಮಗೆ ತಾಕತ್ ಇದ್ದರೆ ಇಡಿಯಿಂದ ತನಿಖೆ ಮಾಡಿಸಿ. ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಕಾಮಗಾರಿ ಸುದರ್ಶನ ಮೂಲಕ ಮಾತ್ರ ಹೋಗುತ್ತಿದೆ. ಮೂಡಿಗೆರೆ ಕುಮಾರಸ್ವಾಮಿ ಹಾಗೂ ಸಿ.ಟಿ ರವಿ ನಡುವೆ ಇದೇ ವಿಚಾರವಾಗಿ ಗಲಾಟೆ ನಡೆದಿತ್ತು. ನಾವು ಹಿಟ್ ಅಂಡ್ ರನ್ ಮಾಡುವುದಿಲ್ಲ ಎಲ್ಲದಕ್ಕೂ ದಾಖಲೆ ಇದೆ. ಕಿಡಿ ಹೊತ್ತಿಸುವುದು ನಿಮ್ಮ ಕೆಲಸ ಎಂದು ಎಂ ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ; ರಾಜ್ಯ ಸರ್ಕಾರವೇ ಒಂದು ದೊಡ್ಡ ಹಗರಣ: ಪ್ರಿಯಾಂಕ್ ಖರ್ಗೆ
ಇದನ್ನೂ ಓದಿ: ರೈತರು, ದಲಿತರು, ಮಹಿಳೆಯರ ಬದುಕಿನಲ್ಲಿ ಬಿಜೆಪಿಯಿಂದ ಪರಿವರ್ತನೆ; ಮಿಷನ್ 150 ಗುರಿ ತಲುಪುವ ವಿಶ್ವಾಸ: ಜೆಪಿ ನಡ್ಡಾ
Published On - 4:51 pm, Sun, 17 April 22