ಪಿಎಸ್​ಐ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ; ರಾಜ್ಯ ಸರ್ಕಾರವೇ ಒಂದು ದೊಡ್ಡ ಹಗರಣ: ಪ್ರಿಯಾಂಕ್ ಖರ್ಗೆ

ಪರೀಕ್ಷೆಯಲ್ಲಿ ಆರ್ಟಿಕಲ್ 371 ಜೆ ಮೀಸಲಾತಿ ನೀಡಿಲ್ಲ ಎಂದು ಮತ್ತೊಂದು ದೂರು ಸಲ್ಲಿಕೆಯಾಗುತ್ತದೆ. ಅಕ್ರಮ ಎಸಗಿದ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೂ ಕೂಡ ಸರ್ಕಾರ ಅವನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.

ಪಿಎಸ್​ಐ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ; ರಾಜ್ಯ ಸರ್ಕಾರವೇ ಒಂದು ದೊಡ್ಡ ಹಗರಣ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
Follow us
TV9 Web
| Updated By: ganapathi bhat

Updated on: Apr 17, 2022 | 3:38 PM

ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರಿಗೆ ಗೊತ್ತಾಗಿದೆ. ರಾಜ್ಯ ಸರ್ಕಾರವೇ ಒಂದು ದೊಡ್ಡ ಹಗರಣವನ್ನು ಮಾಡಿದೆ. ಪಿಎಸ್‌ಐ ನೇಮಕಾತಿಯಲ್ಲಿ ಬಹಳಷ್ಟು ಅಕ್ರಮ ನಡೆದಿದೆ. ಅಕ್ರಮ ನಡೆದಿರುವ ಬಗ್ಗೆ ಒಪ್ಪಿಕೊಂಡು ತನಿಖೆ ಮಾಡುತ್ತಿದೆ. ಈ ಅಕ್ರಮದಲ್ಲಿರುವುದು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವುದು ಸೂಕ್ತ. ಆರಗ ಜ್ಞಾನೇಂದ್ರ ಒಳ್ಳೆಯ ಮನುಷ್ಯ, ಆದರೆ ಕೆಟ್ಟ ಗೃಹ ಸಚಿವ. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಪಾರದರ್ಶಕ ತನಿಖೆ ನಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿಯನ್ನ ಮಿಸ್‌ಲೀಡ್ ಮಾಡ್ತಿದ್ದಾರೆ. ಅವರಿಗೆ ಯಾವ ಅಧಿಕಾರಿಗಳು ಏನು ಮಾಡ್ತಿದ್ದಾರೆಂದು ಗೊತ್ತಿಲ್ಲ. ಅನುದಾನ ಹೇಗೆ ಹಂಚಿಕೆ ಮಾಡಬೇಕು ಎಂಬುದೇ ಗೊತ್ತಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ಪ್ರಿಯಾಂಕ್ ಹೇಳಿಕೆ ನೀಡಿದ್ದಾರೆ.

ಅಭ್ಯರ್ಥಿಗಳು ಭೇಟಿಯಾದ ಬಳಿಕ ಗೃಹ ಸಚಿವರು ಯಾವುದೆ ಅಕ್ರಮ ನಡೆಯುವುದಿಲ್ಲ ಎಂದು ಟ್ವೀಟ್ ಮಾಡ್ತಾರೆ. ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಡಿಜಿ ಐಜಿಯವರಿಗೆ ದೂರು ನೀಡಲಾಗುತ್ತದೆ. ಬ್ಲ್ಯೂ ಟೂತ್ ಬಳಸಿ ಪರೀಕ್ಷೆ ಅಕ್ರಮ ಎಸಗಲಾಗಿದೆ ಎಂದು ದೂರು ನೀಡಲಾಗಿತ್ತು. ಆದರೂ ಕೂಡ ಡಿಜಿ ಐಜಿ ದೂರನ್ನು ಕಡೆಗಣಿಸಿದ್ದಾರೆ. ದೂರು ಕೊಟ್ಟವರು ಅಸೂಯೆಯಿಂದ ದೂರು ನೀಡಿದ್ದಾರೆ ಅಂತ ಗೃಹ ಸಚಿವರು ಪ್ರತಿಕ್ರಿಯೆ ನೀಡುತ್ತಾರೆ. ಪಿಎಸ್ಐ ಅಭ್ಯರ್ಥಿಗಳನ್ನು ದಾರಿ ತಪ್ಪಿಸುವುದಕ್ಕೆ ಗೃಹ ಸಚಿವರು ಹೇಳಿಕೆ ಕೊಟ್ಟಿದ್ದರು. ಪರೀಕ್ಷೆಯಲ್ಲಿ ಆರ್ಟಿಕಲ್ 371 ಜೆ ಮೀಸಲಾತಿ ನೀಡಿಲ್ಲ ಎಂದು ಮತ್ತೊಂದು ದೂರು ಸಲ್ಲಿಕೆಯಾಗುತ್ತದೆ. ಅಕ್ರಮ ಎಸಗಿದ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೂ ಕೂಡ ಸರ್ಕಾರ ಅವನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.

ಸಚಿವ ಪ್ರಭು ಚೌಹಾಣ್ ಸಿಎಂಗೆ ದೂರು ಸಲ್ಲಿಸಿದ್ದರು. ಒಂದೇ ತಾಲೂಕಿನ 43 ಮಂದಿ ಆಯ್ಕೆ ಆಗಿದ್ದಾರೆ ಅಂತ ಸಿಎಂಗೆ ದೂರು ನೀಡಲಾಗಿತ್ತು. ಬಿಜೆಪಿಯ ಸಚಿವರೇ ದೂರು ನೀಡಿದ್ದರೂ ಕ್ರಮ ಆಗಿಲ್ಲ. ಶೇಕಡಾ 40 ಕಮಿಷನ್ ಸರ್ಕಾರ ಅಕ್ರಮ ಎಸಗಲು ಸಚಿವರನ್ನು ಬನ್ನಿ ಅಂತ ಕರೆದರಾ? ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆ ಆಯ್ತಾ? ಚರ್ಚೆ ಮಾಡಿ ಶೇಕಡಾ 40 ಕಮಿಷನ್ ಬರತ್ತೆ ನಾವೇ ಹಂಚಿಕೊಂಡು ತಿನ್ನೋಣ ಅಂತ ಚರ್ಚೆ ಮಾಡಿದರಾ? ಇಷ್ಟೆಲ್ಲಾ ದೂರು ವರದಿ ಬಂದ ನಂತರವೂ ಗೃಹ ಸಚಿವರು ಅಕ್ರಮ ನಡೆದಿಲ್ಲ ನಡೆದಿಲ್ಲ ಅಂತ ಅಧಿವೇಶನದಲ್ಲಿ ಸುಳ್ಳು ಹೇಳ್ತಾರೆ. ಒಬ್ಬ ಸಚಿವರಾಗಿ ಅವರ ಇಲಾಖೆಯ ಬಗ್ಗೆಯೇ ಮಾಹಿತಿ ಇಲ್ವಾ? ಎಂದು ಪ್ರಿಯಾಂಕ್ ಪ್ರಶ್ನೆ ಮಾಡಿದ್ದಾರೆ.

510 ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಇದರಲ್ಲಿ

ಪರೀಕ್ಷೆ ಅಕ್ರಮ ನಡೆದಿದ್ದು ಕಲಬುರ್ಗಿ ಜ್ಞಾನಜ್ಯೋತಿ ಶಾಲೆಯಲ್ಲಿ. ಅದೇ ಶಾಲೆ ಬಿಜೆಪಿ ಮುಖಂಡರದ್ದು, ದಿವ್ಯಾ ಹಾಗರಗಿ ಎಂಬುವವರದ್ದು. ಅವರದೇ ಮನೆಗೆ ಗೃಹ ಸಚಿವರು ಭೇಟಿ ನೀಡಿ ಆರತಿ ಎತ್ತಿಸಿಕೊಂಡಿದ್ದರು. ಅಕ್ರಮಗಳು ನಡೆಯುತ್ತಿರುವಾಗ ಗೃಹ ಸಚಿವರು ಯಾಕೆ ಭೇಟಿ ಕೊಟ್ಟಿದ್ದರು? ಈಗ ಅವರೆಲ್ಲ ಪರಾರಿಯಾಗಿದ್ದಾರೆ ಅಂತ ಗೃಹ ಸಚಿವರಿಗೆ ಗೊತ್ತಿಲ್ವಾ? ಬಿಜೆಪಿಯ ಜಿಲ್ಲಾ ಪದಾಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಆದರೂ ಅವರ ವಿರುದ್ದ ಯಾಕೆ ಕ್ರಮ ಜರುಗಿಸಿಲ್ಲ ಎಂದು ಕೇಳಿದ್ದಾರೆ.

ಸಿಐಡಿ ಅಧಿಕಾರಿಗಳು ನಿನ್ನೆ ಸಣ್ಣಪುಟ್ಟವರನ್ನು ಅರೆಸ್ಟ್ ಮಾಡಿದ್ದಾರೆ. ಜ್ಞಾನ ಜ್ಯೋತಿ ಶಾಲೆಯ ಸಂಸ್ಥಾಪಕರನ್ನು ಯಾಕೆ ಇನ್ನೂ ಅರೆಸ್ಟ್ ಮಾಡುವುದಕ್ಕೆ ಸಾಧ್ಯವಾಗ್ತಿಲ್ಲ? ಸರಿಯಾದ ತನಿಖೆ ನಡೆದರೆ ಇನ್ನೂ ಮೂರ್ನಾಲ್ಕು ವಿಕೇಟ್ ಬೀಳುತ್ತದೆ. 510 ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಇದರಲ್ಲಿ. ಸರಿಯಾದ ತನಿಖೆ ನಡೆದರೆ ಇಡೀ ಕ್ಯಾಬಿನೆಟ್ ಖಾಲಿ ಆಗಿಬಿಡಬಹುದು. ಈಗಿನ ಸಿಎಂ ಹಿಂದಿನ ಗೃಹ ಸಚಿವರಾಗಿದ್ದರು, ಅವರಿಗೆ ಇದೆಲ್ಲ ಗಮನದಲ್ಲಿ ಬರಲಿಲ್ವಾ?

ನಳಿನ್ ಕಟೀಲ್ ಒಮ್ಮೆಯಾದರೂ ಬಿಟ್ ಕಾಯ್ನ್ ಹಗರಣದ ಬಗ್ಗೆ ಮಾತಾಡಿದ್ರಾ?

ಕೆಲಸ ಕೊಡಿ ಅಂತ ಯುವಕರು ಹೇಳಿದರೆ ಕೇಸರಿ ಶಾಲು ಹಾಕಿಸಿ ಓಡಾಡಿಸ್ತೀರಲ್ಲ. ಗೃಹ ಸಚಿವರು ಕಾಂಗ್ರೆಸ್ ನಿಂದ ಸರ್ಟೀಪಿಕೇಟ್ ಬೇಡ ಅಂತಾರೆ. ನಮ್ಮ ಸರ್ಟಿಫಿಕೇಟ್ ಬೇಡ ಅಂತೀರಾ ನಿಜ. ಆದರೆ ನಿಮ್ಮದೇ ಸಚಿವರು ಸಿಎಂ ನಿಮ್ಮ ಮೇಲೆ ನೋ ಕಾನ್ಫಿಡೆನ್ಸ್ ಸರ್ಟಿಫಿಕೇಟ್ ಕೊಟ್ಟಿದ್ದಾರಲ್ಲ. ಕಟೀಲ್ ಬಹಳ ದಿನಗಳ ಬಳಿಕ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಕಟೀಲ್ ಯಾಕಿಷ್ಡು ಭಯ ಪಟ್ಕೋತೀರಾ? ನಳಿನ್ ಕಟೀಲ್ ಒಮ್ಮೆಯಾದರೂ ಬಿಟ್ ಕಾಯ್ನ್ ಹಗರಣದ ಬಗ್ಗೆ ಮಾತಾಡಿದ್ರಾ? ದಿನ ಯತ್ನಾಳ್ ಹೇಳಿಕೆ ಕೊಡುವಾಗ ಒಮ್ಮೆಯಾದರೂ ಮಾತಾಡಿದ್ರಾ? ಈಶ್ವರಪ್ಪಗೆ ಕಟೀಲ್ ಯಾಕಿಷ್ಟು ಹೆದರ್ತಾರೆ? ಕಟೀಲ್​ಗೆ ನೇರವಾಗಿ ಪ್ರಶ್ನೆ ಕೇಳ್ತೀನಿ, ಬಿಟ್ ಕಾಯ್ನ್ ಹಗರಣದ ಬಗ್ಗೆ ಒಮ್ಮೆಯಾದರೂ ಮಾತಾಡಿ. ಪೊಲೀಸ್ ನೇಮಕಾತಿ ಅಕ್ರಮದ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ನಾನು ಯಾವುದೇ ತನಿಖೆಗೂ ಸಿದ್ದನಿದ್ದೇನೆ: ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

ನಾನು ಯಾವುದೇ ತನಿಖೆಗೂ ಸಿದ್ದನಿದ್ದೇನೆ. ನೀವು ಒಳ್ಳೆಯ ಕೆಲಸ ಮಾಡ್ತಿದ್ದೀರಿ, ಭ್ರಷ್ಟಾಚಾರ ರಹಿತ ಕೆಲಸ ಮಾಡ್ತಿದ್ದೀರಿ ಎಂದು ಹೇಳಿದ್ದರು. ಈಗ ಬಾಯಿ ತಪ್ಪಿನಿಂದ ಮಾತನಾಡಿದ್ದಾರೋ ಗೊತ್ತಿಲ್ಲ. ಸತ್ಯ ಹರಿಶ್ಚಂದ್ರನ ರೀತಿಯಲ್ಲಿ ಪ್ರಶ್ನೆ ಮಾಡ್ತಾರೆ. ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ಎರಡು ದಿನ ಇವರ ಆರೋಪ ಚರ್ಚೆ ಆಗುತ್ತದೆ. ಇದೆಲ್ಲವನ್ನೂ ಮೀರಿ ಬೆಳೆಯುತ್ತೇವೆ. ನೂರಕ್ಕೆ ನೂರು ಗೆದ್ದು ಮತ್ತೆ ಅಧಿಕಾರ ಮಾಡುತ್ತೇವೆ ಎಂದು ಹೊಸಪೇಟೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಟೀಕೆ ಸತ್ಯಕ್ಕೆ ಅಪಚಾರ ಆಗುವ ರೀತಿ ಇರಬಾರದು. ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಅಕ್ರಮಗಳು ಆಗುತ್ತಿದ್ದವು. ಟೆಂಡರ್​ನಲ್ಲಿ ಗೋಲ್​ಮಾಲ್ ಆಗುತ್ತಿತ್ತು. ಇದರ ಬಗ್ಗೆ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ನನಗೆ ದೂರು ಕೊಟ್ಟಿದ್ರು. ಅಧಿಕಾರಿಗಳು ಸಹಾ ನನ್ನ ಗಮನಕ್ಕೆ ತಂದಿದ್ರು. ಹೀಗಾಗಿ ನಾವು ಈಗ ನಿಯಮ ಬದಲಿಸಿಕೊಂಡಿದ್ದೇವೆ. ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ಹಾಕುತ್ತೇವೆ. ನಾನು ಸಮಾಜ ಕಲ್ಯಾಣ ಇಲಾಖೆ ತೆಗೆದುಕೊಂಡು ಏಳು ತಿಂಗಳು ಆಯಿತು. ಹಿಂದೆ ಒಂದು ಟೆಂಡರ್ ಆಗಿತ್ತು, ಬಳಿಕ ಕೋರ್ಟ್ ಗೆ ಹೊಯ್ತು. ಕೋರ್ಟ್ ಆದೇಶಕ್ಕಿಂತ ಮೊದಲೇ ಕೊಳವೆ ಬಾವಿ ಕೊರೆಯಲಾಗಿತ್ತು. ಕಳಪೆ ಕೆಲಸ ಆದ್ರೆ ಬಿಲ್ ಮಾಡಬೇಡಿ ಅಂತ ಕೋರ್ಟ್ ಆದೇಶ ಮಾಡಿತ್ತು. ಹಾಗಾಗಿ ರೈತರ ಖಾತೆಗೆ ನೇರ ಹಣ ಹಾಕುತ್ತಿದ್ದೇವೆ. ಕೊಳವೆ ಬಾವಿ ಕೊರೆಸಿದ ರೈತನಿಗೆ ದುಡ್ಡು ಹಾಕಿದ್ದೇವೆ. ಸದನದಲ್ಲಿ ಕೂಡ ಉತ್ತರ ಕೊಟ್ಟಿದ್ದೇನೆ. ಮತ್ತೆ ಆರೋಪ ಮಾಡುತ್ತಿದ್ದಾರೆ. ಪರ್ಸಂಟೇಜ್ ಆರೋಪ ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿ ಶೂನ್ಯ ಭ್ರಷ್ಟಾಚಾರ ಇದೆ. ನಾವು ಯಾವುದೇ ತನಿಖೆ ಮಾಡಿದ್ರೂ ನಾನು ಸಿದ್ಧ ಎಂದು ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದವರು ಹಾಸಿಗೆ, ದಿಂಬು ಕೊಡುವಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ

ಇದನ್ನೂ ಓದಿ: Congress Press Meet: ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ಹಾಕಿ ಬಂಧಿಸಬೇಕು -ರಾಜ್ಯಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್