IPL 2022: ಶತಕ ಸಿಡಿಸಿದ ರಾಹುಲ್​ಗೆ ಬರೋಬ್ಬರಿ 24 ಲಕ್ಷ ರೂ. ಫೈನ್! ಗೆಲುವಿನ ನಡುವೆಯೂ ಲಕ್ನೋ ತಂಡಕ್ಕೆ ದಂಡದ ಬರೆ

IPL 2022: ಈ ಆವೃತ್ತಿಯಲ್ಲಿ ಸ್ಲೋ ಓವರ್ ರೇಟ್‌ಗಾಗಿ ಲಕ್ನೋ ತಂಡಕ್ಕೆ ದಂಡ ವಿಧಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಲಕ್ನೋ ನಿಧಾನಗತಿಯ ಓವರ್‌ರೇಟ್‌ಗಾಗಿ ದಂಡವನ್ನು ವಿಧಿಸಲಾಗಿದೆ. ಕಾಕತಾಳೀಯವೆಂದರೆ ಆ ಪೆನಾಲ್ಟಿ ಕೂಡ ಏಪ್ರಿಲ್ 16 ರಂದು ಮುಂಬೈ ವಿರುದ್ಧ ನಡೆದ ಪಂದ್ಯಕ್ಕೆ ವಿಧಿಸಲಾಗಿತ್ತು.

IPL 2022: ಶತಕ ಸಿಡಿಸಿದ ರಾಹುಲ್​ಗೆ ಬರೋಬ್ಬರಿ 24 ಲಕ್ಷ ರೂ. ಫೈನ್! ಗೆಲುವಿನ ನಡುವೆಯೂ ಲಕ್ನೋ ತಂಡಕ್ಕೆ ದಂಡದ ಬರೆ
ಲಕ್ನೋ ಸೂಪರ್ ಜೈಂಟ್ಸ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Apr 25, 2022 | 3:27 PM

ಕಳೆದ ರಾತ್ರಿ (ಏ.24) ಐಪಿಎಲ್ 2022 (IPL 2022) ರಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮುಂಬೈ ಇಂಡಿಯನ್ಸ್ (Lucknow Super Giants defeated Mumbai Indians) ತಂಡವನ್ನು 36 ರನ್​ಗಳಿಂದ ಸೋಲಿಸಿತು. ಈ ಗೆಲುವಿನ ಮೂಲಕ 15ನೇ ಆವೃತ್ತಿಯಲ್ಲಿ ಮುಂಬೈಗೆ ತಮ್ಮ ಗೆಲುವಿನ ಖಾತೆಯನ್ನು ತೆರೆಯಲು ಅವಕಾಶ ನೀಡಲಿಲ್ಲ. ಮುಂಬೈಗೆ ಈ ಸೀಸನ್​ನಲ್ಲಿ ಇದು ಸತತ ಎಂಟನೇ ಸೋಲು. ಐದು ಬಾರಿ ವಿಜೇತ ತಂಡ ಮುಂಬೈ ಇನ್ನೂ ತನ್ನ ಮೊದಲ ಗೆಲುವಿಗಾಗಿ ಆತೊರೆಯುತ್ತಿದೆ. ಲಕ್ನೋದ ಈ ಗೆಲುವಿನಲ್ಲಿ ತಂಡದ ನಾಯಕ ಕೆಎಲ್ ರಾಹುಲ್ ಪ್ರಮುಖ ಪಾತ್ರ ವಹಿಸಿದರು. ರಾಹುಲ್ ಮುಂಬೈ ವಿರುದ್ಧ ಅಜೇಯ 103 ರನ್ ಗಳಿಸಿ ತಂಡಕ್ಕೆ ಉತ್ತಮ ಸ್ಕೋರ್ ನೀಡಿದರು. ರಾಹುಲ್ ಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಲಕ್ನೋ 20 ಓವರ್​ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಮುಂಬೈ ತಂಡವನ್ನು 132 ರನ್ ಗಳಿಗೆ ಸೀಮಿತಗೊಳಿಸಿತು.

ಆದರೆ ಲಕ್ನೋ ತಂಡಕ್ಕೆ ತನ್ನ ಗೆಲುವಿನ ನಡುವೆಯೂ ಮಂಡಳಿ ದಂಡದ ಬರೆ ಎಳೆದಿದೆ. ನಿಧಾನಗತಿಯ ಓವರ್ ರೇಟ್‌ಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ದಂಡ ವಿಧಿಸಲಾಗಿದೆ. ಐಪಿಎಲ್ ಮಂಡಳಿ ಭಾನುವಾರ ತಡರಾತ್ರಿ ಈ ಮಾಹಿತಿಯನ್ನು ನೀಡಿದೆ. ಏಪ್ರಿಲ್ 24 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡನೇ ಬಾರಿ ಈ ಕೃತ್ಯ ಈ ಆವೃತ್ತಿಯಲ್ಲಿ ಸ್ಲೋ ಓವರ್ ರೇಟ್‌ಗಾಗಿ ಲಕ್ನೋ ತಂಡಕ್ಕೆ ದಂಡ ವಿಧಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಲಕ್ನೋ ನಿಧಾನಗತಿಯ ಓವರ್‌ರೇಟ್‌ಗಾಗಿ ದಂಡವನ್ನು ವಿಧಿಸಲಾಗಿತ್ತು. ಕಾಕತಾಳೀಯವೆಂದರೆ ಆ ಪೆನಾಲ್ಟಿ ಕೂಡ ಏಪ್ರಿಲ್ 16 ರಂದು ಮುಂಬೈ ವಿರುದ್ಧ ನಡೆದ ಪಂದ್ಯಕ್ಕೆ ವಿಧಿಸಲಾಗಿತ್ತು. ಆ ಪಂದ್ಯದಲ್ಲೂ ರಾಹುಲ್ ಶತಕ ಸಿಡಿಸಿದ್ದೂ ಇನ್ನೊಂದು ಸೋಜಿಗವಾಗಿತ್ತು.

ಐಪಿಎಲ್ ಮಂಡಳಿಯ ಹೇಳಿಕೆಯ ಪ್ರಕಾರ, “ಈ ತಂಡವು ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ ಐಪಿಎಲ್ ನೀತಿ ಸಂಹಿತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಲಕ್ನೋ ನಾಯಕ ಕೆಎಲ್ ರಾಹುಲ್ ಅವರಿಗೆ 24 ಲಕ್ಷ ರೂ ದಂಡ ವಿಧಿಸಲಾಗಿದ್ದು, ತಂಡದ ಉಳಿದವರಿಗೆ ರೂ 6 ಲಕ್ಷ ದಂಡ ವಿಧಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದೆ.

ಪಂದ್ಯ ಹೀಗಿತ್ತು ಮುಂಬೈ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮುಂಬೈ ತಂಡವು ಉತ್ತಮವಾಗಿ ಬೌಲಿಂಗ್ ಮಾಡಿದರೂ ರಾಹುಲ್ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ, ಕೊನೆಯ ಓವರ್‌ನಲ್ಲಿ ಸಿಕ್ಸರ್‌ನೊಂದಿಗೆ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ, ರಾಹುಲ್ 62 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಇವರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಗಣನೀಯ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. 22 ರನ್ ಗಳಿಸಿದ ಮನೀಶ್ ಪಾಂಡೆ ತಂಡದ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ದೀಪಕ್ ಹೂಡಾ 10 ಮತ್ತು ಆಯುಷ್ ಬಡೋನಿ 14 ರನ್ ಗಳಿಸಿದರು.

ಆದರೆ ಮುಂಬೈ ತಂಡ ಉತ್ತಮ ಆರಂಭದ ಹೊರತಾಗಿತಯೂ ಈ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ. ಪೂರ್ಣ 20 ಓವರ್‌ಗಳನ್ನು ಆಡಿದ ನಂತರವೂ ಮುಂಬೈಗೆ ಗೆಲುವು ಸಿಗಲಿಲ್ಲ. ರೋಹಿತ್ ಶರ್ಮಾ ತಂಡದ ಪರವಾಗಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡರು. ರೋಹಿತ್ 31 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ತಿಲಕ್ ವರ್ಮಾ 38 ರನ್ ಗಳಿಸಿದರು. ಕೀರಾನ್ ಪೊಲಾರ್ಡ್ 19 ರನ್ ಗಳಿಸಿದರು.

ಇದನ್ನೂ ಓದಿ:IPL 2022: ಕೊನೆಯ ಎಸೆತದಲ್ಲಿ ಗೆಲುವು! ಧೋನಿಯಿಂದಾಗಿ ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಸಿಎಸ್​ಕೆ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ