ರೈತರು, ದಲಿತರು, ಮಹಿಳೆಯರ ಬದುಕಿನಲ್ಲಿ ಬಿಜೆಪಿಯಿಂದ ಪರಿವರ್ತನೆ; ಮಿಷನ್ 150 ಗುರಿ ತಲುಪುವ ವಿಶ್ವಾಸ: ಜೆಪಿ ನಡ್ಡಾ

ರೈತರಿಗಾಗಿ ಮೋದಿ ಹಲವು ಯೋಜನೆಗಳನ್ನು ತಂದಿದ್ದಾರೆ. ಫಸಲ್ ಭಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಹೀಗೆ ರೈತರ ಸಬಲೀಕರಣಕ್ಕೆ ಹಲವು ಯೋಜನೆ ತರಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆ ನೀಡಿದ್ದಾರೆ.

ರೈತರು, ದಲಿತರು, ಮಹಿಳೆಯರ ಬದುಕಿನಲ್ಲಿ ಬಿಜೆಪಿಯಿಂದ ಪರಿವರ್ತನೆ; ಮಿಷನ್ 150 ಗುರಿ ತಲುಪುವ ವಿಶ್ವಾಸ: ಜೆಪಿ ನಡ್ಡಾ
ಜೆ.ಪಿ. ನಡ್ಡಾ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 17, 2022 | 5:04 PM

ವಿಜಯನಗರ: ಮುಂಬರುವ 2023 ರ ಚುನಾವಣೆಯಲ್ಲಿ ಬಿಜೆಪಿ 150 ಮಿಷನ್ ಗುರಿ ತಲುಪುವ ವಿಶ್ವಾಸ ಇದೆ. ಸಾಮೂಹಿಕ‌ ತಂಡದ ಜೊತೆ ಗುರಿ ತಲುಪುವ ವಿಶ್ವಾಸ ಇದೆ. ನಾವೆಲ್ಲರೂ ಉತ್ತಮ ಬದಲಾವಣೆಯ ಸಲಕರಣೆ ಆಗಬೇಕಿದೆ. ನಮ್ಮ ವಿಷನ್ ಮತ್ತು ಮಿಷನ್ ಬಹಳ ಸ್ಪಷ್ಟತೆಯಿಂದ ಕೂಡಿದೆ. ಭಾರತೀಯ ಜನತಾ ಪಕ್ಷ ಪ್ರತಿ ಗ್ರಾಮ, ದಲಿತರು, ಬಡವರು, ಮಹಿಳೆಯರು, ಶೋಷಿತರ ಬದುಕಿನಲ್ಲಿ ಪರಿವರ್ತನೆ ತರುತ್ತಿದೆ. ಈ ಪರಿವರ್ತನೆಯಲ್ಲಿ ನಾವೆಲ್ಲರೂ ಸಾಧನಗಳಾಗಬೇಕಿದೆ. ಇಲ್ಲದಿದ್ರೆ ನಮ್ಮ ಬದುಕು ಸಾರ್ಥಕ ಆಗುವುದಿಲ್ಲ. ರೈತರ ಸಬಲೀಕರಣ ಮಾಡಿದ್ದು ಬಿಜೆಪಿ. ರೈತರಿಗಾಗಿ ಮೋದಿ ಹಲವು ಯೋಜನೆಗಳನ್ನು ತಂದಿದ್ದಾರೆ. ಫಸಲ್ ಭಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಹೀಗೆ ರೈತರ ಸಬಲೀಕರಣಕ್ಕೆ ಹಲವು ಯೋಜನೆ ತರಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆ ನೀಡಿದ್ದಾರೆ.

ನಾವು ಅಭಿವೃದ್ಧಿ ಮಾಡಿದ್ದೇವೆಂದು ಹೇಳಿಕೊಳ್ಳುವ ನಾಯಕ ಇಲ್ಲ. ಕಾಂಗ್ರೆಸ್​​ನಲ್ಲಿ ಅಭಿವೃದ್ಧಿ ಮಾಡಿದ್ದೇವೆಂದು ಹೇಳಿಕೊಳ್ಳುವವರಿಲ್ಲ. ಕಾಂಗ್ರೆಸ್​ನವರು ಜಾತಿವಾದ ಮಾತ್ರ ಮಾಡ್ತಾರೆ. ಜಾತಿಗಳನ್ನ ಒಡೆದು, ಜಾತಿಗಳ ಮೇಲೆ ಮತ ಕೇಳುತ್ತಾರೆ. ಕಾಂಗ್ರೆಸ್​​​ನಲ್ಲಿ ಈಗ ನಾಯಕರೇ ಇಲ್ಲ ಎಂದು ನಡ್ಡಾ ವ್ಯಂಗ್ಯವಾಡಿದ್ದಾರೆ. ಎಲ್ಲಾ ಸಮುದಾಯ, ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಬೇಕು. ಎಲ್ಲರಿಗೂ ತಲುಪುವಂತಹ ಕೆಲಸಗಳನ್ನು ಬಿಜೆಪಿ ಮಾಡಬೇಕಿದೆ. ದಲಿತರನ್ನು ಮುಂದೆ ತರುವ, ಯುವಕರನ್ನು ಮೇಲೆತ್ತುವ, ಮಹಿಳೆಯರಿಗೆ ನ್ಯಾಯ ಕೊಡಿಸುವುದೇ ಮುಖ್ಯ ಧ್ಯೇಯ ಆಗಿರಬೇಕು. ಭಾರತೀಯ ಜನತಾ ಪಾರ್ಟಿ ಉದ್ದೇಶವೂ ಕೂಡ ಅದೇ ಆಗಿದೆ ಎಂದು ನಡ್ಡಾ ಹೇಳಿದ್ದಾರೆ.

ಈವರೆಗೆ ಯಾವ ಪಕ್ಷವೂ ರೈತರ ಪರವಾಗಿ ಕೆಲಸ ಮಾಡಿಲ್ಲ. ಆದರೆ ಅವರೆಲ್ಲರೂ ಇವತ್ತು ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್​ ಎರಡೂ ಪಕ್ಷದವರು ಭ್ರಮೆಯಲ್ಲಿ ಇದ್ದಾರೆ. ಆದ್ರೆ ರೈತರ ಬೆಂಬಲಕ್ಕೆ ನಿಂತಿದ್ದು ಪ್ರಧಾನಿ ಮೋದಿಯವರು ಮಾತ್ರ. ಕರ್ನಾಟಕದಲ್ಲಿ 58 ಲಕ್ಷ ರೈತರು ಸದುಪಯೋಗ ಪಡೆಯುತ್ತಿದ್ದಾರೆ. ಕೇಂದ್ರ, ರಾಜ್ಯ‌ ಸರ್ಕಾರದಿಂದ ವರ್ಷಕ್ಕೆ ರೈತರ ಖಾತೆಗೆ ಹಣ ಜಮೆ ಆಗಿದೆ. ಕೇಂದ್ರ 6 ಸಾವಿರ, ರಾಜ್ಯ ಸರ್ಕಾರ 4 ಸಾವಿರ ಹಣ ಜಮೆ ಮಾಡ್ತಿದೆ ಎಂದು ತಿಳಿಸಿದ್ದಾರೆ.

NEP ಜಾರಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಜಲಜೀವನ್ ಮಿಷನ್ ಜಾರಿಯಲ್ಲೂ ಸಾಧನೆ ಮಾಡಿದೆ. ರಾಜ್ಯಕ್ಕೆ 10 ರೈಲ್ವೆ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಅನುದಾನವನ್ನೂ ಕೊಡಲಾಗಿದೆ. ದೇಶ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರಗಳಿಂದ ಬದಲಾವಣೆ ಆಗಿದೆ. ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನೇಕಾರ, ಮೀನುಗಾರರ ಮಕ್ಕಳಿಗೂ ವಿದ್ಯಾಸಿರಿ ಯೋಜನೆ ವಿಸ್ತರಣೆ ಮಾಡಲಾಗಿದೆ. ಕಾರ್ಯಕರ್ತರೇ ನಮ್ಮ ನಾಯಕರು ಹಾಗೂ ನಮ್ಮ ಪಕ್ಷದ ಶಕ್ತಿ ಎಂದು ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್​ ಪಕ್ಷ ಭಾಯಿ-ಬೆಹೆನ್​ಕಾ ಪಕ್ಷ: ನಡ್ಡಾ ವ್ಯಂಗ್ಯ

ಭಾರತೀಯ ಜನತಾ ಪಕ್ಷ ದೇಶದಲ್ಲಿರುವ ಏಕೈಕ ರಾಷ್ಟ್ರೀಯ ಪಕ್ಷ. ಉಳಿದಂತೆ ಎಲ್ಲಾ ಪಕ್ಷಗಳು ಕುಟುಂಬ, ಪರಿವಾರದ ಪಕ್ಷಗಳಾಗಿವೆ. ವಿವಿಧ ರಾಜ್ಯಗಳಲ್ಲಿರುವ ಕುಟುಂಬ ಆಧಾರಿತ ಪಕ್ಷಗಳ ಬಗ್ಗೆ ಪ್ರಸ್ತಾಪ ಮಾಡುತ್ತಾ ಕರ್ನಾಟಕದ ಜೆಡಿಎಸ್​ ಪಕ್ಷದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್, ಶಿರೋಮಣಿ ಅಕಾಲಿದಳ, ಸಮಾಜವಾದಿ ಪಕ್ಷ, ಟಿಎಂಸಿ, ಆರ್​ಜೆಡಿ, ಬಿಜು ಜನತಾ ದಳ, ವೈಎಸ್​ಆರ್​ಸಿಪಿ, ಟಿಆರ್​ಎಸ್​, ಜೆಡಿಎಸ್, ಶಿವಸೇನೆ, ಎನ್​ಸಿಪಿ ಕುಟುಂಬ, ಪರಿವಾರದ ಪಕ್ಷಗಳು, ಕಾಂಗ್ರೆಸ್​ ರಾಷ್ಟ್ರೀಯ ಪಕ್ಷವೂ ಅಲ್ಲ, ಭಾರತೀಯ ಪಕ್ಷವೂ ಅಲ್ಲ. ಕಾಂಗ್ರೆಸ್​ ಪಕ್ಷ ಭಾಯಿ-ಬೆಹೆನ್​ಕಾ ಪಕ್ಷವೆಂದು ನಡ್ಡಾ ವ್ಯಂಗ್ಯವಾಡಿದ್ದಾರೆ. ವಿಚಾರದ ಆಧಾರದಲ್ಲಿ ಬಿಜೆಪಿ ವೇಗವಾಗಿ ಬೆಳೆಯುತ್ತಿರುವ ಪಕ್ಷ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ. ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಹೊಸಪೇಟೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ನೀಡಿದ್ದಾರೆ.

ಕನ್ನಡದಲ್ಲೇ ಭಾಷಣ ಆರಂಭಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ತಾಯಿ ಭುವನೇಶ್ವರಿಗೆ ನನ್ನ ಪ್ರಣಾಮಗಳು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ವಿಶ್ವವಿಖ್ಯಾತ ಹಂಪಿ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಂತಹ ಪವಿತ್ರ ಭೂಮಿಗೆ ಬಂದಿರುವುದು ನನ್ನ ಪುಣ್ಯ. 2023ರ ಎಲೆಕ್ಷನ್‌ನಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಕಾರ್ಯಕಾರಿಣಿ ಸಮಾರೋಪ ಸಮಾರಂಭದಲ್ಲಿ ಜೆ.ಪಿ.ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊಸಪೇಟೆಯಲ್ಲಿ 2ನೇ ದಿನದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆದಿದೆ. ಕಾರ್ಯಕಾರಿಣಿಯಲ್ಲಿ ವರದಿ ಮಂಡನೆ, ನಿರ್ಣಯ ಅಂಗೀಕಾರ ಮಾಡಲಾಗಿದೆ. ವಿಭಾಗ ಸಂಘಟನಾ ಕಾರ್ಯದರ್ಶಿಗಳಿಂದ, ವಿವಿಧ ಮೋರ್ಚಾ, ಸಂಘಟನಾ ಕಾರ್ಯದರ್ಶಿಗಳಿಂದ ಮಂಡನೆ ಮಾಡಲಾಗಿದೆ. ಸರ್ಕಾರ ಮೆಚ್ಚುವ ಬದಲಿಗೆ ಟೀಕಿಸುವ ವಿಪಕ್ಷಗಳ ಧೋರಣೆ ಖಂಡಿಸಿ ಖಂಡನಾ ನಿರ್ಣಯ ಮಂಡನೆ ಮಾಡಲಾಗಿದೆ. ಜಗತ್ತಿನ ಗಮನವನ್ನ ಸೆಳೆದ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಪ್ರಧಾನಿ ಮೋದಿ ಸರ್ಕಾರಕ್ಕೆ ಅಭಿನಂದನಾ ನಿರ್ಣಯ ಮಂಡಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರು, ಸಂಸದರು, ಶಾಸಕರು, ಕಾರ್ಯಕಾರಿಣಿ ಸದಸ್ಯರು ಸಭೆಯಲ್ಲಿ ಭಾಗಿ‌ ಆಗಿದ್ದಾರೆ.

ಜುಲೈ ತಿಂಗಳಾಂತ್ಯದಲ್ಲಿ ಮುಂದಿನ BJP ರಾಜ್ಯ ಕಾರ್ಯಕಾರಿಣಿ

ಜುಲೈ ತಿಂಗಳಾಂತ್ಯದಲ್ಲಿ ಮುಂದಿನ BJP ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕಾರಿಣಿ ನಡೆಯುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಘೋಷಣೆ ಮಾಡಿದ್ದಾರೆ. BJP ಕಾರ್ಯಕಾರಿಣಿ ಸಮಾರೋಪ‌ ಸಮಾರಂಭದಲ್ಲಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಯಲ್ಲಿ ಸಿಐಡಿ ತಂಡ ಪರಿಶೀಲನೆ; ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರೋ ಶಂಕೆ

ಇದನ್ನೂ ಓದಿ: ಪಿಎಸ್​ಐ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ; ರಾಜ್ಯ ಸರ್ಕಾರವೇ ಒಂದು ದೊಡ್ಡ ಹಗರಣ: ಪ್ರಿಯಾಂಕ್ ಖರ್ಗೆ

Published On - 4:06 pm, Sun, 17 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ