Train Derails: ಬಂಗಾರಪೇಟೆ ಬಳಿ ಹಳಿ ತಪ್ಪಿದ ಚೆನ್ನೈ-ಬೆಂಗಳೂರು ಎಕ್ಸ್​ಪ್ರೆಸ್​ ರೈಲು

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್​ ರೈಲು ಸೋಮವಾರ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Train Derails: ಬಂಗಾರಪೇಟೆ ಬಳಿ ಹಳಿ ತಪ್ಪಿದ ಚೆನ್ನೈ-ಬೆಂಗಳೂರು ಎಕ್ಸ್​ಪ್ರೆಸ್​ ರೈಲು
ರೈಲು
Image Credit source: Times Now

Updated on: May 15, 2023 | 3:27 PM

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್​ ರೈಲು ಸೋಮವಾರ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್‌ ರೈಲು ಬಂಗಾರಪೇಟೆ ಬಳಿ ಬೆಳಿಗ್ಗೆ 11.29 ರ ಸುಮಾರಿಗೆ ಹಳಿ ತಪ್ಪಿತ್ತು. ಕೋಲಾರದ ಬಂಗಾರ ಪೇಟೆಯಿಂದ 20 ಕಿ.ಮೀ ದೂರದಲ್ಲಿ ಘಟನೆ ನಡೆದಿದೆ.

ನೈಋತ್ಯ ರೈಲ್ವೆಯ (SWR) ಪತ್ರಿಕಾ ಹೇಳಿಕೆಯ ಪ್ರಕಾರ, ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ದುರಸ್ತಿ ಕಾರ್ಯ ನಡೆಯುತ್ತಿದೆ.
ರೈಲು 22625 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಬೆಂಗಳೂರು ವಿಭಾಗದ ಬಿಸನಟ್ಟಂ ಬಳಿ, ಜೋಲಾರ್‌ಪೆಟ್ಟೈ ಜೂನಿಂದ 50 ಕಿಮೀ ದೂರದಲ್ಲಿ ಹಳಿತಪ್ಪಿತು.

ಮತ್ತಷ್ಟು ಓದಿ: ಚಿಕ್ಕಬಳ್ಳಾಪುದಲ್ಲಿ ರೈಲ್ವೆ ಹಳಿಗೆ ಬಿದ್ದವನನ್ನು ರಕ್ಷಿಸಲು ಹೋಗಿ ವ್ಯಕ್ತಿ ಸಾವು

ಚೆನ್ನೈನಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಸ್ಥಳಕ್ಕೆ ಧಾವಿಸುತ್ತಿದ್ದು, ಜೋಲಾರ್‌ಪೆಟ್ಟೈ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತಲುಪಿದ್ದಾರೆ ಎಂದು ಚೆನ್ನೈ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಎ ಏಳುಮಲೈ ಹೇಳಿದರು.

ಪ್ರಯಾಣಿಕರಿಗೆ ಆಹಾರ ಮತ್ತು ಸಾರಿಗೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡುವುದರ ಮೂಲಕ ಕಾಳಜಿ ವಹಿಸಲಾಗುತ್ತಿದೆ. ಅಪಘಾತ ಪರಿಹಾರ ರೈಲುಗಳು ಮತ್ತು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸುವುದರೊಂದಿಗೆ ಪುನಃಸ್ಥಾಪನೆ ಕಾರ್ಯಗಳು ಸಹ ಭರದಿಂದ ಸಾಗುತ್ತಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Mon, 15 May 23