ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಯಲ್ಲಿ ಸಿಐಡಿ ತಂಡ ಪರಿಶೀಲನೆ; ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರೋ ಶಂಕೆ

ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಯಲ್ಲಿ ಸಿಐಡಿ ತಂಡ ಪರಿಶೀಲನೆ; ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರೋ ಶಂಕೆ
ಬಿಜೆಪಿ ಮುಖಂಡೆ, ಹಿಂದುಪರ ಕಾರ್ಯಕರ್ತೆ ದಿವ್ಯಾ ಹಾಗರಗಿ

ದೇವರ ಪಲ್ಲಕ್ಕಿ ಹೊತ್ತಿದ್ದ ವ್ಯಕ್ತಿ ಅಗ್ನಿಕೊಂಡ ಹಾಯುವ ವೇಳೆ ಕುಸಿದು ಬಿದ್ದಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಏಪ್ರಿಲ್ 11ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 17, 2022 | 6:43 PM

ಕಲಬುರಗಿ: 545 ಪಿ.ಎಸ್.ಐ ಹುದ್ದೆಗಳ ನೇಮಕಾತಿ ಅಕ್ರಮ ವಿಚಾರವಾಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರೋ ಬಿಜೆಪಿ ಮುಖಂಡೆ, ಹಿಂದುಪರ ಕಾರ್ಯಕರ್ತೆ ದಿವ್ಯಾ ಹಾಗರಗಿ ಮನೆಗೆ ಡಿ.ವೈ.ಎಸ್ಪಿ ಶಂಕರಗೌಡ ನೇತೃತ್ವದ ಸಿಐಡಿ (CID) ತಂಡ ಭೇಟಿ ನೀಡಿದೆ. ದಿವ್ಯಾ ಹಾಗರಗಿಗೆ ಸೇರಿದ್ದ ಜ್ಞಾನಜೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿತ್ತು. ಇದೇ ಶಾಲಾಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ನಾಲ್ವರು ಅಭ್ಯರ್ಥಿಗಳನ್ನು ಸಿ.ಐ.ಡಿ ತಂಡ ಬಂಧಿಸಿದ್ದು, ಇಲ್ಲಿವರಗೆ ಒಟ್ಟು ಏಳು ಜನರನ್ನು ಸಿಐಡಿ ತಂಡ ಬಂಧಿಸಿದೆ. ಮನೆಯಲ್ಲಿ ಸರ್ಚ್ ಮಾಡಲು ಸಿಐಡಿ ತಂಡ ಆಗಮಿಸಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ. ದಿವ್ಯಾ ಹಾಗರಗಿ ಪತಿ ರಾಜೇಶ್​​ನನ್ನು ವಿಚಾರಣೆ ನಡೆಸಿದ  ಪೊಲೀಸರು, ಈ ಸಮಯದಲ್ಲಿ ದಿವ್ಯಾ ಹಾಗರಗಿ ವಿಜಯಪುರಕ್ಕೆ ಹೋಗಿರೋದಾಗಿ ಮಾಹಿತಿ ನೀಡಿದ್ದಾರೆ.

ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ಆಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಡಿಜಿ ಐಜಿಪಿ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಪ್ರಕರಣ ಸಂಬಂಧ ಇದುವರೆಗೂ ಕಲಬುರಗಿಯಲ್ಲಿ ಏಳು ಜನರ ಬಂಧನ ಮಾಡಲಾಗಿದೆ. ಇದರಲ್ಲಿ ನಾಲ್ವರು ಅಭ್ಯರ್ಥಿಗಳು ಹಾಗೂ ಮೂವರು ಮೇಲ್ವಿಚಾರಕರನ್ನ ಬಂಧನ ಮಾಡಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ ಅವರನ್ನ ಬಂಧಿಸಲಾಗುವುದು. ಪ್ರತಿಯೊಬ್ಬ ಅಭ್ಯರ್ಥಿಯ ಆಯ್ಕೆ ಬಗ್ಗೆಯೂ ಪರಿಶೀಲನೆಗೆ ಗೃಹ ಮಂತ್ರಿಗಳು ಸೂಚಿಸಿದ್ದಾರೆ. ಹೀಗಾಗಿ ಪೂರ್ಣ ವಿಚಾರಣೆ ಬಳಿಕವಷ್ಟೆ ನೇಮಕಾತಿ ಫಲಿತಾಂಶ ಅಂತಿಮಗೊಳಿಸಲಾಗುವುದು. ಆಕ್ರಮ ಎಸಗಿದವರಿಗೆ ಶಿಕ್ಷೆ ಆಗಲಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ರಕ್ಷಣೆ ಇರುತ್ತೆ. ಇಲಾಖೆಯ ಉಳಿದ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ತಿಳಿಸಲಾಗಿದೆ.

ದೇವರ ಪಲ್ಲಕ್ಕಿ ಹೊತ್ತಿದ್ದ ವ್ಯಕ್ತಿ ಅಗ್ನಿಕೊಂಡ ಹಾಯುವ ವೇಳೆ ಕುಸಿದು ಬಿದ್ದು ಗಾಯ:

ತುಮಕೂರು: ದೇವರ ಪಲ್ಲಕ್ಕಿ ಹೊತ್ತಿದ್ದ ವ್ಯಕ್ತಿ ಅಗ್ನಿಕೊಂಡ ಹಾಯುವ ವೇಳೆ ಕುಸಿದು ಬಿದ್ದಿರುವಂತಹ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಏಪ್ರಿಲ್ 11ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನು(35) ಕೊಂಡದಲ್ಲಿ ಕುಸಿದು ಬಿದ್ದ ವ್ಯಕ್ತಿ. ದೇವರ ಪಲ್ಲಕ್ಕಿ ಕೆಳಭಾಗದಲ್ಲಿ ಸಿಲುಕಿದ ವ್ಯಕ್ತಿಯನ್ನು ಇತರೆ ಭಕ್ತರು ಮೇಲಕ್ಕೆ ಎತ್ತಿದ್ದಾರೆ. ಸ್ವಲ್ಪತರದಲ್ಲೇ ಮಹಾ ದುರಂತ ತಪ್ಪಿದೆ. ಎರಡು ಕೈ ಮತ್ತು ಎರಡು ಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಗಾಯಾಳು ಮನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದೆ.

ಕ್ಯಾಬ್ ಚಾಲಕನಿಗೆ ಚಾಕು ಇರಿದು ಪ್ಯಾಸೆಂಜರ್ ಎಸ್ಕೇಪ್:

ಬೆಂಗಳೂರು: ಬಾಡಿಗೆ ವಿಚಾರಕ್ಕೆ ಪ್ಯಾಸೆಂಜರ್ ಹಾಗೂ ಕ್ಯಾಬ್ ಚಾಲಕನ ನಡುವೆ ಜಗಳವಾಗಿದ್ದು, ಕ್ಯಾಬ್ ಚಾಲಕನಿಗೆ ಚಾಕು ಇರಿದು ಪ್ಯಾಸೆಂಜರ್ ಎಸ್ಕೇಪ್ ಆಗಿರುವಂತಹ ಘಟನೆ ಹೊಸೂರು ರಸ್ತೆ ಅಯ್ಯಪ್ಪಸ್ವಾಮಿ ಟೆಂಬಲ್ ಬಳಿ ನಡೆದಿದೆ. ದಿಲೀಪ್ ಪ್ರಯಾಣಿಕರಿಂದ ಇರಿತಕ್ಕೊಳಗಾದ ಚಾಲಕ.
ಹಾಸನ ಮೂಲದ ಚಾಲಕ ದಿಲೀಪ್​ಗೆ ಇರಿದ ದುಷ್ಕರ್ಮಿಗಳು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಮಡಿವಾಳ ಪೊಲೀಸ್ರಿಂದ ಶೋಧ ಕಾರ್ಯ ನಡೆಯುತ್ತಿದೆ. ಬೆಳಗಿನ ಜಾವ ಮೂರು ಗಂಟೆಯಲ್ಲಿ ಕ್ಯಾಬ್ ಬುಕ್ ಮಾಡಿದ್ದ ಆರೋಪಿಗಳು, ಬೊಮ್ಮಸಂದ್ರ ಸರ್ಕಲ್​ನಿಂದ ಕ್ಯಾಬ್​ನಲ್ಲಿ ಬಂದಿದ್ದರು. ಬಳಿಕ ಅಯ್ಯಪ್ಪಸ್ವಾಮೀ ಟೆಂಪಲ್ ಬಳಿ ಬಾಡಿಗೆ ವಿಚಾರಕ್ಕೆ ಜಗಳವಾಗಿದ್ದು, ಕೊನೆಗೆ ಚಾಲಕನಿಗೆ ಚಾಕುವಿನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವರ ಮೂರ್ತಿಗಳನ್ನ ವಿರೂಪಗೊಳಿಸಿದ ಕಿಡಿಗೇಡಿಯ ಬಂಧನ:

ಬೀದರ್: ಭಾಲ್ಕಿ ತಾಲೂಕಿನ ಚಳಕಾಪುರದ ಸಂಜೀವಿನಿ ಪರ್ವತದಲ್ಲಿ 3 ದಿನಗಳ ಹಿಂದೆ, ಹಿಂದೂ ದೇವರ ಮೂರ್ತಿಗಳನ್ನ ವಿರೂಪಗೊಳಿಸಿದ ಕಿಡಿಗೇಡಿಯನ್ನು ಬಂಧನ ಮಾಡಲಾಗಿದೆ. ಕಟಕಚಿಂಚೊಳ್ಳಿ ಠಾಣೆಯ ಪೊಲೀಸರಿಂದ ಚಳಕಾಪುರ ಗ್ರಾಮದ ಸಿದ್ದಯ್ಯ ಸ್ವಾಮಿ ಬಂಧನ ಮಾಡಲಾಗಿದ್ದು, ಕಟಕಚಿಂಚೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ತನಿಖೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿರೋ ಹ್ಯಾಕರ್ಸ್:

ಬೆಂಗಳೂರು: ಬೆಂಗಳೂರಿನಲ್ಲಿ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮದಲ್ಲೂ ತನಖೆ ನಡೆಸಿದ್ರೂ ಸುಳಿವು ಸಿಗದಿದ್ದು, ಟೆಕ್ನಿಕಲ್ ಶಾರ್ಪ್ ಇರುವ ಹ್ಯಾಕರ್​​ನಿಂದಲೇ ಸರಣಿ ಇ-ಮೇಲ್ ಕೃತ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ಯಾವುದೇ ಕ್ಲೂ ಸಿಗದ ಹಾಗೆ ಹಿಸ್ಟರಿಗಳ ಡೆಸ್ಟ್ರಾಯ್ ಮಾಡಲಾಗಿದ್ದು, ಜಿ-ಮೇಲ್ ಐಡಿ ತೋರಿಸಿ ಹ್ಯಾಕರ್ಸ್ ದಾರಿ ತಪ್ಪಿಸಿದ್ದಾರೆ. ಹೀಗಾಗಿ ಲಿಂಕ್ ಸಿಗದೇ ಪೊಲೀಸರು ಹುಡುಕಾಡುತ್ತಿದ್ದಾರೆ. ಸ್ಪಾರ್ಕ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈಗಾಗಲೇ ಸೈಬರ್ ಟೆರರಿಸಂ ಅಡಿ‌ ಪ್ರಕರಣ ದಾಖಲು ಮಾಡಿ, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಿದ್ಯುತ್ ತಂತಿ ತುಳಿದು ಬಾಲಕ ಸಾವು:

ಕಾರವಾರ: ವಿದ್ಯುತ್ ತಂತಿ ತುಳಿದು ಬಾಲಕ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ. ಅಷ್ಪಕ್ ಮೊಮ್ಮದ್ ಶರೀಫ್ (13) ಸಾವನ್ನಪ್ಪಿದ ದುರ್ದೈವಿ. ಬೇಸಿಗೆ ರಜೆ ಹಿನ್ನೆಲೆ ಆಟವಾಡಲು ಹೊರಗೆ ತೆರಳಿದ್ದ ಬಾಲಕ, ಬೇಲಿಯ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದಿದ್ದು, ಬಾಲಕ ಬೇಲಿ ಮುಟ್ಟಿದ ಪರಿಣಾಮ ಶಾಕ್ ಹೊಡೆದು ಮೃತಪಟ್ಟಿದ್ದಾನೆ. ಮುಂಡಗೋಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ:

IPL 2022: ವಿರಾಟ್ ಕೊಹ್ಲಿ ಬ್ರೇಕ್ ಪಡೆದು ಕಾಮೆಂಟ್ರಿ ಮಾಡಲಿ ಎಂದ ಮಾಜಿ ಕ್ರಿಕೆಟಿಗ

ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿಯಂದು ನಡೆದ ಕೋಮು ಘರ್ಷಣೆ ಪ್ರಕರಣ; 14 ಮಂದಿ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada