ಕಲಬುರಗಿ: ಅಂತರ್ಜಾತಿ ಪ್ರೀತಿ(Love) ವಿರೋಧಿಸಿ ಯುವತಿ ತಂದೆಯಿಂದ ಯುವಕನ ಮೇಲೆ ಹಲ್ಲೆ ಮಾಡಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಗಾಗಿರುವ ಘಟನೆ ಕಲಬುರಗಿ(Kalaburagi) ತಾಲೂಕಿನ ಹೊನ್ನಕಿರಣಗಿ ಗ್ರಾಮದ ಮನೆಯಲ್ಲಿ ನಡೆದಿದೆ. ನೇಣುಬಿಗಿದುಕೊಂಡು ಗುರುಲಿಂಗಪ್ಪ ಮುಗಟಿ(26) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಮೃತ ವ್ಯಕ್ತಿ ನೆರೆಮನೆಯ ಯುವತಿಯನ್ನ ಪ್ರೀತಿಸುತ್ತಿದ್ದ. ಈ ವಿಚಾರ ಆಕೆಯ ತಂದೆಗೆ ಗೊತ್ತಾಗಿ, ಮಗಳ ತಂಟೆಗೆ ಬರದಂತೆ ಎಚ್ಚರಿಕೆ ಕೂಡ ನೀಡಿದ್ದ. ಇದಾದ ಬಳಿಕ ಮೃತ ಗುರುಲಿಂಗಪ್ಪ ಊರುಬಿಟ್ಟು ಬೆಂಗಳೂರು ಸೇರಿದ್ದ. ನಂತರ ಆತನಿಗೆ ಕರೆ ಮಾಡಿದ ಯುವತಿ ಕಲಬುರಗಿಗೆ ಬರುವಂತೆ ಹೇಳಿದ್ದಾಳೆ. ಊರಿಗೆ ಬರುತ್ತಿದ್ದಂತೆ ಗುರುಲಿಂಗಪ್ಪ ಮತ್ತು ಆತನ ಸೋದರನ ಮೇಲೆ ಕಲ್ಲು, ಕಬ್ಬಿಣದ ರಾಡ್ನಿಂದ ಯುವತಿ ತಂದೆ ಹಲ್ಲೆ ಮಾಡಿದ್ದ. ಬಳಿಕ ಕೂಡಿ ಹಾಕಿದ್ದರು. ಇದೇ ಕಾರಣಕ್ಕೆ ಮನನೊಂದು ಯುವಕ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ: ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಮಾಗಡಿ ಠಾಣೆ ಪೊಲೀಸರ ಬಂಧಿಸಿದ್ದಾರೆ. ಮಂಜುನಾಥ್, ಗಣೇಶ್, ಸಂದೀಪ್ ಬಂಧಿತ ಆರೋಪಿಗಳು. ಇವರಿಂದ ಬರೊಬ್ಬರಿ 27 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:Viral News: ಫಸ್ಟ್ ನೈಟ್ ನಡೆಯುವುದಕ್ಕೂ ಮುನ್ನ, ಶೋಭನದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರ ಕೂಲಂಬಿ ಸರ್ಕಾರಿ ಪಿಯುಸಿ ಕಾಲೇಜಿನಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಕುಂದೂರ ಆಂಜನೇಯ ಟಿ (30) ಹಾಗೂ ಎನ್ ಎಚ್ ಆಕಾಶ ಬಂಧಿತರು. ಇನ್ನು ಈ ಆರೋಪಿಗಳು ಕಾಲೇಜಿನ ಗಣಕ ಯಂತ್ರ ಕೊಠಡಿಯ ಬಾಗಿಲು ಮುರಿದು ಯುಪಿಎಸ್, ಲ್ಯಾಪ್ ಟಾಪ್, ಪ್ರಾಜೆಕ್ಟರ್ ಸೇರಿ 84 ಸಾವಿರ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನ ಮಾಡಿದ್ದರು. ಈ ಹಿಂದೆ ಕೂಡ ಇದೇ ಕಾಲೇಜಿನಲ್ಲಿ 20ಕ್ಕೂ ಹೆಚ್ಚು ಕಂಪ್ಯೂಟರ್ಗಳ ಕಳ್ಳತನ ಆಗಿತ್ತು. ಈ ಕುರಿತು ಆರೋಪಿಗಳನ್ನ ಪೊಲೀಸರು ಇನ್ನಷ್ಟು ವಿಚಾರಣೆ ಮಾಡುತ್ತಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ