ಹಿಂದೂಗಳೇ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಮಾಡುವಂತೆ ಜಾಗೃತಿ ಮೂಡಿಸಲು ಸಿದ್ದಲಿಂಗ ಸ್ವಾಮೀಜಿ ಸಿದ್ಧತೆ

| Updated By: sandhya thejappa

Updated on: Apr 06, 2022 | 8:44 AM

ನಾವು ಕಳೆದ 20 ವರ್ಷದಿಂದ ಆಂಜನೇಯ ಭಕ್ತರು. ಹೀಗಾಗಿ ಮನೆಯಲ್ಲಿ ಆಂಜನೇಯನ ಫೋಟೋ ಹಾಕಿದ್ದೇವೆ ಎಂದು ಹೇಳಿದ ಶಂಶುದ್ದೀನ್, ತಮ್ಮ ಮನೆಯ ಜಗಲಿಯಲ್ಲಿ ಹಿಂದೂ ದೇವರ ಫೊಟೋ ಇಟ್ಟು ಪೂಜೆ ಮಾಡುತ್ತಾರೆ.

ಹಿಂದೂಗಳೇ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಮಾಡುವಂತೆ ಜಾಗೃತಿ ಮೂಡಿಸಲು ಸಿದ್ದಲಿಂಗ ಸ್ವಾಮೀಜಿ ಸಿದ್ಧತೆ
ಶ್ರೀರಾಮಸೇನೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ
Follow us on

ಕಲಬುರಗಿ: ಮುಸ್ಲಿಂ (Muslim) ವ್ಯಾಪಾರಿಗಳಿಗೆ ಮತ್ತೊಂದು ಏಟು ನೀಡಲು ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳಿಂದ ಸಿದ್ಧತೆ ನಡೆಯುತ್ತಿದೆ. ಹಿಂದೂಗಳೇ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಮಾಡುವಂತೆ ಜಾಗೃತಿ ಮೂಡಿಸಲು ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಮುಂದಾಗಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂದು ಹೇಳುತ್ತೀರಿ. ಆದರೆ ಹಿಂದೂಗಳು ಯಾವುದೇ ವ್ಯಾಪಾರ ವಹಿವಾಟು ಮಾಡಲ್ಲ. ಹಿಂದೂಗಳು ಕೀಳರಿಮೆ ಬಿಟ್ಟು ವ್ಯಾಪಾರ ಮಾಡಲು ಮುಂದಾಗಿ. ಕೆಲವೊಂದು ವ್ಯಾಪಾರಗಳಲ್ಲಿ ಮುಸ್ಲಿಮರು ಹಿಡಿತ ಹೊಂದಿದ್ದಾರೆ. ಆ ಹಿಡಿತ ತಪ್ಪಿಸಲು ಹಿಂದೂಗಳು ಮುಂದಾಗಬೇಕೆಂದು ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ದೇಗುಲದಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡಬೇಡಿ- ಬಜರಂಗದಳ ಮನವಿ:
ದೇಗುಲದಲ್ಲಿ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡಬೇಡಿ ಅಂತ ರಾಮದುರ್ಗ ತಹಶಿಲ್ದಾರ್‌ಗೆ ವಿಶ್ವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮನವಿ ಮಾಡಿವೆ. ರಾಮದುರ್ಗದ ವೆಂಕಟೇಶ್ವರ ದೇವಾಲಯದಲ್ಲಿ ಜಾತ್ರೆ ಹಿನ್ನೆಲೆ ಹಿಂದೂಯೇತರ ವರ್ತಕರಿಗೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ. ಏಪ್ರಿಲ್ 11ರಿಂದ 15ರವರೆಗೆ ವೆಂಕಟೇಶ್ವರ ಜಾತ್ರಾ ಮಹೋತ್ಸವ ನಡೆಲಿದೆ. ಇನ್ನು ಮಸೀದಿಗಳ ಮೇಲಿನ ಧ್ವನಿವರ್ಧಕ ನಿಷೇಧಿಸುವಂತೆಯೂ ಆಗ್ರಹಿಸಿವೆ.

ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ಆಂಜನೇಯನಿಗೆ ಪೂಜೆ:
ಕೊಪ್ಪಳ: ಹಿಂದೂಗಳು, ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಯಾರೋ ಮಾಡುವ ಕೆಲಸದಿಂದ ಕೆಟ್ಟ ಹೆಸರು ಬರುತ್ತಿದೆ. ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಧಾರ್ಮಿಕ ಮುಖಂಡರು ಈ ವಿವಾದವನ್ನು ಬಗೆಹರಿಸಿ ಅಂತ ಕೊಪ್ಪಳದ ಶಂಶುದ್ದೀನ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ನಾವು ಕಳೆದ 20 ವರ್ಷದಿಂದ ಆಂಜನೇಯ ಭಕ್ತರು. ಹೀಗಾಗಿ ಮನೆಯಲ್ಲಿ ಆಂಜನೇಯನ ಫೋಟೋ ಹಾಕಿದ್ದೇವೆ ಎಂದು ಹೇಳಿದ ಶಂಶುದ್ದೀನ್, ತಮ್ಮ ಮನೆಯ ಜಗಲಿಯಲ್ಲಿ ಹಿಂದೂ ದೇವರ ಫೊಟೋ ಇಟ್ಟು ಪೂಜೆ ಮಾಡುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ದೇಣಿಗೆ ನೀಡಿದ್ದರು.

ಇದನ್ನೂ ಓದಿ

ರಾಜ್ಯದಲ್ಲಿ ಧರ್ಮ ಸಂಘರ್ಷಕ್ಕೆ ಬ್ರೇಕ್ ಹಾಕಲು ಮುಂದಾದ ಹೆಚ್ಡಿ ಕುಮಾರಸ್ವಾಮಿ; ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ

Horoscope Today- ದಿನ ಭವಿಷ್ಯ; ಈ ರಾಶಿಯ ವಿದ್ಯಾರ್ಥಿಗಳು ದಿನ ಪೂರ್ತಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ

Published On - 8:39 am, Wed, 6 April 22