IPL 2022: ಕೊನೆಯ ಎಸೆತದಲ್ಲಿ ಗೆಲುವು! ಧೋನಿಯಿಂದಾಗಿ ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಸಿಎಸ್​ಕೆ

IPL 2022: ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಎಂಟನೇ ಬಾರಿಗೆ ಗುರಿ ಬೆನ್ನಟ್ಟಿ ಕೊನೆಯ ಎಸೆತದಲ್ಲಿ ಜಯ ಸಾಧಿಸಿತು. ಚೆನ್ನೈ ನಂತರ ಈ ದಾಖಲೆಯಲ್ಲಿ ಮುಂಬೈ ಹೆಸರು ಇದೆ. ಐದು ಬಾರಿಯ ಚಾಂಪಿಯನ್ ತಂಡವು ಕೊನೆಯ ಎಸೆತದಲ್ಲಿ ಆರು ಬಾರಿ ಪಂದ್ಯವನ್ನು ಗೆದ್ದಿದೆ.

IPL 2022: ಕೊನೆಯ ಎಸೆತದಲ್ಲಿ ಗೆಲುವು! ಧೋನಿಯಿಂದಾಗಿ ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಸಿಎಸ್​ಕೆ
ಧೋನಿ, ಬ್ರಾವೋ
Follow us
TV9 Web
| Updated By: ಪೃಥ್ವಿಶಂಕರ

Updated on: Apr 22, 2022 | 3:24 PM

ಐಪಿಎಲ್ 2022 (IPL 2022)ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತನ್ನ ಎರಡನೇ ಗೆಲುವು ದಾಖಲಿಸಿತು. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಹಳದಿ ಸೇನೆ ಮೂರು ವಿಕೆಟ್‌ಗಳಿಂದ ಸೋಲಿಸಿತು. ಕೊನೆಯ ಎಸೆತದಲ್ಲಿ ಚೆನ್ನೈ ಗೆದ್ದಿತು. ಇದರೊಂದಿಗೆ ಐಪಿಎಲ್‌ನಲ್ಲಿ ಕೊನೆಯ ಎಸೆತದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಚೆನ್ನೈ ಬರೆಯಿತು. ಏಪ್ರಿಲ್ 21 ರಂದು ಮಹೇಂದ್ರ ಸಿಂಗ್ ಧೋನಿ ಅವರ ಅತ್ಯುತ್ತಮ ಬ್ಯಾಟಿಂಗ್‌ನಿಂದಾಗಿ ಚೆನ್ನೈ ಕೊನೆಯ ಎಸೆತದಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಧೋನಿ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗುರಿ ಮುಟ್ಟಿಸಿದರು. 20ನೇ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 17 ರನ್‌ಗಳ ಅಗತ್ಯವಿತ್ತು. ಈ ಪೈಕಿ ಕೊನೆಯ 4 ಎಸೆತದಲ್ಲಿ ಧೋನಿ 16 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಎಂಟನೇ ಬಾರಿಗೆ ಗುರಿ ಬೆನ್ನಟ್ಟಿ ಕೊನೆಯ ಎಸೆತದಲ್ಲಿ ಜಯ ಸಾಧಿಸಿತು. ಚೆನ್ನೈ ನಂತರ ಈ ದಾಖಲೆಯಲ್ಲಿ ಮುಂಬೈ ಹೆಸರು ಇದೆ. ಐದು ಬಾರಿಯ ಚಾಂಪಿಯನ್ ತಂಡವು ಕೊನೆಯ ಎಸೆತದಲ್ಲಿ ಆರು ಬಾರಿ ಪಂದ್ಯವನ್ನು ಗೆದ್ದಿದೆ. ಕುತೂಹಲಕಾರಿಯಾಗಿ, ಇವೆರಡೂ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಾಗಿವೆ. ಮುಂಬೈ ಐದು ಬಾರಿ ಮತ್ತು ಚೆನ್ನೈ ನಾಲ್ಕು ಬಾರಿ ಈ ಪ್ರಶಸ್ತಿಯನ್ನು ಗೆದ್ದಿವೆ. ಐಪಿಎಲ್ 2022ರಲ್ಲೂ ಇವರಿಬ್ಬರು ಕಣಕ್ಕಿಳಿದಾಗ ಸಾಕಷ್ಟು ಮನರಂಜನೆಯಿತ್ತು.

ಧೋನಿ ಮೂರನೇ ಬಾರಿಗೆ ಕೊನೆಯ ಓವರ್‌ನಲ್ಲಿ 15ಕ್ಕೂ ಹೆಚ್ಚು ರನ್ ಗಳಿಸಿದರು ಮುಂಬೈ ವಿರುದ್ಧದ ಪಂದ್ಯದಲ್ಲಿ ಕೊನೆಯ ನಾಲ್ಕು ಎಸೆತಗಳಲ್ಲಿ 16 ರನ್ ಗಳಿಸುವ ಮೂಲಕ ಧೋನಿ ಮತ್ತೊಂದು ಪವಾಡ ಮಾಡಿದರು. ಕೊನೆಯ ಓವರ್‌ನಲ್ಲಿ 15ಕ್ಕೂ ಹೆಚ್ಚು ರನ್ ಗಳಿಸಿ ಐಪಿಎಲ್‌ನಲ್ಲಿ ಮೂರನೇ ಬಾರಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು ಮುಂಬೈಗಿಂತ ಮೊದಲು 2016 ಮತ್ತು 2010 ರಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ಈ ಸಾಧನೆ ಮಾಡಿದರು. 2016 ರಲ್ಲಿ ಧೋನಿ, ಅಕ್ಷರ್ ಪಟೇಲ್ ಓವರ್​ನಲ್ಲಿ 22 ರನ್ ಮತ್ತು 2010 ರಲ್ಲಿ ಇರ್ಫಾನ್ ಪಠಾಣ್ ಅವರ ಎಸೆತಗಳಲ್ಲಿ 18 ರನ್ ಗಳಿಸಿದರು. ಪ್ರಾಸಂಗಿಕವಾಗಿ, ಧೋನಿ ಎಲ್ಲಾ ಮೂರು ಸಂದರ್ಭಗಳಲ್ಲಿ ಎಡಗೈ ಬೌಲರ್‌ಗಳ ಮುಂದೆ ಕೊನೆಯ ಓವರ್‌ನಲ್ಲಿ 15 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಪಂದ್ಯದ ವಿವರ ಹೀಗಿದೆ ಪಂದ್ಯದ ಕುರಿತು ಮಾತನಾಡುವುದಾದರೆ, ಮಹೇಂದ್ರ ಸಿಂಗ್ ಧೋನಿ (ಔಟಾಗದೆ 28) ಚೆನ್ನೈ ಸೂಪರ್ ಕಿಂಗ್ಸ್ (CSK) ಮೂರು ವಿಕೆಟ್‌ಗಳಿಂದ ಗೆಲ್ಲಲು ತಮ್ಮ ಫಿನಿಶರ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು. ಇದರಿಂದಾಗಿ ಮುಂಬೈ ಇಂಡಿಯನ್ಸ್ ಸತತ ಏಳನೇ ಸೋಲನ್ನು ಎದುರಿಸಬೇಕಾಯಿತು. ತಿಲಕ್ ವರ್ಮಾ ಅವರ ಅಜೇಯ 51 ರನ್ ಅರ್ಧಶತಕದಿಂದ ಕಳಪೆ ಆರಂಭದಿಂದ ಚೇತರಿಸಿಕೊಂಡ ಮುಂಬೈ ಇಂಡಿಯನ್ಸ್ ಏಳು ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವ ಗೌರವಾನ್ವಿತ ಸ್ಕೋರ್ ದಾಖಲಿಸಿತು. ಇದಕ್ಕುತ್ತರವಾಗಿ ಸಿಎಸ್​ಕೆ ಏಳು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ ಎರಡನೇ ಜಯ ದಾಖಲಿಸಿತು. ಮುಂಬೈ ಇಂಡಿಯನ್ಸ್ ಪಂದ್ಯದ ಹಿಡಿತ ಸಾಧಿಸಿತ್ತು ಆದರೆ ಕೊನೆಯ ಓವರ್‌ಗಳಲ್ಲಿ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸುವಲ್ಲಿ ನಿಷ್ಣಾತರಾಗಿದ್ದ ಧೋನಿ ಕೊನೆಯಲ್ಲಿ ಅದೇ ಹಳೆಯ ಅದ್ಭುತ ಆಟ ತೋರಿಸಿದರು.

ಇದನ್ನೂ ಓದಿ:IPL 2022: ಗೇಮ್ ಫಿನಿಷರ್ ಧೋನಿಯ ಆಟ ನೋಡಿ ಬೆಚ್ಚಿಬಿದ್ದ ಕ್ರೀಡಾ ಜಗತ್ತು! ಟ್ವಿಟರ್​ನಲ್ಲಿ ಹೊಗಳಿಕೆಯ ಸುರಿಮಳೆ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ