ಪ್ರಿಯಕರನ ಜೊತೆಗೂಡಿ ಗಂಡನನ್ನೆ ಕೊಂದ ಪತ್ನಿ, ಪ್ರಿಯಕರನನ್ನ ಗ್ರಾಮಸ್ಥರು ಥಳಿಸಿದಾಗ ಅಸಲಿ ಕಥೆ ಬಾಯಿಬಿಟ್ಟಿದ್ದಾನೆ!
ರಾಜಪ್ಪ ರೆಡ್ಡಿ( 38) ಹೆಂಡತಿ ಮತ್ತು ಪ್ರಿಯಕರನಿಂದ ಕೊಲೆಯಾದ ವ್ಯಕ್ತಿ. ಪತ್ನಿ ಅನಸೂಯಾ ಪ್ರಿಯಕರ ಶ್ರೀಶೈಲ್ ಜೊತೆ ಸೇರಿ ಪತಿ ರಾಜಪ್ಪನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ ಘಟನೆ ನಡೆದಿದೆ. ಕಳೆದ ಆಗಸ್ಟ್ 24 ರಂದು ರಾಜಪ್ಪ ರೆಡ್ಡಿ ಕೊಲೆಯಾಗಿದ್ದ.
ಕಲಬುರಗಿ: ಪ್ರಿಯಕರನೊಂದಿಗೆ ಕೈಜೋಡಿಸಿದ ಪತ್ನಿ ತನ್ನ ಗಂಡನನ್ನೆ ಕೊಂದಿದ್ದಾಳೆ. ಕೊಲೆ ಮಾಡಿ ಕುಡಿದು ಸತ್ತಿದ್ದಾನೆ ಅಂತಾ ಹೆಂಡತಿ ಕತೆ ಕಟ್ಟಿದ್ದಳು. ಇನ್ನು ಕುಟುಂಬದವರೂ ಸಹ ಕುಡಿದು ಸತ್ತಿದ್ದಾನೆ ಅಂತಾ ನಂಬಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅಂತ್ಯ ಸಂಸ್ಕಾರ ಆಗಿ ಎರಡು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ.
ರಾಜಪ್ಪ ರೆಡ್ಡಿ( 38) ಹೆಂಡತಿ ಮತ್ತು ಪ್ರಿಯಕರನಿಂದ ಕೊಲೆಯಾದ ವ್ಯಕ್ತಿ. ಪತ್ನಿ ಅನಸೂಯಾ ಪ್ರಿಯಕರ ಶ್ರೀಶೈಲ್ ಜೊತೆ ಸೇರಿ ಪತಿ ರಾಜಪ್ಪನ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ ಘಟನೆ ನಡೆದಿದೆ. ಕಳೆದ ಆಗಸ್ಟ್ 24 ರಂದು ರಾಜಪ್ಪ ರೆಡ್ಡಿ ಕೊಲೆಯಾಗಿದ್ದ.
ಗಂಡನ ಸಾವಿನ ಬಳಿಕ ಪ್ರಿಯಕರನೊಂದಿಗೆ ಸರಸವಾಡುವಾಗ ಹೆಂಡತಿ ಸಿಕ್ಕಿಬಿದ್ದಿದ್ದಾಳೆ. ಗ್ರಾಮಸ್ಥರು ಪ್ರಿಯಕರನನ್ನ ಕಂಬಕ್ಕೆ ಕಟ್ಟಿ ಥಳಿಸಿದಾಗ ಅಸಲಿ ಕಥೆ ಬಾಯಿಬಿಟ್ಟಿದ್ದಾನೆ. ರಾಜಪ್ಪ ರೆಡ್ಡಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ತೆಲಂಗಾಣದ ಅಂತಾವರಂಗೆ ಪತ್ನಿಯ ಮೆನೆಗೆ ತೆರಳಿದ್ದ. ಕೆಲ ತಿಂಗಳುಗಳ ಕಾಲ ಅಂತಾವರಂ ನಲ್ಲಿಯೇ ರಾಜಪ್ಪ ರೆಡ್ಡಿ ಉಳಿದಿದ್ದ. ಆಗ ಪತ್ನಿ ಅನುಸೂಯಾ ಪಕ್ಕದ ಮನೆಯ ಶ್ರೀಶೈಲ್ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ತಕ್ಷಣ ರಾಜಪ್ಪರೆಡ್ಡಿ ತನ್ನ ಪತ್ನಿ ಅನುಸೂಯಾಳನ್ನು ತವರು ಮನೆಯಿಂದ ಕರೆದುಕೊಂಡು ಬಂದಿದ್ದ.
ಆದರೆ ಗಂಡನ ಮನೆಗೆ ಬಂದ ನಂತರವೂ ಪತ್ನಿಯ ಲವ್ವಿ ಡವ್ವಿ ಮುಂದುವರಿದಿದೆ. ಹೆಂಡತಿಯ ಲವ್ವಿ ಡವ್ವಿಯಿಂದ ರಾಜಪ್ಪ ರೆಡ್ಡಿ ಬೆಸತ್ತಿದ್ದ. ಕುಡಿತದ ಚಟ ಹೊಂದಿದ್ದ ರಾಜಪ್ಪ ರೆಡ್ಡಿಗೆ ಪತ್ನಿ ಮತ್ತು ಪ್ರಿಯಕರ ಕಂಠ ಪೂರ್ತಿ ಕುಡಿಸಿ ಮಾತ್ರೆ ನೀಡಿದ್ದರು. ಕುಡಿದು ಮಾತ್ರೆ ಸೇವಿಸಿದರೂ ರಾಜಪ್ಪ ರೆಡ್ಡಿ ಸಾಯಲಿಲ್ಲ. ಕೊನೆಗೆ ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗಂಡನ ಕೊಲೆ ಮಾಡಿದ ಪತ್ನಿ ಅನುಸೂಯಾ ಮತ್ತು ಪ್ರಿಯಕರ ಶ್ರೀಶೈಲನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(wife kills husband with the help of paramour in a village in sedam taluk kalaburagi)