PBKS vs CSK: ಐಪಿಎಲ್​​ನಲ್ಲಿಂದು ಪಂಜಾಬ್-ಚೆನ್ನೈ ಮುಖಾಮುಖಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಜಡೇಜಾ ಪಡೆ

IPl 2022: ಐಪಿಎಲ್​ನಲ್ಲಿಂದು ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಹಾಗೂ ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (PBKS vs CSK) ತಂಡ ಮುಖಾಮುಖಿ ಆಗುತ್ತಿದೆ.

PBKS vs CSK: ಐಪಿಎಲ್​​ನಲ್ಲಿಂದು ಪಂಜಾಬ್-ಚೆನ್ನೈ ಮುಖಾಮುಖಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಜಡೇಜಾ ಪಡೆ
PBKS vs CSK 2022
Follow us
TV9 Web
| Updated By: Vinay Bhat

Updated on: Apr 25, 2022 | 10:25 AM

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ಪ್ರಮುಖ ಪಂದ್ಯ ನಡೆಯಲಿದ್ದು ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಹಾಗೂ ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (PBKS vs CSK) ತಂಡ ಮುಖಾಮುಖಿ ಆಗುತ್ತಿದೆ. ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಲು ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ. ಅದರಲ್ಲೂ ಆಡಿರುವ ಏಳು ಪಂದ್ಯಗಳಲ್ಲಿ ಪೈಕಿ ಐದರಲ್ಲಿ ಸೋಲು ಕೇವಲ ಎರಡರಲ್ಲಿ ಗೆಲುವು ಸಾಧಿಸಿರುವ ಸಿಎಸ್​ಕೆಗೆ ಇದು ಒಂದುರೀತಿಯ ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು. ಇತ್ತ ಚೆನ್ನೈಗಿಂತ (Chennai) ಒಂದು ಸ್ಥಾನ ಮೇಲಿರುವ ಪಂಜಾಬ್ ಆಡಿರುವ ಏಳು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಮ್ಯಾಚ್ ನಡೆಯಲಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಏಪ್ರಿಲ್ 3ರಂದು ನಡೆದಿದ್ದ ಹನ್ನೊಂದನೇ ಪಂದ್ಯದಲ್ಲಿ ಮೊದಲ ಬಾರಿಗೆ ಉಭಯ ಸೆಣಸಾಡಿದ್ದವು. ಇದರಲ್ಲಿ ಪಂಜಾಬ್ ಕಿಂಗ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ 54 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ಇದೀಗ ಜಡೇಜಾ ಪಡೆಗೆ ಸೇಡಿನ ಪಂದ್ಯ ಕೂಡ ಹೌದು. ಚೆನ್ನೈ ಬ್ಯಾಟಿಂಗ್ ವಿಭಾಗ ಕೊಂಚ ಸುಧಾರಣೆಯಾಗಿದೆ. ರುತುರಾಜ್​​ ಗಾಯಕ್ವಾಡ್​​​​ ಮತ್ತು ರಾಬಿನ್​​ ಉತ್ತಪ್ಪ ಇನ್ನಿಂಗ್ಸ್​​​ ಆರಂಭಿಸಿದರೆ, ಅಂಬಟಿ ರಾಯುಡುಗೆ 3ನೇ ಕ್ರಮಾಂಕ ಸಿಕ್ಕಿದೆ. ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಪರಿಸ್ಥಿತಿ ನೋಡಿಕೊಂಡು ಕಣಕ್ಕಿಳಿಯಲಿದ್ದಾರೆ.

ಮಹೇಂದ್ರ ಸಿಂಗ್​​ ಧೋನಿ, ಡ್ವೈನ್​​ ಬ್ರಾವೋ ಮತ್ತು ಡ್ವೈನ್​​ ಪ್ರಿಟೋರಿಯಸ್​​ ಕೊನೆಯ ಕೆಲ ಓವರುಗಳಲ್ಲಿ ಪಂದ್ಯ ಬದಲಿಸ್ತಾರೆ. ಮಿಚೆಲ್​​ ಸ್ಯಾಂಟ್ನರ್​​​ ಬ್ಯಾಟಿಂಗ್​​ ಬಲವನ್ನು ಎಲ್ಲಿ ಬೇಕಾದರೂ ಬಳಿಸಿಕೊಳ್ಳಬಹುದು. ಧೋನಿ ಕಳೆದ ಪಂದ್ಯದಲ್ಲಿ ಮ್ಯಾಚ್ ಗೆಲ್ಲಿಸಿದ್ದು ಸಿಎಸ್​ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಬೌಲಿಂಗ್​​ನಲ್ಲಿ ಮುಖೇಶ್​​ ಚೌಧರಿ, ಮಹೀಶ್​ ತೀಕ್ಷಣ ಹೊಸ ಚೆಂಡು ಹಂಚಿಕೊಳ್ಳಬಹುದು. ಸ್ಯಾಂಟ್ನರ್​​ ಮತ್ತು ಜಡೇಜಾ ಎಡಗೈ ಸ್ಪಿನ್ನರ್​​ ಗಳು. ಬ್ರಾವೋ ಮತ್ತು ಪ್ರಿಟೋರಿಯಸ್​ ಡೆತ್​​ ಓವರ್​​ ಮಾರಕವಾಗಿ ಗೋಚರಿಸುತ್ತಿದ್ದಾರೆ.

ಇತ್ತ ಪಂಜಾಬ್‌ಗೂ ಇದು ಮಹತ್ವದ ಪಂದ್ಯ. ಅಂಕಪಟ್ಟಿಯಲ್ಲಿ ಅಗರ್ವಾಲ್‌ ಬಳಗ ಬಹಳ ಮೇಲ್ಮಟ್ಟದಲ್ಲಂತೂ ಇಲ್ಲ. ಮುಂಬೈ, ಚೆನ್ನೈ ಬಳಿಕ ಕೆಳಗಿನಿಂದ ತೃತೀಯ ಸ್ಥಾನಿಯಾಗಿದೆ. ಶಿಖರ್ ಧವನ್, ಮಯಾಂಕ್ ಅಗರ್ವಾಲ್‌, ಲಿವಿಂಗ್‌ಸ್ಟೋನ್‌, ಶಾರೂಖ್‌ ಖಾನ್‌ ಹೀಗೆ ಬಿಗ್‌ ಹಿಟ್ಟರ್‌ಗಳನ್ನು ಹೊಂದಿರುವ ತಂಡ. ಇವರಲ್ಲಿ ಲಿವಿಂಗ್‌ಸ್ಟೋನ್‌ ಹೊರತು ಪಡಿಸಿ ಉಳಿದವರಿನ್ನೂ ನೈಜ ಆಟಕ್ಕೆ ಕುದುರಿಕೊಂಡಿಲ್ಲ. ಜಾನಿ ಬೇರ್‌ಸ್ಟೊ ಸತತ 4 ಪಂದ್ಯಗಳಲ್ಲಿ ಫೇಲ್‌ ಆಗಿರುವುದು ತಂಡದ ಪಾಲಿನ ಚಿಂತೆಯ ಸಂಗತಿ. ಇವರ ಬದಲು ಭನುಕ ರಾಜಪಕ್ಸ ಆಡುವ ಸಾಧ್ಯತೆ ಇದೆ. ಹಾಗೆಯೇ ರಿಷಿ ಧವನ್‌, ಸಂದೀಪ್‌ ಶರ್ಮ ಮೊದಲಾದವರು ಕೂಡ ಕಾಯಿತ್ತಿದ್ದಾರೆ. ಪೇಸ್‌ ಬೌಲಿಂಗ್‌ ಆಲ್‌ರೌಂಡರ್‌ ಒಡೀನ್‌ ಸ್ಮಿತ್, ಪ್ರಧಾನ ವೇಗಿ ಕಗಿಸೊ ರಬಾಡ, ಆರ್ಷದೀಪ್‌ ಸಿಂಗ್‌, ವೈಭವ್‌ ಅರೋರ ಅವರೆಲ್ಲ ಸಿಡಿದು ನಿಂತರೆ ಪಂಜಾಬ್‌ ಮತ್ತೆ ಗೆಲುವಿನ ಹಳಿ ಏರೀತು.

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಇದುವರೆಗೂ ಒಟ್ಟು 27 ಪಂದ್ಯಗಳು ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಜಯ ಗಳಿಸಿದ್ದರೆ, ಪಂಜಾಬ್ ಕಿಂಗ್ಸ್ 12 ಪಂದ್ಯಗಳಲ್ಲಿ ಗೆದ್ದಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್ದೀಪ್ ಸಿಂಗ್, ಸಂದೀಪ್ ಶರ್ಮಾ ಮತ್ತು ನಾಥನ್ ಎಲ್ಲಿಸ್.

ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ (ನಾಯಕ), ರಿತುರತ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮಿಚೆಲ್ ಸ್ಯಾಂಟ್ನರ್, ಅಂಬಟಿ ರಾಯುಡು, ಶಿವಂ ದುಬೆ, ಎಂಎಸ್ ಧೋನಿ, ಡ್ವೇನ್ ಪ್ರಿಟೋರಿಯಸ್, ಡ್ವೇನ್ ಬ್ರಾವೋ, ಮುಖೇಶ್ ಚೌಧರಿ ಮತ್ತು ಮಹಿಷ್ ಟೀಕ್ಷಣ.

Rohit Sharma: ಬ್ಯಾಟ್ಸ್​ಮನ್​ಗಳಿಗೆ ಮನಬಂದಂತೆ ಬೈದ ರೋಹಿತ್ ಶರ್ಮಾ: ಪಂದ್ಯದ ಬಳಿಕ ಏನಂದ್ರು ಕೇಳಿ

LSG vs MI: ಎಂಟನೇ ಪಂದ್ಯದಲ್ಲೂ ಸೋತು ಐಪಿಎಲ್ 2022 ಟೂರ್ನಿಯಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ