MS Dhoni: ‘ಓಂ ಫಿನಿಶಾಯ ನಮಃ’; ಧೋನಿ ಇನ್ನಿಂಗ್ಸ್ ನೋಡಿ ಹಾಡಿಹೊಗಳಿದ ದಿಗ್ಗಜರು
Virendra Sehwag | IPL 2022: ಧೋನಿ ವಿಜಯದ ರನ್ ಬಾರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಧೋನಿಯ ಕುರಿತು ಸಂದೇಶಗಳ ಹೊಳೆಯೇ ಹರಿಯಿತು. ಕ್ರಿಕೆಟ್ ಲೋಕದ ಖ್ಯಾತ ದಿಗ್ಗಜರು ಧೋನಿ ಇನ್ನಿಂಗ್ಸ್ಗೆ ಶಹಬ್ಬಾಸ್ ಎಂದಿದ್ದಲ್ಲದೇ ಇದು ಹಿಂದಿನ ಇನ್ನಿಂಗ್ಸ್ಗಳಿಗಿಂತ ವಿಶೇಷ ಎಂದು ಹೊಗಳಿದರು.
ಗುರುವಾರ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು (IPL 2022) ಹಳೆಯ ಧೋನಿಯನ್ನು (MS Dhoni) ಎಲ್ಲರಿಗೂ ನೆನಪಿಸಿತು. ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ, ತಂಡಕ್ಕೆ ಜಯ ತಂದುಕೊಟ್ಟರು ಮಹೇಂದ್ರ ಸಿಂಗ್ ಧೋನಿ. ರೋಚಕ ಪಂದ್ಯದಲ್ಲಿ ಚೆನ್ನೈ 3 ವಿಕೆಟ್ಗಳಿಂದ ಜಯಭೇರಿ ಬಾರಿಸಿತು. ಅಂತಿಮ ನಾಲ್ಕು ಎಸೆತಗಳಲ್ಲಿ ಗೆಲ್ಲಲು ಸಿಎಸ್ಕೆಗೆ 16 ರನ್‌ಗಳ ಅಗತ್ಯವಿತ್ತು. ಅದ್ಭುತ ಲಯದಲ್ಲಿದ್ದ ಧೋನಿ, ಒಂದು ಸಿಕ್ಸರ್, ಒಂದು ಬೌಂಡರಿ, ಎರಡು ರನ್ ಹಾಗೂ ಮತ್ತೊಂದು ಬೌಂಡರಿಯ ಮೂಲಕ ಗೆಲುವಿನ ಮೈಲಿಗಲ್ಲನ್ನು ತಲುಪಿದರು. ಧೋನಿ ವಿಜಯದ ರನ್ ಬಾರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಧೋನಿಯ ಕುರಿತು ಸಂದೇಶಗಳ ಹೊಳೆಯೇ ಹರಿಯಿತು. ಕ್ರಿಕೆಟ್ ಲೋಕದ ಖ್ಯಾತ ದಿಗ್ಗಜರು ಧೋನಿ ಇನ್ನಿಂಗ್ಸ್ಗೆ ಶಹಬ್ಬಾಸ್ ಎಂದಿದ್ದಲ್ಲದೇ ಇದು ಹಿಂದಿನ ಇನ್ನಿಂಗ್ಸ್ಗಳಿಗಿಂತ ವಿಶೇಷ ಎಂದು ಹೊಗಳಿದರು. ಧೋನಿ ಬಗ್ಗೆ ಕ್ರಿಕೆಟ್ ದಿಗ್ಗಜರ ಟ್ವೀಟ್ಗಳು ಇಲ್ಲಿವೆ.
ಓಂ ಫಿನಿಶಾಯ ನಮಃ ಎಂದ ಸೆಹ್ವಾಗ್:
ಇಂಗ್ಲೆಂಡ್ನ ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್ ಮಾಡಿ, ‘ಸಾರ್ವಕಾಲಿಕ ಹಿಟ್ಟರ್ನ ಶ್ರೇಷ್ಠ ಕೊನೆಯ ಓವರ್ಗಳಲ್ಲೊಂದು’ ಎಂದು ಹೊಗಳಿದರು. ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಸದ್ಯ ಎಲ್ಲರ ಮನಗೆದ್ದಿದೆ. ಯಾವಾಗಲೂ ಪನ್ಗಳ ಮೂಲಕ ಗಮನಸೆಳೆಯುವ ಅವರು, ‘ಓಂ ಫಿನಿಶಾಯ ನಮಃ, ಎಂತಹ ಅದ್ಭುತ ಜಯ, ಬಹಳ ಚೆನ್ನಾಗಿತ್ತು’ ಎಂದು ಬರೆದಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗಿದೆ.
MS Dhoni … Om Finishaya Namaha . What a win. Romba Nalla #MIvsCSK
— Virender Sehwag (@virendersehwag) April 21, 2022
ಕೆವಿನ್ ಪೀಟರ್ಸನ್ ಟ್ವೀಟ್ ಮಾಡಿ, ‘ಅವರು ಎಂಎಸ್’ ಎಂದು ಬರೆದಿದ್ದಾರೆ. ಮಹಮ್ಮದ್ ಕೈಫ್ ಟ್ವೀಟ್ವ ಮಾಡಿ, ‘ಧೋನಿ ಫಿನಿಶ್ ಆಗಿಲ್ಲ, ಅವರು ಫಿನಿಶರ್.. ಅವರಲ್ಲಿ ಇನ್ನೂ ಬಹಳಷ್ಟು ಆಟ ಬಾಕಿ ಇದೆ’ ಎಂದು ಬರೆದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಆಟಗಾರ ರಶೀದ್ ಖಾನ್ ‘ಎಂಎಸ್ ದಿ ಫಿನಿಶರ್’ ಎಂದು ಬರೆದು ಖುಷಿ ಹಂಚಿಕೊಂಡಿದ್ದಾರೆ.
ಧೋನಿ ಕುರಿತ ಟ್ವೀಟ್ಗಳು ಇಲ್ಲಿವೆ:
His name is MS! ?
— Kevin Pietersen? (@KP24) April 21, 2022
Dhoni finish nahi, finisher hai.. finisher hai.. finisher hai.. not out again.. picture abhi bahut bahut bahut baaki hai. @msdhoni
— Mohammad Kaif (@MohammadKaif) April 21, 2022
M S D THE FINISHER ?????
— Rashid Khan (@rashidkhan_19) April 21, 2022
— Harbhajan Turbanator (@harbhajan_singh) April 21, 2022
Turning the clock back to good old times #Dhoni ?
— Irfan Pathan (@IrfanPathan) April 21, 2022
ಸುರೇಶ್ ರೈನಾ ಹೇಳಿದ್ದೇನು?
ಸುರೇಶ್ ರೈನಾ ಟ್ವೀಟ್ ಮಾಡಿ, ‘ಮುಂಬೈ ಹಾಗೂ ಚೆನ್ನೈ ನಡುವಿನ ಪಂದ್ಯ ಅತ್ಯಂತ ಕಾತರದಿಂದ ಕಾಯುತ್ತಿದ್ದ ಪಂದ್ಯವಾಗಿತ್ತು. ಧೋನಿಯವರಿಂದ ಅಗತ್ಯವಿದ್ದ ಅದ್ಭುತ ಇನ್ನಿಂಗ್ಸ್. ಚೆನ್ನೈಗೆ ಅಭಿನಂದನೆಗಳು’ ಎಂದು ಬರೆದಿದ್ದಾರೆ.
The most awaited match of the tournament #CSKvMI. A much needed innings by our very own @msdhoni bhai at the end, always a delight to watch! Congratulations to the whole #CSK team on another massive win ? #yellove pic.twitter.com/2H0GTZh3xX
— Suresh Raina?? (@ImRaina) April 21, 2022
ಇದನ್ನೂ ಓದಿ: MS Dhoni: ಇದು ಹಳೆಯ ಧೋನಿ ಇನ್ನಿಂಗ್ಸ್! ಕೊನೆಯ 4 ಎಸೆತಗಳಲ್ಲಿ 16 ರನ್ ಚಚ್ಚಿ ತಂಡ ಗೆಲ್ಲಿಸಿದ MSD- ವಿಡಿಯೋ ಇಲ್ಲಿದೆ
ಮತ್ತಷ್ಟು ಹೊಸ ದಾಖಲೆ ಬರೆದ ‘ಕೆಜಿಎಫ್ 2’; ಹೊರದೇಶದಲ್ಲಿ ಚಿತ್ರದ ಕಲೆಕ್ಷನ್ ಎಷ್ಟು?