ಮಹಿಳಾ ಪೇದೆಯ ಸಿಡಿಆರ್ ಕದ್ದು ಬೇರೆ ವ್ಯಕ್ತಿಗೆ ನೀಡಿದ್ದಕ್ಕೆ ಮದ್ವೆ ರದ್ದು: ಇದಕ್ಕೆ ಕಾರಣರಾದ ಇಬ್ಬರು ಕಾನ್ಸ್​ಟೇಬಲ್ ಸಸ್ಪೆಂಡ್

| Updated By: ರಮೇಶ್ ಬಿ. ಜವಳಗೇರಾ

Updated on: Dec 27, 2023 | 1:44 PM

ಮಹಿಳಾ ಪೇದೆಯ ಸಿಡಿಆರ್ ಕದ್ದಿಲ್ಲದೇ ಬೇರೆ ವ್ಯಕ್ತಿಗೆ ನೀಡಿದ್ದು, ಆ ವ್ಯಕ್ತಿ ಮಹಿಳಾ ಪೇದೆಯ ಮದುವೆಯನ್ನೇ ನಿಲ್ಲಿಸಿದ್ದಾನೆ. ಇದಕ್ಕೆ ಮೂಲಕ ಕಾರಣರಾದ ಕಲಬುರಗಿಯ ಇಬ್ಬರು ಹೆಡ್​ ಕಾನ್ಸ್​ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ.

ಮಹಿಳಾ ಪೇದೆಯ ಸಿಡಿಆರ್ ಕದ್ದು ಬೇರೆ ವ್ಯಕ್ತಿಗೆ ನೀಡಿದ್ದಕ್ಕೆ ಮದ್ವೆ ರದ್ದು: ಇದಕ್ಕೆ ಕಾರಣರಾದ ಇಬ್ಬರು ಕಾನ್ಸ್​ಟೇಬಲ್ ಸಸ್ಪೆಂಡ್
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ, (ಡಿಸೆಂಬರ್ 27): ಮಹಿಳಾ ಪೇದೆಯೊಬ್ಬರ(Lady Police) ಸಿಡಿಆರ್ ಕದ್ದು ಬೇರೆ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಬಳಿಕ ಖಾಸಗಿ ವ್ಯಕ್ತಿ ಮಹಿಳಾ ಪೇದೆಯನ್ನು ಮದುವೆಯಾಗಬೇಕಿದ್ದ ಹುಡುಗನಿಗೆ ಸಿಡಿಆರ್ ಕಳುಹಿಸಿದ್ದಾನೆ. ಇದರಿಂದ ಮಹಿಳಾ ಪೇದೆಯ ಮದುವೆ ರದ್ದಾಗಿದೆ. ಇದೀಗ ಇದಕ್ಕೆಲ್ಲ ಕಾರಣರಾದ ಕಲಬುರಗಿಯ (Kalaburagi) ಮಹಿಳಾ ಠಾಣೆ ಹೆಡ್ ಕಾನ್ಸಟೇಬಲ್ ತುಕಾರಾಂ ಹಾಗೂ ಸ್ಟೇಷನ್ ಬಜಾರ್ ಠಾಣೆ ಹೆಡ್ ಕಾನ್ಸಟೇಬಲ್ ವೇದರತ್ನ ಅವರನ್ನು ಪೊಲೀಸ್ ಆಯುಕ್ತ ಆರ್ ಚೇತನ್ ಅಮಾನತು ಮಾಡಿ ಆದೇಶ.

ಬೇರೆ ಕ್ರೈಂ ನಂಬರ್ ಹಾಕಿ ಮಹಿಳಾ ಕಾನ್ಸಟೇಬಲ್ ಸಿಡಿಆರ್ ಕದ್ದಿದ್ದರು. ಅಲ್ಲದೇ ಕದ್ದಿದ್ದಲ್ಲೇ ಅದನ್ನು ಖಾಸಗಿ ವ್ಯಕ್ತಿಗೆ ನೀಡಿದ್ದರು. ಇದನ್ನು ತೆಗೆದುಕೊಂಡಿದ್ದ ಖಾಸಗಿ ವ್ಯಕ್ತಿ, ಅವರನ್ನು (ಮಹಿಳಾ ಪೇದೆ) ನಾನು ಲವ್ ಮಾಡಿದ್ದೆನೆಂದು ಸಿಡಿಆರ್ ಕಳುಹಿಸಿ ಮದುವೆ ನಿಲ್ಲಿಸಿದ್ದಾನೆ. ಹೀಗಾಗಿ ಖಾಸಗಿ ವ್ಯಕ್ತಿಗೆ ಸಿಡಿಆರ್ ನೀಡಿದ ಆರೋಪದಡಿ ಮಹಿಳಾ ಠಾಣೆ ಹೆಡ್ ಕಾನ್ಸಟೇಬಲ್ ತುಕಾರಾಂ ಹಾಗೂ ಸ್ಟೇಷನ್ ಬಜಾರ್ ಠಾಣೆ ಹೆಡ್ ಕಾನ್ಸಟೇಬಲ್ ವೇದರತ್ನ ಅಮಾನತು ಮಾಡಿ ಪೊಲೀಸ್ ಆಯುಕ್ತ ಆರ್ ಚೇತನ್ ಅದೇಶ ಹೊರಡಿಸಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ