ಕನಕ ಗುರು ಸ್ವಾಮೀಜಿ ವಾಕ್ ಕ್ರಾಂತಿ! ಸೂರ್ಯ ದಿಕ್ಕು ಬದಲಿಸುವ ದಿನ.. ಕುರುಬರ ದಿಕ್ಕು ಬದಲಿಸಲು ಪಣ

ಜನವರಿ 15 ರಿಂದ ಕನಕ ಗುರು ಸ್ವಾಮೀಜಿ ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ರಾಜಧಾನಿ ಬೆಂಗಳೂರು ವರಗೆ ಪಾದಯಾತ್ರೆ ಮಾಡಲಿದ್ದು, ಫೆಬ್ರವರಿ 7 ಕ್ಕೆ ಬೆಂಗಳೂರು ತಲುಪಲಿದ್ದಾರೆ. ಲಕ್ಷಾಂತರ ಜನರ ಜೊತೆ ಸೇರಿ ಬೆಂಗಳೂರಿನಲ್ಲಿ ಸಮಾವೇಶ ಮಾಡಲು ಸ್ವಾಮೀಜಿ ನಿರ್ಧರಿಸಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಇದರ ನೇತೃತ್ವ ವಹಿಸಲಿದ್ದಾರೆ. ಕುರುಬ ಸಮಾಜವನ್ನ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂಬುವುದು ಈ ಪಾದಯಾತ್ರೆಯ ಧ್ಯೇಯವಾಕ್ಯ.

ಕನಕ ಗುರು ಸ್ವಾಮೀಜಿ ವಾಕ್ ಕ್ರಾಂತಿ! ಸೂರ್ಯ ದಿಕ್ಕು ಬದಲಿಸುವ ದಿನ.. ಕುರುಬರ ದಿಕ್ಕು ಬದಲಿಸಲು ಪಣ
ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ
Updated By: ಸಾಧು ಶ್ರೀನಾಥ್​

Updated on: Dec 03, 2020 | 4:00 PM

ದಾವಣಗೆರೆ: ಕುರುಬ ಸಮುದಾಯ ಅಂದ್ರೆ ರಾಜ್ಯದಲ್ಲಿ ಪ್ರಭಾವಿ ಸಮಾಜ ಎಂಬುವಷ್ಟರ ಮಟ್ಟಿಗೆ ಈಗ ಬದಲಾವಣೆಯಾಗಿದ್ದು, ಇದಕ್ಕೆ ಕಾರಣ ರಾಜಕೀಯವಾಗಿ, ಆರ್ಥಿಕವಾಗಿ ಹೆಚ್ಚು ಬಲಿಷ್ಟತೆಯನ್ನು ಈ ಸಮುದಾಯ ಹೊಂದಿದೆ. ಇದಷ್ಟೇ ಅಲ್ಲದೆ ರಾಜ್ಯದ ನಾಲ್ಕು ದಿಕ್ಕುಗಳಿಗೆ ಶಾಖಾಮಠಗಳನ್ನು ಹೊಂದಿರುವ ಹಾವೇರಿ ಜಿಲ್ಲೆಯ ಬಾಡಾದಲ್ಲಿ ಇರುವ ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿಯು ಕೂಡ ಕುರುಬ ಸಮಾಜದ ಏಳಿಗೆಗೆ ಮುಖ್ಯ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ತಮ್ಮ ಹೇಳಿಕೆ ನಿರ್ಧಾರದ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದ್ದ ಸ್ವಾಮೀಜಿ ಇತ್ತೀಚೆಗೆ ಬೆಳಿಗ್ಗೆ ಸಂಜೆ ಎನ್ನದೇ ಬೇವರಿಳಿಸುತ್ತಿದ್ದಾರೆ. ಅರೇ ಸ್ವಾಮೀಜಿ ಬೇವರಳಿಸುತ್ತಿದ್ದಾರೆ ಅಂದ್ರೆ ಯಾವುದಾದ್ರು ಕಸರತ್ತು ಮಾಡುತ್ತಿದ್ದಾರಾ? ಎಂಬುದು ಸದ್ಯಕ್ಕೆ ಚರ್ಚೆಯಾಗುತ್ತಿರುವ ವಿಚಾರ. ಆದ್ರೆ ನಿಜಾಂಶ ಬೇರೆಯದ್ದೇ ಇದೆ. ಅಸಲಿಗೆ ಕನಕ ಗುರು ಸ್ವಾಮೀಜಿ ದಿನಕ್ಕೆ ಎಳು ಸಾವಿರ ಹೆಜ್ಜೆ ಹಾಕುತ್ತಿದ್ದಾರೆ ಮತ್ತು ದಿನದಿಂದ ದಿನಕ್ಕೆ ಈ ಹೆಜ್ಜೆಗಳ ಸಂಖ್ಯೆ ಹೆಚ್ಚಿಸುತ್ತಿದ್ದಾರೆ. ಅಂದ್ರೆ ಬರೊಬ್ಬರಿ 6 ಕಿ.ಮೀ ಪ್ರತಿನಿತ್ಯ ವಾಕ್ ಮಾಡುತ್ತಿದ್ದಾರೆ.

ಕನಕ ಗುರು ಸ್ವಾಮೀಜಿ

ನವೆಂಬರ್ 22 ರಿಂದ ಜನವರಿ 15 ವರೆಗೆ ವಾಕ್ ಮಾಡುತ್ತಲೇ ಇರುತ್ತಾರೆ ಎನ್ನುವ ಮಾಹಿತಿ ಬಂದಿದ್ದು, 340 ಕಿ.ಮೀ ನಡೆಯಲು 55 ದಿನಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿಯೇ ಕಾಗಿನೆಲೆ ಕನಕ ಅಭಿವೃದ್ಧಿ ಪ್ರಾಧಿಕಾರದಲ್ಲಿ ವಿಶಾಲವಾದ ಸ್ಥಳವಿದೆ. ಅಲ್ಲಿ ತಮ್ಮ ಪೂರ್ವ ತಯಾರಿ ಮಾಡುತ್ತಿದ್ದಾರೆ.

ಇತ್ತೀಚಿನ ಕೆಲ ವರ್ಷ ಕನಕ ಗುರು ಸ್ವಾಮೀಜಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ಇರುವ ಶಾಖಾ ಮಠದಲ್ಲಿ ವಾಸವಿದ್ದರು. ಆದ್ರೆ ಈ ವಾಕ್ ಮಾಡುವುದಕ್ಕಾಗಿಯೇ ಅವರು ಕಾಗಿನೆಲೆ ಮೂಲ ಮಠಕ್ಕೆ ಹೋಗಿದ್ದಾರೆ. ವಾಕ್ ಮಾಡಲು ವಿಶೇಷ ಸಿದ್ಧತೆ ಮಾಡಿಕೊಂಡಿದ್ದು, ಇತ್ತೀಚಿಗೆ ಬೆಂಗಳೂರಿಗೆ ಹೋದಾಗ ಅವರ ಸ್ನೇಹಿತರಾದ ರಾಮಮೂರ್ತಿ ಸ್ವಾಮೀಜಿಗಳು ವಿಶೇಷ ಶೂ ಹಾಗೂ ಕೈಕಾಲಿಗೆ ಹಾಕಿಕೊಳ್ಳಲು ನ್ಯೂಕ್ಯಾಪ್ಸ್​ಕೊಡಿಸಿದ್ದಾರೆ.

50 ವರ್ಷ ಆಯುವಿನ ಸ್ವಾಮೀಜಿ ಕಳೆದ 11 ದಿನಗಳಿಂದ ವಾಕ್​ ಮಾಡಿ ತೂಕ ಸ್ವಲ್ಪ ಕಡಿಮೆಯಾಗಿದೆ. ನಾವು ಮಾಡುವ ಕಾರ್ಯಕ್ಕೆ ತಮ್ಮ ದೇಹ ಒಗ್ಗುವಂತೆ ಇರಬೇಕು. ಇದಕ್ಕಾಗಿಯೇ ತಾಲೀಮು ಅಗತ್ಯವಾಗಿದೆ. ಪಾದಯಾತ್ರೆ ಮಾಡುವಾಗ ಭಕ್ತರು ಹೊಸ ಶೂ ಕೊಟ್ಟರೆ ನಾನು ಧರಿಸುವುದಿಲ್ಲ ಕಾರಣ ಅವು ಕಾಲು ನೋವು ಮಾಡುವ ಸಾಧ್ಯತೆ ಇರುತ್ತದೆ ಎಂದು ಸ್ವಾಮೀಜಿ ಹೇಳಿದರು.

ಪಾದಯಾತ್ರೆಯಲ್ಲಿ ನಿರತರಾಗಿರುವ ಕನಕ ಗುರು ಸ್ವಾಮೀಜಿ

ಜನವರಿ 15 ರಿಂದ ಕನಕ ಗುರು ಸ್ವಾಮೀಜಿ ಹಾವೇರಿ ಜಿಲ್ಲೆಯ ಕಾಗಿನೆಲೆಯಿಂದ ರಾಜಧಾನಿ ಬೆಂಗಳೂರು ವರಗೆ ಪಾದಯಾತ್ರೆ ಮಾಡಲಿದ್ದು, ಫೆಬ್ರವರಿ 7 ಕ್ಕೆ ಬೆಂಗಳೂರು ತಲುಪಲಿದ್ದಾರೆ. ಲಕ್ಷಾಂತರ ಜನರ ಜೊತೆ ಸೇರಿ ಬೆಂಗಳೂರಿನಲ್ಲಿ ಸಮಾವೇಶ ಮಾಡಲು ಸ್ವಾಮೀಜಿ ನಿರ್ಧರಿಸಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಇದರ ನೇತೃತ್ವ ವಹಿಸಲಿದ್ದಾರೆ. ಕುರುಬ ಸಮಾಜವನ್ನ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂಬುವುದು ಈ ಪಾದಯಾತ್ರೆಯ ಧ್ಯೇಯವಾಕ್ಯ.

ಈ ಕಾರಣಕ್ಕಾಗಿಯೇ ಪ್ರತಿನಿತ್ಯ 7 ಸಾವಿರ ಹೆಜ್ಜೆ ಹಾಕಿ ದೇಹವನ್ನು ಪಾದಯಾತ್ರೆಯ ದಿನಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತಿದ್ದು, ಪಾದಯಾತ್ರೆ ಹತ್ತಿರಕ್ಕೆ ಬರುತ್ತಿದ್ದಂತೆ ದಿನಕ್ಕೆ 28 ಸಾವಿರ ಹೆಜ್ಜೆ ಹಾಕುವುದನ್ನು ರೂಢಿಸಿಕೊಳ್ಳುವೆ. ನನ್ನ ಜೊತೆ ಪಾದಯಾತ್ರೆಗೆ ಬರುವ ಭಕ್ತರು ಇದನ್ನ ರೂಢಿಸಿಕೊಳ್ಳಿ ಆಗ ನಿಮ್ಮ ಆರೋಗ್ಯದ ಮೇಲೆ ಪರಿಣಾಮವಾಗುವುದಿಲ್ಲ, ಜನವರಿ 15 ಮಕರ ಸಂಕ್ರಾಂತಿ ಅಂದು ಭಾರತದಲ್ಲಿ ಸೂರ್ಯ ತನ್ನ ದಿಕ್ಕು ಬದಲಾಯಿಸುತ್ತಾನೆ. ಇದೇ ಕಾರಣಕ್ಕೆ ಅಂದು ಪಾದಯಾತ್ರೆ ಆರಂಭಿಸಿ ಕುರುಬರ ದಿಕ್ಕು ಬದಲಿಸುವ ನಿರ್ಧಾರಕ್ಕೆ ಬಂದಿರುವೆ. ಇದಕ್ಕಾಗಿ ಬೆಳಿಗ್ಗೆ ಸಂಜೆ ಬೇವರಿಳಿಸುತ್ತಿರುವೆ ಎಂದು ಕನಕ ಗುರು ಸ್ವಾಮೀಜಿ ಹೇಳಿದರು.
-ಬಸವರಾಜ್ ದೊಡ್ಮನಿ

Published On - 3:57 pm, Thu, 3 December 20