AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಇಂದು ಚಿನ್ನದ ಬೆಲೆ ಕೊಂಚ ಇಳಿಕೆ, ಬೆಳ್ಳಿ ದರ ಸ್ಥಿರ

Silver Price Today: ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,990 ರೂ. ಇದೆ. ಇದೇ ಚಿನ್ನ 100 ಗ್ರಾಂ ಗೆ 4,89,900 ರೂಪಾಯಿ ಆಗಿದೆ. ನಿನ್ನೆ 10 ಗ್ರಾಂಗೆ 49,000 ರೂ. ಇತ್ತು. ಇಂದು 10 ಗ್ರಾಂಗೆ ಕೇವಲ 10 ರೂಪಾಯಿ ಇಳಿಕೆಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 53,440 ರೂ. ಇದೆ.

Gold Price Today: ಇಂದು ಚಿನ್ನದ ಬೆಲೆ ಕೊಂಚ ಇಳಿಕೆ, ಬೆಳ್ಳಿ ದರ ಸ್ಥಿರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 25, 2022 | 8:58 AM

Share

ಉಕ್ರೇನ್, ರಷ್ಯಾ ನಡುವಿನ ಯುದ್ಧದಿಂದ ಚಿನ್ನ(Gold), ಬೆಳ್ಳಿ (Silver) ಬೆಲೆ ಏರಿಕೆಯಾಗಿದೆ. ಆದರೂ ಕೆಲ ಸಮಾರಂಭಗಳಿಗೆ ಆಭರಣ ಅನಿವಾರ್ಯವಾಗಿದೆ. ಬೆಲೆ ಎಷ್ಟೇ ಹೆಚ್ಚಾದರೂ ಮದುವೆಯಂತಹ ಕಾರ್ಯಕ್ರಮಗಳಿಗೆ ಆಭರಣ ಬೇಕಾಗುತ್ತದೆ. ಇಂದು ಚಿನ್ನ, ಬೆಳ್ಳಿ ಖರೀದಿಸುವವರಿಗೆ ಆಭರಣದ ಬೆಲೆ ಇಲ್ಲಿ ತಿಳಿಸಲಾಗಿದೆ. ನಿನ್ನೆಗಿಂತ ಆಭರಣದ ಬೆಲೆ ಇಂದು ಕಡಿಮೆಯಾಗಿದೆ. ಹಾಗಾದರೆ, ಎಷ್ಟು ದರ ಇಳಿದಿದೆ ಅಂತ ನೀವು ಯೋಚಿಸುತ್ತಾ ಇರಬಹುದು. ಬೆಂಗಳೂರಿನಲ್ಲಿ ಆಭರಣದ ಬೆಲೆ ಸದ್ಯ ಎಷ್ಟಿದೆ? ಜೊತೆಗೆ ಭಾರತದ ಪ್ರಮುಖ ನಗರಗಳಲ್ಲಿ ಬೆಲೆ ಹೇಗಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಬೆಂಗಳೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ?: ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,990 ರೂ. ಇದೆ. ಇದೇ ಚಿನ್ನ 100 ಗ್ರಾಂ ಗೆ 4,89,900 ರೂಪಾಯಿ ಆಗಿದೆ. ನಿನ್ನೆ 10 ಗ್ರಾಂಗೆ 49,000 ರೂ. ಇತ್ತು. ಇಂದು 10 ಗ್ರಾಂಗೆ ಕೇವಲ 10 ರೂಪಾಯಿ ಇಳಿಕೆಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 53,440 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 5,34,400 ರೂಪಾಯಿ ನಿಗದಿಯಾಗಿದೆ. ಈ ಚಿನ್ನಕ್ಕೂ ನಿನ್ನೆಗಿಂತ 10 ಗ್ರಾಂ 10 ರೂಪಾಯಿ ದರ ಇಳಿದಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಒಂದು ಕೆಜಿಗೆ 71,600 ರೂಪಾಯಿ ಇದೆ.

ಭಾರತದ ವಿವಿಧ ನಗರಗಳಲ್ಲಿ ಆಭರಣದ ಬೆಲೆ ಹೀಗಿದೆ:

ಮಂಗಳೂರು: 48,990 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53,440 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 71,600 ರೂಪಾಯಿ ಇದೆ.

ಮೈಸೂರು: 48,990 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53.440 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 71,600 ರೂಪಾಯಿ ಇದೆ.

ಚೆನೈ: 49,440 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53,940 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 71,600 ರೂಪಾಯಿ ಆಗಿದೆ.

ದೆಹಲಿ: 48,890 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53,440 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಇಲ್ಲಿ ಒಂದು ಕೆಜಿ ಬೆಳ್ಳಿಗೆ 66,700 ರೂ. ಇದೆ. ನಿನ್ನೆಗಿಂತ 100 ರೂಪಾಯಿ ಏರಿಕೆಯಾಗಿದೆ.

ಹೈದರಾಬಾದ್: 48,990 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53,440 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಇಂದು ಕೆಜಿ ಬೆಳ್ಳಿಗೆ 71,600 ರೂಪಾಯಿ ಇದೆ.

ಪಾಟ್ನಾ: 49,040 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53,490 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 66,700 ರೂಪಾಯಿ ಇದೆ,

ಕೇರಳ: 48,990 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 53,440 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ 71,600 ರೂಪಾಯಿ ಇದೆ.

ಇದನ್ನೂ ಓದಿ

‘ಲಾಲ್​ ಸಿಂಗ್​ ಚಡ್ಡಾ’ ಚಿತ್ರಕ್ಕೆ ಆಮಿರ್​, ಕರೀನಾ, ನಾಗ ಚೈತನ್ಯ ಪಡೆದ ಸಂಭಾವನೆ ಎಷ್ಟು ಕೋಟಿ?

ಅಕ್ಷಯ ತೃತೀಯಾದ ದಿನ ಚಿನ್ನ ಖರೀದಿ ಮಾಡಬೇಕು ಅಂತಾ ಹಿಂದೂ ಧರ್ಮದಲ್ಲಿ ಉಲ್ಲೇಖ ಇಲ್ಲ -ಡಾ ಶೆಲ್ವ ಪಿಳೈ ಅಯ್ಯಂಗಾರ್

Published On - 8:56 am, Mon, 25 April 22

Follow Us
Web contact
Web contact

TV9 Kannada

Read More