Congress Press Meet: ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ಹಾಕಿ ಬಂಧಿಸಬೇಕು -ರಾಜ್ಯಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಈಶ್ವರಪ್ಪ ವಿರುದ್ಧ ಸಂತೋಷ್ ನೇರ ಆರೋಪ ಮಾಡಿದ್ದರು. ಆದ್ರೆ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ಹಾಕಿಲ್ಲ. ಕೂಡಲೇ ಭ್ರಷ್ಟಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಲಿ.
ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು ನಿನ್ನೆ ಸಿಎಂ ಬೊಮ್ಮಾಯಿಗೆ(CM Basavaraj Bommai) ಘೇರಾವ್ ಹಾಕಲು ಹೋಗ್ತಿದ್ದೆವು. ಆದ್ರೆ ಪೊಲೀಸರು ಮಾರ್ಗಮಧ್ಯದಲ್ಲೇ ನಮ್ಮನ್ನು ತಡೆದರು. ನಮ್ಮನ್ನು ತಡೆದು ಬಂಧಿಸಿ, ಜಾಮೀನಿನ ಮೇಲೆ ಬಿಟ್ಟರು. ಬಳಿಕ ಅಹೋರಾತ್ರಿ ಧರಣಿಗೆ ತೀರ್ಮಾನಿಸಿ ಹೋರಾಟ ಮಾಡಿದ್ವಿ ಎಂದು ಸುದ್ದಿಗೋಷ್ಠಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತಿಳಿಸಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತ ಸಂತೋಷ್ ಆತ್ಮಹತ್ಯೆಯೇ ಸಾಕ್ಷಿ. ನಾವು ಒತ್ತಡ ಹಾಕಿದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ದೂರಿನಲ್ಲಿ ಈಶ್ವರಪ್ಪ ವಿರುದ್ಧ ನೇರ ಆರೋಪ ಮಾಡಲಾಗಿತ್ತು. ಈಶ್ವರಪ್ಪ ಭರವಸೆ ಬಳಿಕವೇ ಸಂತೋಷ್ ಕಾಮಗಾರಿ ನಡೆಸಿದ್ರು. ಬಿಲ್ ಪಾವತಿಗೆ 40 ಪರ್ಸೆಂಟ್ ಕಮಿಷನ್ ಕೇಳಿದ್ದ ಈಶ್ವರಪ್ಪ ಲಂಚ ಕೊಡದಿದ್ದಕ್ಕೆ ತುಂಬಾನೇ ಕಿರುಕುಳ ನೀಡಿದ್ದ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ನೀಡಲಾಗಿತ್ತು. ಉದ್ದೇಶಪೂರ್ವಕವಾಗಿ ಈ ಕಾಯ್ದೆಯಡಿ ದೂರು ದಾಖಲಿಸಿಲ್ಲ. ಬಿಲ್ ಪಾವತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಈಶ್ವರಪ್ಪ ವಿರುದ್ಧ ಸಂತೋಷ್ ನೇರ ಆರೋಪ ಮಾಡಿದ್ದರು. ಆದ್ರೆ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ಹಾಕಿಲ್ಲ. ಕೂಡಲೇ ಭ್ರಷ್ಟಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಲಿ. ಪ್ರಕರಣ ದಾಖಲಿಸಿ ಕೂಡಲೇ ಈಶ್ವರಪ್ಪನನ್ನು ಬಂಧಿಸಲಿ ಎಂದು ರಾಜ್ಯಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
1 ಕೋಟಿ ರೂ. ಪರಿಹಾರ, ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲಿ. ಸಂತೋಷ್ ನಡೆಸಿದ್ದ ಕಾಮಗಾರಿ ಬಿಲ್‌ನ್ನು ಕೂಡಲೇ ಪಾವತಿಸಲಿ. ನಾಳೆಯಿಂದ 9 ತಂಡಗಳು ಜಿಲ್ಲಾ ಕೇಂದ್ರಗಳಿಗೆ ತೆರಳಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸ್ತೇವೆ. ಸಂತೋಷ್ ಕೇಸ್ ಮುಚ್ಚಿಹಾಕಲು ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಲಿ. ಈಶ್ವರಪ್ಪರನ್ನ ಸಂತೋಷ್ ಭೇಟಿಯಾದ ಬಗ್ಗೆ ಸಾಕ್ಷ್ಯಾಧಾರಗಳಿವೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಸಂತೋಷ್ ಕುಟುಂಬಕ್ಕೆ ನ್ಯಾಯ ಸಿಗಲು ಹೋರಾಟ ಮಾಡ್ತಿದ್ದೇವೆ. ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಹೋರಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ರು.
ಇನ್ನು ಹೊಸಪೇಟೆಯಲ್ಲಿ ನಾಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ವಿಚಾರಕ್ಕೆ ಸಂಬಂಧಿಸಿ ಹೊಸಪೇಟೆಯಲ್ಲೂ ನಾಳೆ ಪ್ರತಿಭಟನೆ ಮಾಡುತ್ತೇವೆ. ಆದ್ರೆ ನಾಳೆ ಯಾರಿಗೂ ಮುತ್ತಿಗೆ ಹಾಕಲು ಹೋಗುವುದಿಲ್ಲ. ಬಳ್ಳಾರಿ, ಹೊಸಪೇಟೆಯಲ್ಲೂ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದ್ರು.
ಇದನ್ನೂ ಓದಿ: Nepal Economic Crisis: ಶ್ರೀಲಂಕಾದ ಬೆನ್ನಲ್ಲೇ ನೇಪಾಳದಲ್ಲೂ ತೀವ್ರ ಆರ್ಥಿಕ ಬಿಕ್ಕಟ್ಟು; ತಜ್ಞರು ಏನಂತಾರೆ?
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಶೀಘ್ರ ರಾಜೀನಾಮೆ: ಇಬ್ರಾಹಿಂಗೆ ಹೊಸ ಪಟ್ಟ
Published On - 1:36 pm, Fri, 15 April 22