Krunal Pandya: ಮುತ್ತಿಟ್ಟು ಸಂಭ್ರಮಾಚರಣೆ: ಕ್ರುನಾಲ್ ಮೇಲೆ ಕೋಪಗೊಂಡ ಪೊಲಾರ್ಡ್ ಮಾಡಿದ್ದೇನು ನೋಡಿ
Kieron Pollard, LSG vs MI IPL 2022: ಭಾನುವಾರ ನಡೆದ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲೂ ಮುಂಬೈ ಗೆಲ್ಲಲು ಸಾಧ್ಯವಾಗಲಿಲ್ಲ. ಮೊದಲೇ ಸೋಲಿನ ಬೇಸರದಲ್ಲಿದ್ದ ಮುಂಬೈಗೆ ಮತ್ತಷ್ಟು ಕೋಪ ಏರಿಸಿದ್ದು ಕ್ರುನಾಲ್ ಪಾಂಡ್ಯ (Krunal Pandya) ಅವರ ನಡೆ.
ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 2022 ರಲ್ಲಿ (IPL 2022) ಹಿಂದೆಂದೂ ನೀಡಿರದ ಕಳಪೆ ಪ್ರದರ್ಶನ ತೋರಿದೆ. ಭಾನುವಾರ ನಡೆದ ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಪಂದ್ಯದಲ್ಲೂ ಮುಂಬೈ (LSG vs MI) ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ರೋಹಿತ್ ಶರ್ಮಾ ಬಳಗ ಐಪಿಎಲ್ 2022 ಟೂರ್ನಿಯಲ್ಲಿ ಸತತ 8 ಸೋಲುಂಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ತವರಿನಂಗಣದ ಪ್ರೇಕ್ಷಕರ ಎದುರು ಅತ್ಯಂತ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 169 ರನ್‌ಗಳ ಗುರಿ ಬೆನ್ನತ್ತಿ 20 ಓವರ್‌ಗಳಲ್ಲಿ 132 ರನ್ ಮಾತ್ರವೇ ಗಳಿಸಲು ಶಕ್ತವಾಯಿತು. ಪರಿಣಾಮ ಸತತ 8ನೇ ಪಂದ್ಯದಲ್ಲೂ ಮುಂಬೈ ಖಾತೆ ತೆರೆಯದಂತ್ತಾಯಿತು. ಮೊದಲೇ ಸೋಲಿನ ಬೇಸರದಲ್ಲಿದ್ದ ಮುಂಬೈಗೆ ಮತ್ತಷ್ಟು ಕೋಪ ಏರಿಸಿದ್ದು ಕ್ರುನಾಲ್ ಪಾಂಡ್ಯ (Krunal Pandya) ಅವರ ನಡೆ.
ಹೌದು, ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಲಖನೌ ವಿರುದ್ಧವಾದರೂ ಗೆಲ್ಲುವ ಆಲೋಚನೆಯೊಂದಿಗೆ ಕಣಕ್ಕಿಳಿದಿತ್ತು. ಆದರೆ, ರೋಹಿತ್ ಪಡೆಯ ಆಲೋಚನೆ ತಲೆಕೆಳಗಾಯಿತು. ಸಾಧಾರಣ ಟಾರ್ಗೆಟ್ ಇದ್ದರೂ ಬ್ಯಾಟರ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಹೀಗಿರುವಾಗ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕ್ರುನಾಲ್ ಪಾಂಡ್ಯ ಈ ಬಾರಿ ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಕಣಕ್ಕಿಳಿದಿದ್ದು ಕೀರೊನ್ ಪೊಲಾರ್ಡ್ ವಿಕೆಟ್ ಪಡೆದು ವಿಚಿತ್ರವಾಗಿ ಸಂಭ್ರಮಿಸಿದ್ದಾರೆ. ಇದರಿಂದ ಪೊಲಾರ್ಡ್ ಕೂಡ ಕೋಪಗೊಂಡ ಘಟನೆ ನಡೆಯಿತು.
ಮುಂಬೈ ಇಂಡಿಯನ್ಸ್ ಮತ್ತು ಲಖನೌ ತಂಡಗಳ ನಡುವೆ ನಡೆದ ಪಂದ್ಯದ ಅಂತಿಮ ಓವರ್ ಅನ್ನು ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡಲು ಬಂದರು. ಅತ್ತ ಕ್ರೀಸ್ನಲ್ಲಿ ಕೀರೊನ್ ಪೊಲಾರ್ಡ್ ಇದ್ದರು. ಮೊದಲನೇ ಎಸೆತದಲ್ಲಿಯೇ ಪೊಲಾರ್ಡ್ ಅವರು ದೀಪಕ್ ಹೂಡಾಗೆ ಕ್ಯಾಚ್ ನೀಡಿದರು. ಔಟಾದ ಬೇಸರದಿಂದ ಪೊಲಾರ್ಡ್ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದಾಗ ಕ್ರುನಾಲ್ ಪಾಂಡ್ಯ ದಿಢೀರ್ ಪೊಲಾರ್ಡ್ ಮೇಲೆ ಹಾರಿ ತಬ್ಬಿಕೊಂಡು ಅವರ ತಲೆಗೆ ಮುತ್ತಿಟ್ಟಿದ್ದಾರೆ. ಕ್ರುನಾಲ್ ಪಾಂಡ್ಯ ನಡೆಗೆ ಪೊಲಾರ್ಡ್ ಕೋಪಗೊಂಡಿದ್ದಾರೆ.
#Krunalpandya loving the out of #Pollard
You would love ? it ??#MIvsLSG #LSGvMI #IPL2022 #RohitSharma? #Mumbaiindians pic.twitter.com/sY2SCsEnMy
— DaebakAnkita? (@DaebakankitaF) April 24, 2022
ಮೊದಲೇ ಸೋಲಿನ ಬೇಸರದಲ್ಲಿದ್ದಾಗ ಗೆ ಕ್ರುನಾಲ್ ಈ ರೀತಿ ಮಾಡಿದ್ದು ಪೊಲಾರ್ಡ್ಗೆ ಇಷ್ಟವಾಗಲಿಲ್ಲ. ಇದು ಅವರ ಮುಖದ ಹಾವಭಾವದಲ್ಲೇ ತಿಳಿಯುತ್ತಿತ್ತು. ಸಾಮಾನ್ಯವಾಗಿ ಎದುರಾಳಿ ತಂಡದ ಆಟಗಾರ ಕೆಣಕಿದಾಗಲೆಲ್ಲಾ ಸ್ಥಳದಲ್ಲಿಯೇ ಸರಿಯಾದ ಉತ್ತರ ನೀಡುವ ಪೊಲಾರ್ಡ್ ಈ ಬಾರಿ ಕೋಪ ಬಂದರೂ ಯಾವುದೇ ಪ್ರತಿಕ್ರಿಯೆ ನೀಡದೇ ಮೈದಾನದಿಂದ ಹೊರನಡೆದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಕ್ರುನಾಲ್ ಅವರ ಈ ಸಂಭ್ರಮಾಚರಣೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ.
very useless act by Krunal Pandya to Pollard ?? #MIvsLSG pic.twitter.com/6LPR5ImFNa
— criiee aa rha hai (@stfutonu) April 24, 2022
ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ನಾಯಕ ರೋಹಿತ್ ಶರ್ಮಾ ಸೋಲಿಗೆ ಬ್ಯಾಟ್ಸ್ಮನ್ಗಳೇ ನೇರ ಕಾರಣ ಎಂದು ದೂರಿದ್ದಾರೆ. “ನನಗನಿಸುವ ಪ್ರಕಾರ ನಾವು ಉತ್ತಮ ಬೌಲಿಂಗ್ ಮಾಡಿದೆವು. ಈ ಪಿಚ್ನಲ್ಲಿ ಚೆಂಡು ಬ್ಯಾಟ್ಗೆ ಚೆನ್ನಾಗಿ ಬರುತ್ತಿತ್ತು. ಈರೀತಿಯ ಸಂದರ್ಭದಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ. ದೊಡ್ಡ ಮಟ್ಟದ ಅಥವಾ ಚೇಸ್ ಮಾಡಲು ಸಾಧ್ಯವಿರದ ಟಾರ್ಗೆಟ್ ನಮಗೆ ಇರಲಿಲ್ಲ. ಆದರೆ, ನಮ್ಮ ಬ್ಯಾಟಿಂಗ್ ಕೆಟ್ಟದಾಗಿತ್ತು. ಈರೀತಿಯ ಟಾರ್ಗೆಟ್ ಇದ್ದಾಗ ಜೊತೆಯಾಟ ಬಹಳ ಮುಖ್ಯ. ಆದರೆ, ನನ್ನನ್ನೂ ಸೇರಿಸಿ ಮಧ್ಯಮ ಕ್ರಮಾಂಕದಲ್ಲಿ ಆಯ್ಕೆ ಮಾಡಿದ ಕೆಲ ಅನಗತ್ಯ ಹೊಡೆತ ವಿಕೆಟ್ ಕಳೆದುಕೊಳ್ಳುವಂತಾಯಿತು.”
“ಈ ಟೂರ್ನಿಯಲ್ಲೇ ನಮ್ಮ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡ್ತಾರೊ ಅವರು ಜವಾಬ್ದಾರಿಯಿಂದ ಆಡಬೇಕು. ಅವರು ಕೊನೆಯ ವರೆಗೆ ಕ್ರೀಸ್ನಲ್ಲಿ ಇರಬೇಕು. ಕೆಲ ಎದುರಾಳಿ ತಂಡಗಳು ಆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅವರನ್ನು ನೋಡಿದಾಗ ನಮ್ಮಲ್ಲಿ ಹಾಗಿಲ್ಲವಲ್ಲ ಎಂದು ನೋವಾಗುತ್ತದೆ. ಓರ್ವ ಬ್ಯಾಟ್ಸ್ಮನ್ ದೊಡ್ಡ ಇನ್ನಿಂಗ್ಸ್ ಆಡುವುದು ಬಹುಮುಖ್ಯ,” ಎಂದು ತಂಡದ ಬ್ಯಾಟರ್ಗಳೇ ಸೋಲಿಗೆ ಕಾರಣ ಎಂದಿದ್ದಾರೆ.
IPL 2022 Points Table: ಒಂದು ಸ್ಥಾನ ಮೇಲಕ್ಕೇರಿದ ಲಖನೌ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?
Rohit Sharma: ಬ್ಯಾಟ್ಸ್ಮನ್ಗಳಿಗೆ ಮನಬಂದಂತೆ ಬೈದ ರೋಹಿತ್ ಶರ್ಮಾ: ಪಂದ್ಯದ ಬಳಿಕ ಏನಂದ್ರು ಕೇಳಿ
Published On - 11:58 am, Mon, 25 April 22