ಕೇಂದ್ರೀಯ ವಿದ್ಯಾಲಯಗಳಲ್ಲಿ ಎಂಪಿ ಕೋಟಾ ರದ್ದು, ಪ್ರವೇಶ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಕೇಂದ್ರ

ಕೇಂದ್ರೀಯ ವಿದ್ಯಾಲಯಗಳಲ್ಲಿ ಎಂಪಿ ಕೋಟಾ ರದ್ದು, ಪ್ರವೇಶ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ ಕೇಂದ್ರ
ಕೇಂದ್ರೀಯ ವಿದ್ಯಾಲಯ

ಸಂಸದ ಕೋಟಾವನ್ನು ಹೊರತುಪಡಿಸಿ, ಶಿಕ್ಷಣ ಸಚಿವಾಲಯದ ನೌಕರರ 100 ಮಕ್ಕಳು, ಸಂಸದರ ಮಕ್ಕಳು ಮತ್ತು ಮೊಮ್ಮಕ್ಕಳು, ನಿವೃತ್ತ ಕೆವಿ ನೌಕರರು ಮತ್ತು ಶಾಲಾ ಆಡಳಿತ ಸಮಿತಿ ಅಧ್ಯಕ್ಷರ ಕೋಟಾ ಸೇರಿದಂತೆ ಇತರ ಮೀಸಲಾತಿಗಳನ್ನು ಕೆವಿಎಸ್ ತೆಗೆದುಹಾಕಿದೆ.

TV9kannada Web Team

| Edited By: Rashmi Kallakatta

Apr 26, 2022 | 2:52 PM

ದೆಹಲಿ: ಕೇಂದ್ರೀಯ ವಿದ್ಯಾಲಯಗಳಿಗೆ (Kendriya Vidyalaya) ಪ್ರವೇಶಕ್ಕಾಗಿ ಸಂಸತ್ ಸದಸ್ಯ (MP) ಕೋಟಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ ಮತ್ತು ಸೋಮವಾರ ಪರಿಷ್ಕೃತ ಪ್ರವೇಶ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) ಎಂಪಿ ಕೋಟಾ ಸೇರಿದಂತೆ ‘ವಿಶೇಷ ನಿಬಂಧನೆಗಳ’ ಅಡಿಯಲ್ಲಿ ಪ್ರವೇಶವನ್ನು ಮುಂದಿನ ಆದೇಶದವರೆಗೆ ತಡೆಹಿಡಿದ ಒಂದು ವಾರದ ನಂತರ ಈ ಕ್ರಮವು ಬಂದಿದೆ. ಕೆವಿಎಸ್ ವಿಶೇಷ ವಿತರಣಾ ಪ್ರವೇಶ ಯೋಜನೆ ಅಥವಾ ಸಂಸದರ ಕೋಟಾದ ಅಡಿಯಲ್ಲಿ, ಸಂಸತ್ತಿನ ಸದಸ್ಯರು 1 ರಿಂದ 9 ನೇ ತರಗತಿಗಳ ಪ್ರವೇಶಕ್ಕಾಗಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ ತಮ್ಮ ಕ್ಷೇತ್ರಗಳಿಂದ ಗರಿಷ್ಠ 10 ವಿದ್ಯಾರ್ಥಿಗಳನ್ನು ಶಿಫಾರಸು ಮಾಡುವ ಅಧಿಕಾರವನ್ನು ಹೊಂದಿದ್ದರು. ಕೋಟಾವನ್ನು ರದ್ದುಪಡಿಸಬೇಕು ಅಥವಾ ಶಿಫಾರಸುಗಳ ಆಧಾರದ ಮೇಲೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಂಸದರಿಂದ ಬಹುಕಾಲದ ಬೇಡಿಕೆಯಿದೆ. ಕೆವಿಎಸ್ ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಪ್ರವೇಶ ನೀತಿಯ ‘ವಿಶೇಷ ನಿಬಂಧನೆಗಳು’ ವಿಭಾಗದ ಅಡಿಯಲ್ಲಿ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ. ಸಂಸದ ಕೋಟಾವನ್ನು ಹೊರತುಪಡಿಸಿ, ಶಿಕ್ಷಣ ಸಚಿವಾಲಯದ ನೌಕರರ 100 ಮಕ್ಕಳು, ಸಂಸದರ ಮಕ್ಕಳು ಮತ್ತು ಮೊಮ್ಮಕ್ಕಳು, ನಿವೃತ್ತ ಕೆವಿ ನೌಕರರು ಮತ್ತು ಶಾಲಾ ಆಡಳಿತ ಸಮಿತಿ ಅಧ್ಯಕ್ಷರ ಕೋಟಾ ಸೇರಿದಂತೆ ಇತರ ಮೀಸಲಾತಿಗಳನ್ನು ಕೆವಿಎಸ್ ತೆಗೆದುಹಾಕಿದೆ.

ಹೆಸರು ಹೇಳಲಿಚ್ಛಿಸದ ಕೆವಿಎಸ್‌ನ ಹಿರಿಯ ಅಧಿಕಾರಿಯೊಬ್ಬರು ಸಂಘಟನೆಯು ಸೂಕ್ತ ಪರಿಗಣನೆಯ ನಂತರ ತಿದ್ದುಪಡಿಗಳನ್ನು ಮಾಡಿದೆ ಎಂದು ಹೇಳಿದರು. “ಪ್ರವೇಶದ ‘ವಿಶೇಷ ನಿಬಂಧನೆಗಳು’ ವಿಭಾಗದ ಅಡಿಯಲ್ಲಿ ಕೆಲವು ಇತರ ಕೋಟಾಗಳೊಂದಿಗೆ ಸಂಸದ ಕೋಟಾವನ್ನು ರದ್ದುಗೊಳಿಸಲಾಗಿದೆ. ಅವುಗಳ ಜಾಗದಲ್ಲಿ ಕೆಲವು ಹೊಸ ಕೋಟಾಗಳನ್ನೂ ಸೇರಿಸಲಾಗಿದೆ ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹೊಸ ಕೋಟಾಗಳು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಗುಂಪು ಬಿ ಮತ್ತು ಸಿ ಕೇಂದ್ರ ಪೊಲೀಸ್ ಸಂಸ್ಥೆಗಳ ವಾರ್ಡ್‌ಗಳಾದ  ಸಿಆರ್ ಪಿಎಫ್ , ಬಿಎಸ್ ಎಫ್ , ಐಟಿಬಿಪಿ,ಎಸ್ ಎಸ್ ಬಿ,ಸಿಐಎಸ್ ಎಫ್, ಎನ್ ಡಿ ಆರ್ ಎಫ್  ಮತ್ತು ಅಸ್ಸಾಂ ರೈಫಲ್ಸ್‌, ಗೃಹ ಸಚಿವಾಲಯದ ಪಟ್ಟಿ ಆಧರಿಸಿ ಆಂತರಿಕ ಭದ್ರತೆ, ಗಡಿ ಭದ್ರತೆ, ವಿಪತ್ತು ಪ್ರತಿಕ್ರಿಯೆಗಳು ಮತ್ತು ಇತರ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವವರಿಗೆ 50 ಸೀಟುಗಳನ್ನು ನೀಡಲಾಗುವುದು. ಅಲ್ಲದೆ, ಕೆವಿಎಸ್ ಅಧಿಕೃತವಾಗಿ ನಿಬಂಧನೆಗಳ ಅಡಿಯಲ್ಲಿ ಪಿಎಂ ಕೇರ್ಸ್ ಯೋಜನೆಯಡಿ ಒಳಗೊಂಡಿರುವ ಮಕ್ಕಳನ್ನು ಸೇರಿಸಿದೆ.  ವಿಶೇಷ ನಿಬಂಧನೆಗಳ ಅಡಿಯಲ್ಲಿ ಮಾಡಲಾದ ಪ್ರವೇಶಗಳು ಗೊತ್ತುಪಡಿಸಿದ ವರ್ಗದ ಸಾಮರ್ಥ್ಯಕ್ಕಿಂತ ಹೆಚ್ಚಾಗಿರುತ್ತದೆ. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಅಧಿವೇಶನದಲ್ಲಿ, ಕಾಂಗ್ರೆಸ್‌ನ ಮನೀಶ್ ತಿವಾರಿ ಮತ್ತು ಬಿಜೆಪಿಯ ಸುಶೀಲ್ ಮೋದಿ ಸೇರಿದಂತೆ ಹಲವಾರು ಸಂಸದರು ಕೋಟಾವನ್ನು ರದ್ದುಗೊಳಿಸಬೇಕು ಅಥವಾ ಸರ್ಕಾರವು ಮಿತಿಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಮಾರ್ಚ್ 21 ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ಸಾಮೂಹಿಕವಾಗಿ ಚರ್ಚಿಸಿ ಕೆವಿಗಳಲ್ಲಿನ ಎಂಪಿ ಕೋಟಾವನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಬೇಕು ಎಂದು ಒತ್ತಾಯಿಸಿದರು. ಅವರ ಮನವಿಯ ನಂತರ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಈ ವಿಷಯದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ನಡೆಸಬಹುದು ಎಂದು ಸಲಹೆ ನೀಡಿದರು. ಅಧಿಕೃತ ಮಾಹಿತಿಯ ಪ್ರಕಾರ, 2021-22ರ ಅವಧಿಯಲ್ಲಿ, ಎಸ್ ಸಿ-609, ಎಸ್ ಟಿ- 212, ಒಬಿಸಿ-1,811 ಮತ್ತು ಇಡಬ್ಲ್ಯೂಎಸ್-55 ಸೇರಿದಂತೆ 7,301 ವಿದ್ಯಾರ್ಥಿಗಳು ಭಾರತದಲ್ಲಿ 1,248 ಕೇಂದ್ರೀಯವಿದ್ಯಾಲಯಗಳಲ್ಲಿ ಎಂಪಿ ಕೋಟಾಗಳ ಮೂಲಕ ಪ್ರವೇಶ ಪಡೆದಿದ್ದಾರೆ.

ಇದನ್ನೂ ಓದಿ: ಧರಮ್ ಸಂಸದ್​​ ಕುರಿತು ಉತ್ತರಾಖಂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

Follow us on

Related Stories

Most Read Stories

Click on your DTH Provider to Add TV9 Kannada