ಬೆಂಗಳೂರು: ಕೆಲವು ಸಂಘಟನೆಗಳು ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಿವೆ. ಆದರೆ ಟ್ರಾಕ್ಟರ್ ಮೆರವಣಿಗೆ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ನಿರ್ದಿಷ್ಟವಾಗಿ ಮಾಹಿತಿ ಕೊಟ್ಟರೆ ನಾವು ಅದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ತಯಾರಿದ್ದೇವೆ. ಸದ್ಯ ಬೆಂಗಳೂರಿಗೆ ಟ್ರಾಕ್ಟರ್ನಲ್ಲಿ ಬರುವುದಕ್ಕೆ ಯಾವುದೇ ಅನುಮತಿ ಕೊಟ್ಟಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಫ್ರೀಡಂಪಾರ್ಕ್ ಪ್ರತಿಭಟನೆ ಸಂಬಂಧ ಕೆಲವರು ಮನವಿ ಮಾಡಿದ್ದಾರೆ ಅದಕ್ಕೆ ಒಪ್ಪಿಗೆ ಇದೆ. ನಾಳೆ ಪೆರೇಡ್ ಗ್ರೌಂಡ್ ಬಂದೋಬಸ್ತ್ಗೆ 1000 ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕೋವಿಡ್ ಪ್ರೋಟೋಕಾಲ್ ಇರುತ್ತದೆ ಎಂದು ತಿಳಿಸಿದ ಕಮಲ್ ಪಂತ್ ಆಹ್ವಾನ ಇರುವವರು ಮಾತ್ರ ಪೆರೇಡ್ಗೆ ಬರಬೇಕು ಎಂದು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಮೆರವಣಿಗೆಗೆ ಬೆಂಬಲ ಸೂಚಿಸಿ ಚಾಮರಾಜನಗರದಿಂದ ದೆಹಲಿಗೆ ರೈತರ ರಥಯಾತ್ರೆ