ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಬರ್ಬರ ಹತ್ಯೆ; ಪಿಎಫ್‌ಐ ಕೈವಾಡವೆಂದ ಬಿಜೆಪಿ
ಈ ಘಟನೆ ನಡೆದ ಸ್ಥಳದ ಸಮೀಪದ ಹಳ್ಳಿಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕನನ್ನು ಹತ್ಯೆ ಮಾಡಿದ ಒಂದೇ ದಿನದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆಯಾಗಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನನ್ನು (RSS Worker) ಅಪರಿಚಿತ ಶನಿವಾರ ಮಧ್ಯಾಹ್ನ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲಕ್ಕಾಡ್ (Palakkad) ಪಟ್ಟಣದ ಹೃದಯಭಾಗದಲ್ಲಿರುವ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀನಿವಾಸನ್ (45) ಎಂಬುವರ ಅಂಗಡಿಯಲ್ಲೇ ಅವರ ಮೇಲೆ ಗುಂಪೊಂದು ದಾಳಿ ನಡೆಸಿದೆ.
ಆರೋಪಿಗಳು ದ್ವಿಚಕ್ರವಾಹನದಲ್ಲಿ ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ. ತಕ್ಷಣ ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸನ್ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಈ ಘಟನೆ ನಡೆದ ಸ್ಥಳದ ಸಮೀಪದ ಹಳ್ಳಿಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕನನ್ನು ಹತ್ಯೆ ಮಾಡಿದ ಒಂದೇ ದಿನದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆಯಾಗಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Complete breakdown of law and order in Kerala. Popular Front terrorists brutally murdered former RSS Pracharak Shri.Sreenivasan Ji in broad daylight. Nationalist forces have lost 23 karyakarthas under the @vijayanpinarayi regime. Left-Jihadi terror reigns Kerala. pic.twitter.com/2NZfXrJqLV
— K Surendran (@surendranbjp) April 16, 2022
ಶುಕ್ರವಾರ ಮಧ್ಯಾಹ್ನ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ ಸುಬೈರ್ (43) ಅವರನ್ನು ಎಲಪ್ಪುಲ್ಲಿಯಲ್ಲಿ ಹತ್ಯೆ ಮಾಡಲಾಗಿತ್ತು. ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಶ್ರೀನಿವಾಸನ್ ಹತ್ಯೆಯ ಹಿಂದೆ ಪಿಎಫ್‌ಐನ ರಾಜಕೀಯ ಶಾಖೆಯಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೈವಾಡವಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಎಲ್ಲ ಮುಸ್ಲಿಮರು, ಕ್ರಿಶ್ಚಿಯನ್ನರು ಮುಂದೊಂದು ದಿನ ಆರ್‌ಎಸ್‌ಎಸ್ ಜೊತೆ ಸೇರಲೇಬೇಕು -ಸಚಿವ ಕೆಎಸ್ ಈಶ್ವರಪ್ಪ
ಇಂದಿನಿಂದ ಗುಜರಾತ್ನಲ್ಲಿ ಎಬಿಪಿ ಸಭೆ ಪ್ರಾರಂಭ; ಆರ್‌ಎಸ್‌ಎಸ್ ಶಾಖೆ ವಿಸ್ತರಣೆ, ಇನ್ನಿತರ ವಿಚಾರಗಳ ಸಮಗ್ರ ಚರ್ಚೆ