ಪ್ರಧಾನಿ, ಉಪರಾಷ್ಟ್ರಪತಿಗೆ ಪತ್ರ ಬರೆದರೂ ದಶಕಗಳ ಸಮಸ್ಯೆಗೆ ಪರಿಹಾರವಿಲ್ಲ: ಸುದ್ದಿಗೋಷ್ಠಿಯಲ್ಲಿ ಗಳಗಳನೆ ಅತ್ತ ವೃದ್ಧ

ಪ್ರಧಾನಿ, ಉಪರಾಷ್ಟ್ರಪತಿಗೆ ಪತ್ರ ಬರೆದರೂ ದಶಕಗಳ ಸಮಸ್ಯೆಗೆ ಪರಿಹಾರವಿಲ್ಲ: ಸುದ್ದಿಗೋಷ್ಠಿಯಲ್ಲಿ ಗಳಗಳನೆ ಅತ್ತ ವೃದ್ಧ
ಕಲ್ಲಪ್ಪ ಕಡಬಲ್ಲವರ ಕಣ್ಣೀರು

11 ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ವೃದ್ದನ ಹೋರಾಟ ನಡೆಯುತ್ತಿದೆ. ಆದರೂ ದಶಕಗಳಿಂದ ಸಾರ್ವಜನಿಕ ಸಮಸ್ಯೆಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವೃದ್ಧ ಒಬ್ಬರು ಸುದ್ದಿಗೋಷ್ಠಿಯಲ್ಲೇ ಗಳಗಳನೆ ಕಣ್ಣೀರು ಹಾಕಿದ್ದಾರೆ.

TV9kannada Web Team

| Edited By: ganapathi bhat

Apr 12, 2022 | 2:50 PM

ಬಾಗಲಕೋಟೆ: ಹಲವು ದಶಕಗಳಿಂದ ಸಾರ್ವಜನಿಕರ ಸಮಸ್ಯೆಗಳಿಗೆ ನ್ಯಾಯ ಸಿಕ್ಕಿಲ್ಲ. ಜೀವನ ಪೂರ್ತಿ ಹೋರಾಟ ಮಾಡಿದ್ರೂ ನ್ಯಾಯ ಸಿಗುತ್ತಿಲ್ಲ. ಗ್ರಾಮದಲ್ಲಿ ಗಾವಠಾಣ ಜಾಗೆಯನ್ನು ಮುಸ್ಲಿಂರು ಅತಿಕ್ರಮಣ ಮಾಡಿರುವ ಆರೋಪ ಇದೆ. ಸಂತ್ರಸ್ತರಿಗೆ ಹಂಚಿಕೆ ಮಾಡಿರುವ ಆಶ್ರಯ ಮನೆಗಳಲ್ಲಿ ಲೋಪ ಇರುವ ಬಗ್ಗೆ ಮಾಹಿತಿ ಲಭಿಸಿದೆ. ಸರ್ಕಾರಿ ಶಾಲೆ ಕಟ್ಟಡ ಪುನರ್ ನಿರ್ಮಾಣಕ್ಕೆ ಆಗ್ರಹ ಕೇಳಿಬಂದಿದೆ. ಹೀಗೆ 11 ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ವೃದ್ದನ ಹೋರಾಟ ನಡೆಯುತ್ತಿದೆ. ಆದರೂ ದಶಕಗಳಿಂದ ಸಾರ್ವಜನಿಕ ಸಮಸ್ಯೆಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ವೃದ್ಧ ಒಬ್ಬರು ಸುದ್ದಿಗೋಷ್ಠಿಯಲ್ಲೇ ಗಳಗಳನೆ ಕಣ್ಣೀರು ಹಾಕಿದ್ದಾರೆ.

ಬಾಗಲಕೋಟೆ ಪ್ರೆಸ್ ಕ್ಲಬ್​ನಲ್ಲಿ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕಲ್ಲಪ್ಪ ಕಡಬಲ್ಲವರ ಕಣ್ಣೀರು ಹಾಕಿದ್ದಾರೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸ್ಥಳೀಯ, ಜಿಲ್ಲಾಡಳಿತ, ಸರ್ಕಾರ, ಲೋಕಾಯುಕ್ತರಿಗೆ ದೂರು ಸಲ್ಲಿಸಿದರೂ ನ್ಯಾಯ ಸಿಕ್ಕಿಲ್ಲ. ಪ್ರಧಾನಮಂತ್ರಿ, ಉಪರಾಷ್ಟ್ರಪತಿಗಳಿಗೂ ಪತ್ರ ಬರೆದಿರುವ ಸಾಮಾಜಿಕ ಕಾರ್ಯಕರ್ತರಿಗೆ ನ್ಯಾಯ ದೊರಕಿಲ್ಲ. ಪ್ರಧಾನಿ, ಉಪರಾಷ್ಟ್ರಪತಿ ಕಾರ್ಯಾಲಯದಿಂದ ರಾಜ್ಯ ಸರ್ಕಾರಕ್ಕೆ ಸೂಚನಾ ಪತ್ರ ಬಂದಿದೆ. ಇಷ್ಟಾದರೂ ನ್ಯಾಯ ಸಿಗತಿಲ್ಲ ಎಂದು ಕಾರ್ಯಕರ್ತ ಕಣ್ಣೀರು ಹಾಕಿದ್ದಾರೆ. ಇದೀಗ ಅಂತಿಮವಾಗಿ ಆಮರಣ ಉಪವಾಸ ಕೂರಲೂ ನಿರ್ಧಾರ ಮಾಡಲಾಗಿದೆ. ಇದೇ ತಿಂಗಳ 18 ನೇ ತಾರೀಖಿನಿಂದ ಢವಳೇಶ್ವರದಲ್ಲಿ ಆಮರಣ ಉಪವಾಸ ಕೂರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ ಪತ್ರಕರ್ತನನ್ನು ಥಳಿಸಿ, ಆಸ್ಪತ್ರೆಯ ಬೆಡ್​ಗೆ ಕಟ್ಟಿಹಾಕಿದ ಪೊಲೀಸರು

ಇದನ್ನೂ ಓದಿ: ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಪಾವತಿ

Follow us on

Related Stories

Most Read Stories

Click on your DTH Provider to Add TV9 Kannada