AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಶೀಘ್ರ ರಾಜೀನಾಮೆ: ಇಬ್ರಾಹಿಂಗೆ ಹೊಸ ಪಟ್ಟ

ಕೆಲವು ಕಿಡಿಗೇಡಿಗಳು ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯ ಕದಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ಶೀಘ್ರ ರಾಜೀನಾಮೆ: ಇಬ್ರಾಹಿಂಗೆ ಹೊಸ ಪಟ್ಟ
ಜೆಡಿಎಸ್ ನಾಯಕ ಎಚ್.ಕೆ.ಕುಮಾರಸ್ವಾಮಿ ಮತ್ತು ಸಿ.ಎಂ.ಇಬ್ರಾಹಿಂ
TV9 Web
| Edited By: |

Updated on:Apr 15, 2022 | 1:11 PM

Share

ಹಾಸನ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ (ಏಪ್ರಿಲ್ 17) ರಾಜೀನಾಮೆ ನೀಡುವುದಾಗಿ ಸಕಲೇಶಪುರ ಶಾಸಕ ಎಚ್​.ಕೆ.ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ರಾಜ್ಯ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್​ನಿಂದ ಜೆಡಿಎಸ್​ಗೆ ಸೇರುವುದಾಗಿ ಇಬ್ರಾಹಿಂ ಇತ್ತೀಚೆಗಷ್ಟೇ ಘೋಷಿಸಿದ್ದರು. ರಾಜೀನಾಮೆ ಕುರಿತು ಈಗಾಗಲೇ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲಾಗುತ್ತಿದೆ ಎಂದು ಎಚ್​.ಕೆ.ಕುಮಾರಸ್ವಾಮಿ ಹೇಳಿದ್ದರು. ದೇಶದಲ್ಲಿ ಎಲ್ಲ ಧರ್ಮದವರು ಬದುಕುವ ಹಕ್ಕನ್ನು ಪಡೆದಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯ ಕದಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಎಲ್ಲರಿರೂ ವ್ಯಾಪಾರ ಮಾಡೊ ಹಕ್ಕಿದೆ, ಮಾಡಿಕೊಳ್ಳಲಿ ಬಿಡಿ. ವಿನಾಕಾರಣ ಹಿಂದೂ-ಮುಸ್ಲಿಮ್ ಎಂದು ಒಡೆದು ಆಳುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ತೊರೆದ ಸಿ.ಎಂ. ಇಬ್ರಾಹಿಂ ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್​ಗೆ ಸೇರ್ಪಡೆಯಾಗಲಿದ್ದಾರೆ. ಅಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಹಾಲಿ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿಗೆ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸಮಾನವಾದ ಹುದ್ದೆ ಸೃಷ್ಟಿ ಮಾಡಲಾಗಿದ್ದು, ಪಕ್ಷದಲ್ಲಿ ಅವರಿಗೆ ವೇದಿಕೆ ಕಲ್ಪಿಸಲಾಗಿದೆ.

ಜೆಡಿಎಸ್‌ಗೆ ಬರಲಿರುವ ಸಿ.ಎಂ.ಇಬ್ರಾಹಿಂ ಅವರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ಪಕ್ಷದ ವರಿಷ್ಠ ಎಚ್​.ಡಿ.ದೇವೇಗೌಡ ಇತ್ತೀಚೆಗೆ ರಾಮನಗರದಲ್ಲಿ ಘೋಷಿಸಿದ್ದರು. ‘ಇದೇ 17ರಂದು ಪಕ್ಷದ ಕಚೇರಿಯಲ್ಲಿ ಅವರಿಗೆ ಹೊಸ ಜವಾಬ್ದಾರಿ ನೀಡಲಾಗುವುದು. ಹಾಲಿ ಅಧ್ಯಕ್ಷರಾಗಿರುವ ಎಚ್.ಕೆ. ಕುಮಾರಸ್ವಾಮಿ ಅವರನ್ನು ಸಂಸದೀಯ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು. ಇಬ್ಬರೂ ಸಹೋದರರಂತೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕು’ ಎಂದು ಗೌಡರು ಸಲಹೆ ಮಾಡಿದ್ದರು.

ರಾಮನಗರದಲ್ಲಿ ಮಾತನಾಡಿದ್ದ ಇಬ್ರಾಹಿಂ, 1994ರಲ್ಲಿ ರಾಮನಗರದಿಂದಲೇ ದೇವೆಗೌಡರ ಪರ್ವ ಆರಂಭ ಮಾಡಿದ್ದು. ಇದೀಗ ಕುಮಾರಸ್ವಾಮಿ ‌ಪರ್ವ ಕೂಡ ಇದೇ ಕ್ಷೇತ್ರದಿಂದ ಆರಂಭವಾಗುತ್ತದೆ. ಮೇ ತಿಂಗಳಿಂದ ಪ್ರವಾಸ ಶುರು ಮಾಡ್ತೀನಿ. ಕುಮಾರಸ್ವಾಮಿ ಸರ್ಕಾರ ಮತ್ತೆ ಮೂರನೇ ಮಹಡಿಯಲ್ಲಿ ‌ಕೂರುವ ಯಾತ್ರೆ ಸಂಕಲ್ಪ ಮಾಡ್ತೀನಿ. ರೈತರಿಗೆ ನಾನು ಅನ್ಯಾಯ ಮಾಡೊಲ್ಲ ಬೇಕಿದ್ರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದ್ರು ದೇವೇಗೌಡರು. ನೀರಾವರಿಗಾಗಿ ರಾಜೀನಾಮೆ ಕೊಡುತ್ತೇನೆ, ರೈತರ ಮಕ್ಕಳ ಬಾಯಿಗೆ ಮಣ್ಣ ಹಾಕಲ್ಲ ಅಂತಾ ದೇವೇಗೌಡರು ಹೇಳಿದ್ದರು. ಆದರೆ ‌ಇದೀಗ ಅಂತಹ ಒಂದು ಮಾದರಿ ಪೀಸ್ ಇದೆಯಾ? ಇವತ್ತಿಗೆ 23 ವರ್ಷ ಆಯಿತು ನಮ್ಮನ್ನ ಅಧಿಕಾರದಿಂದ ತೆಗೆದು. ಕುಮಾರಸ್ವಾಮಿ ‌ಕೇಂದ್ರ ಸರ್ಕಾರವನ್ನ ಕೂಡ ನೋಡುತ್ತಾರೆ. ಆ ಕಾಲ ಕೂಡ ಬರಲಿದೆ. ನಾವು ಸಿಂಹ ದಾಟಿಸಲು ಬಂದಿದ್ದೇವೆ. ಮೇಕೆ ದಾಟಿಸಲು ಅಲ್ಲ ಎಂದು ಹೇಳಿದರು.

ಈ ಬಿಜೆಪಿ ಸರ್ಕಾರ ಒಳ್ಳೇ ರೀತಿಯಲ್ಲಿ ಕೆಲಸ ಮಾಡಲಿ ಅಂತಾ ಮೂರು ವರ್ಷದಿಂದ ಸುಮ್ಮನಿದ್ದೆ. ಆದ್ರೆ ಇವರು ಯಾವುದೇ ಒಳ್ಳೇ ಕೆಲಸ ಮಾಡ್ತಿಲ್ಲ. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡ್ತಿಲ್ಲ. 2008ರಲ್ಲಿ ಮನವಿ ಮಾಡಿದ್ದಕ್ಕೆ ನನಗೆ ಸಂಪೂರ್ಣವಾಗಿ ಅವಕಾಶ ಮಾಡಿಕೊಟ್ರಿ. ಈಗ 40 ಪರ್ಸೆಂಟ್ ಕಥೆ ನಡೆಯುತ್ತಿದೆಯಲ್ಲ!? ಆದ್ರಲ್ಲಿ ಇವತ್ತು ಬಿಜೆಪಿ ಕಾರ್ಯಕರ್ತ, ಕಾಂಟ್ರ್ಯಾಕ್ಟರ್ ಸೂಸೈಡ್ ಮಾಡಿಕೊಂಡಿದ್ದಾನೆ. ಒಬ್ಬ ಸಚಿವನ ಮೇಲೆ ಆರೋಪ ಮಾಡಿದ್ದಾನೆ. ಈ ಬಿಜೆಪಿಯವರು ಯಾರನ್ನ ಸಾಯಿಸ್ತಾರೋ ಯಾರನ್ನ ಬಿಡ್ತಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: CM Ibrahim: ರಾಜ್ಯಾಧ್ಯಕ್ಷರಾಗಿ, ಸಿಎಂ ಇಬ್ರಾಹಿಂ ಬೆಂಗಳೂರಿನಲ್ಲಿ ಭಾನುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಇದನ್ನೂ ಓದಿ: ಜೆಡಿಎಸ್​ಗೆ ಬಹುಮತ ಕೊಡಿ, 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ; ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

Published On - 1:11 pm, Fri, 15 April 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು