ಕೊಡಗು: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಕೃಷಿ ಮಾಡಿ ಉತ್ತಮ ಜೀವನ ನಡೆಸುತ್ತಿರುವ ರೈತರಿದ್ದಾರೆ. ತನ್ನ ಹೆಂಡತಿ, ಮಕ್ಕಳನ್ನ ನೋಡಿಕೊಳ್ಳಲಾರದವನು ಹೇಡಿ. ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಈಸಬೇಕು, ಇದ್ದು ಜಯಿಸಬೇಕು. ಏನೇ ಸಮಸ್ಯೆ ಇದ್ದರೂ ಇಲ್ಲೇ ಇದ್ದು ಜಯಿಸಬೇಕು. ಹೇಡಿ ಕೆಲಸಕ್ಕೆ ರೈತರು ಮುಂದಾಗಬಾರದು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಅನ್ನೋದಕ್ಕೆ ಸ್ವಾವಲಂಬಿ ರೈತರು ಮಾದರಿ ಎಂದು ಪೊನ್ನಂಪೇಟೆಯಲ್ಲಿ ಬಿ.ಸಿ.ಪಾಟೀಲ್ ಹೇಳಿದರು. ಬಿದಿರು ಸಂಪನ್ಮೂಲ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
‘ಹೊಸ ವರ್ಷಾಚರಣೆ ನಮ್ಮ ಸಂಸ್ಕೃತಿ ಅಲ್ಲ; ಡಿ. 31-ಜ.1ರಂದು ಜನಜಂಗುಳಿ ಸೇರೋದು ನಿಷೇಧಿಸ್ತೇವೆ’