Stock Market Updates: ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ ತಲ್ಲಣ; ಟಾಟಾ ಸ್ಟೀಲ್ ಷೇರು ತಲಾ 50 ರೂ. ಕುಸಿತ
ಏಪ್ರಿಲ್ 25ನೇ ತಾರೀಕಿನ ಸೋಮವಾರದಂದು ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಆ ಬಗ್ಗೆ ವಿವರಗಳು ಇಲ್ಲಿವೆ.
ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ನಾವಿದ್ದೇವೆ. ಇದರ ಮೊದಲ ದಿನವಾದ 25ನೇ ತಾರೀಕಿನ ಸೋಮವಾರದಂದು ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಪ್ರಮಾಣದಲ್ಲಿ ಕುಸಿತವನ್ನು ಕಂಡಿವೆ. ಸೆನ್ಸೆಕ್ಸ್ 600 ಪಾಯಿಂಟ್ಸ್ನಷ್ಟು ನೆಲ ಕಚ್ಚಿದರೆ, ನಿಫ್ಟಿ 17 ಸಾವಿರ ಪಾಯಿಂಟ್ಸ್ಗಿಂತ ಕೆಳಗೆ ಇಳಿಯಿತು. ಕ್ಯಾಪಿಟಲ್ ಗೂಡ್ಸ್, ಎಫ್ಎಂಸಿಜಿ, ಹೆಲ್ತ್ಕೇರ್, ತೈಲ ಮತ್ತು ಅನಿಲ. ರಿಯಾಲ್ಟಿ, ಲೋಹ, ಮಾಹಿತಿ ತಂತ್ರಜ್ಞಾನ ವಲಯಗಳು ಶೇ 1ರಿಂದ 3ರಷ್ಟು ನೆಲ ಕಚ್ಚಿದವು. ಸೆನ್ಸೆಕ್ಸ್ ಸೂಚ್ಯಂಕವು ಶುಕ್ರವಾರದ ದಿನಾಂತ್ಯದ ವಹಿವಾಟನ್ನು 57,197.15 ಪಾಯಿಂಟ್ಸ್ನೊಂದಿಗೆ ಮುಗಿಸಿತ್ತು. ಸೋಮವಾರ ದಿನದ ಆರಂಭ 56,757.64 ಪಾಯಿಂಟ್ಸ್ನೊಂದಿಗೆ ಆಗಿದ್ದು, ಕನಿಷ್ಠ ಮಟ್ಟ 56,412.14 ಪಾಯಿಂಟ್ಸ್ ಹಾಗೂ ಗರಿಷ್ಠ ಮಟ್ಟ 56,760.66 ಪಾಯಿಂಟ್ಸ್ ದಾಖಲಿಸಿದೆ.
ಇನ್ನು ನಿಫ್ಟಿಯ ಈ ಹಿಂದಿನ ವ್ಯವಹಾರ 17,171.95 ಪಾಯಿಂಟ್ಸ್ನಲ್ಲಿ ಆಗಿತ್ತು. ಸೋಮವಾರದಂದು 17,009.05 ಪಾಯಿಂಟ್ಸ್ನೊಂದಿಗೆ ಶುರುವಾಗಿ, ಗರಿಷ್ಠ ಮಟ್ಟ 17,022.65 ಪಾಯಿಂಟ್ಸ್ ಹಾಗೂ ಕನಿಷ್ಠ ಮಟ್ಟ 16,928.60 ಪಾಯಿಂಟ್ಸ್ ಮುಟ್ಟಿ ದಾಖಲೆ ಬರೆದಿದೆ.
ಈ ವರದಿ ಸಿದ್ಧವಾಗುವ ಹೊತ್ತಿಗೆ ಬಿಎಸ್ಇ ಸೆನ್ಸೆಕ್ಸ್ 570.40 ಪಾಯಿಂಟ್ಸ್ ಅಥವಾ ಶೇ 1.00ರಷ್ಟು ಕೆಳಗೆ ಇಳಿದು, 56,626.75 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ ಸೂಚ್ಯಂಕವು 191 ಪಾಯಿಂಟ್ಸ್ ಅಥವಾ ಶೇ 1.11ರಷ್ಟು ಕುಸಿದು 16,981 ಪಾಯಿಂಟ್ಸ್ನಲ್ಲಿ ವ್ಯವಹರಿಸುತ್ತಿತ್ತು.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಬಜಾಜ್ ಆಟೊ ಶೇ 1.74 ಐಸಿಐಸಿಐ ಬ್ಯಾಂಕ್ ಶೇ 1.08 ಹೀರೋ ಮೋಟೋಕಾರ್ಪ್ ಶೇ 1.10 ಮಾರುತಿ ಸುಜುಕಿ ಶೇ 0.66 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 0.52
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಬಿಪಿಸಿಎಲ್ ಶೇ -4.42 ಟಾಟಾ ಸ್ಟೀಲ್ ಶೇ -3.97 ಜೆಎಸ್ಡಬ್ಲ್ಯು ಸ್ಟೀಲ್ ಶೇ -3.54 ಬ್ರಿಟಾನಿಯಾ ಶೇ -2.96 ಕೋಲ್ ಇಂಡಿಯಾ ಶೇ -2.87
ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ