CM Ibrahim: ರಾಜ್ಯಾಧ್ಯಕ್ಷರಾಗಿ, ಸಿಎಂ ಇಬ್ರಾಹಿಂ ಬೆಂಗಳೂರಿನಲ್ಲಿ ಭಾನುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

JDS: ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ತೊರೆದ ಸಿ.ಎಂ. ಇಬ್ರಾಹಿಂ ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್​ಗೆ ಸೇರ್ಪಡೆಯಾಗಲಿದ್ದಾರೆ. ಅಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

CM Ibrahim: ರಾಜ್ಯಾಧ್ಯಕ್ಷರಾಗಿ, ಸಿಎಂ ಇಬ್ರಾಹಿಂ ಬೆಂಗಳೂರಿನಲ್ಲಿ ಭಾನುವಾರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 12, 2022 | 6:08 PM

ರಾಮನಗರ: ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ತೊರೆದ ಸಿ.ಎಂ. ಇಬ್ರಾಹಿಂ ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್​ಗೆ ಸೇರ್ಪಡೆಯಾಗಲಿದ್ದಾರೆ. ಅಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಹಾಲಿ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿಗೆ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸಮಾನವಾದ ಹುದ್ದೆ ಸೃಷ್ಟಿ ಮಾಡಲಾಗಿದ್ದು, ಪಕ್ಷದಲ್ಲಿ ಅವರಿಗೆ ವೇದಿಕೆ ಕಲ್ಪಿಸಲಾಗಿದೆ. ಇಬ್ಬರೂ ಕೂಡಾ ಸೋದರರಂತೆ ಪಕ್ಷವನ್ನು ಮುನ್ನಡೆಸಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಇದೇ ಸಂದರ್ಭದಲ್ಲಿ ಬಯಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ 1994 ರಲ್ಲಿ ರಾಮನಗರದಿಂದಲೇ ದೇವೆಗೌಡರ ಪರ್ವ ಆರಂಭ ಮಾಡಿದ್ದು. ಇದೀಗ ಕುಮಾರಸ್ವಾಮಿ ‌ಪರ್ವ ಕೂಡ ಇದೇ ಕ್ಷೇತ್ರದಿಂದ ಆರಂಭವಾಗುತ್ತದೆ. ಮೇ ತಿಂಗಳಿಂದ ಪ್ರವಾಸ ಶುರು ಮಾಡ್ತೀನಿ. ಕುಮಾರಸ್ವಾಮಿ ಸರ್ಕಾರ ಮತ್ತೆ ಮೂರನೇ ಮಹಡಿಯಲ್ಲಿ ‌ಕೂರುವ ಯಾತ್ರೆ ಸಂಕಲ್ಪ ಮಾಡ್ತೀನಿ. ರೈತರಿಗೆ ನಾನು ಅನ್ಯಾಯ ಮಾಡೊಲ್ಲ ಬೇಕಿದ್ರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂದ್ರು ದೇವೇಗೌಡರು. ನೀರಾವರಿಗಾಗಿ ರಾಜೀನಾಮೆ ಕೊಡುತ್ತೇನೆ, ರೈತರ ಮಕ್ಕಳ ಬಾಯಿಗೆ ಮಣ್ಣ ಹಾಕಲ್ಲ ಅಂತಾ ದೇವೇಗೌಡರು ಹೇಳಿದ್ದರು. ಆದರೆ ‌ಇದೀಗ ಅಂತಹ ಒಂದು ಮಾದರಿ ಪೀಸ್ ಇದೆಯಾ? ಇವತ್ತಿಗೆ 23 ವರ್ಷ ಆಯಿತು ನಮ್ಮನ್ನ ಅಧಿಕಾರದಿಂದ ತೆಗೆದು. ಕುಮಾರಸ್ವಾಮಿ ‌ಕೇಂದ್ರ ಸರ್ಕಾರವನ್ನ ಕೂಡ ನೋಡುತ್ತಾರೆ. ಆ ಕಾಲ ಕೂಡ ಬರಲಿದೆ. ನಾವು ಸಿಂಹ ದಾಟಿಸಲು ಬಂದಿದ್ದೇವೆ. ಮೇಕೆ ದಾಟಿಸಲು ಅಲ್ಲ ಎಂದು ಹೇಳಿದರು.

ಈ ಬಿಜೆಪಿ ಸರ್ಕಾರ ಒಳ್ಳೇ ರೀತಿಯಲ್ಲಿ ಕೆಲಸ ಮಾಡಲಿ ಅಂತಾ ಮೂರು ವರ್ಷದಿಂದ ಸುಮ್ಮನಿದ್ದೆ. ಆದ್ರೆ ಇವರು ಯಾವುದೇ ಒಳ್ಳೇ ಕೆಲಸ ಮಾಡ್ತಿಲ್ಲ. ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡ್ತಿಲ್ಲ. 2008ರಲ್ಲಿ ಮನವಿ ಮಾಡಿದ್ದಕ್ಕೆ ನನಗೆ ಸಂಪೂರ್ಣವಾಗಿ ಅವಕಾಶ ಮಾಡಿಕೊಟ್ರಿ. ಈಗ 40 ಪರ್ಸೆಂಟ್ ಕಥೆ ನಡೆಯುತ್ತಿದೆಯಲ್ಲ!? ಆದ್ರಲ್ಲಿ ಇವತ್ತು ಬಿಜೆಪಿ ಕಾರ್ಯಕರ್ತ, ಕಾಂಟ್ರ್ಯಾಕ್ಟರ್ ಸೂಸೈಡ್ ಮಾಡಿಕೊಂಡಿದ್ದಾನೆ. ಒಬ್ಬ ಸಚಿವನ ಮೇಲೆ ಆರೋಪ ಮಾಡಿದ್ದಾನೆ. ಈ ಬಿಜೆಪಿಯವರು ಯಾರನ್ನ ಸಾಯಿಸ್ತಾರೋ ಯಾರನ್ನ ಬಿಡ್ತಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

CM Ibrahim: ನಾವು ಸಿಂಹ ದಾಟಿಸೋಕೆ ಬಂದಿದ್ದೇವೆ ಮೇಕೆನಲ್ಲ, ಕಾಂಗ್ರೆಸ್‌ಗೆ ಇಬ್ರಾಹಿಂ ಟಾಂಗ್‌

ಇದನ್ನೂ ಓದಿ: ಪ್ರಧಾನಿ, ಉಪರಾಷ್ಟ್ರಪತಿಗೆ ಪತ್ರ ಬರೆದರೂ ದಶಕಗಳ ಸಮಸ್ಯೆಗೆ ಪರಿಹಾರವಿಲ್ಲ: ಸುದ್ದಿಗೋಷ್ಠಿಯಲ್ಲಿ ಗಳಗಳನೆ ಅತ್ತ ವೃದ್ಧ

ಇದನ್ನೂ ಓದಿ: Santosh Suicide: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚದ ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ

Published On - 2:38 pm, Tue, 12 April 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು