ಚಿಕ್ಕಬಳ್ಳಾಪುದಲ್ಲಿ ರೈಲ್ವೆ ಹಳಿಗೆ ಬಿದ್ದವನನ್ನು ರಕ್ಷಿಸಲು ಹೋಗಿ ವ್ಯಕ್ತಿ ಸಾವು
ಸಾದಿಕ್ನನ್ನು ರಕ್ಷಿಸುವ ವೇಳೆಗೆ ರೈಲಿಗೆ ಸಿಲುಕಿ ನಾರಾಯಣ ದುರ್ಮರಣ ಹೊಂದಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಸಾದಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕಬಳ್ಳಾಪುರ: ರೈಲ್ವೆ (Railway) ಹಳಿಗೆ ಬಿದ್ದವನನ್ನು ರಕ್ಷಿಸಲು ಹೋಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ರೈಲ್ವೆ ನಿಲ್ದಾಣದಲ್ಲಿ (Railway Station) ಸಂಭವಿಸಿದೆ. ಕನಕಪುರ ಮೂಲದ ನಾರಾಯಣ(54) ಮೃತಪಟ್ಟವರು. ರೈಲ್ವೆ ಹಳಿ ಮೇಲೆ ಮಲಗಿದ್ದ ಸಾದಿಕ್ನ ರಕ್ಷಿಸಲು ನಾರಾಯಣ ಮುಂದಾಗಿದ್ದ. ಸಾದಿಕ್ನನ್ನು ರಕ್ಷಿಸುವ ವೇಳೆಗೆ ರೈಲಿಗೆ ಸಿಲುಕಿ ನಾರಾಯಣ ದುರ್ಮರಣ ಹೊಂದಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಸಾದಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಸಾದಿಕ್ನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಲ್ಲಿ ರೌಡಿ, ಬೆಂಗಳೂರಲ್ಲಿ ಡ್ರಗ್ ಪೆಡ್ಲರ್: ಡ್ರಗ್ ಪೆಡ್ಲರ್ನ ಹೆಬ್ಬಾಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹಸನ್ ಸಾಧಿಕ್, ಕಲ್ಕಾನ್ ಬಂಧಿತ ಆರೋಪಿಗಳು. ಹಸನ್ ವಿರುದ್ಧ ಮಂಗಳೂರಿನ ವಿವಿಧ ಠಾಣೆಯಲ್ಲಿ 17 ಪ್ರಕರಣಗಳಿವೆ. ಸುಲಿಗೆ, ದರೋಡೆ, ಕೊಲೆಯತ್ನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ. ರೌಡಿಸಂ ಬಿಟ್ಟು ಸುಲಭವಾಗಿ ಹಣ ಮಾಡೋಕೆ ಡ್ರಗ್ ಪೆಡ್ಲರ್ ಹಾದಿ ಹಿಡಿದಿದ್ದ. ಬಂಧಿತರಿಂದ ಪೊಲೀಸರು 23ಗ್ರಾಂ ಎಂಡಿಎಂಎ ಡ್ರಗ್ಸ್ ಹಾಗೂ ಬೈಕ್ನ ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿ ನೇಣೀಗೆ ಶರಣು: ವಿಜಯನಗರ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದರಂಗಾರೆಡ್ಡಿ ಮೃತ ವ್ಯಕ್ತಿ. ರಂಗಾರೆಡ್ಡಿ ಕಳೆದ ವರ್ಷ ಕೊವಿಡ್ನಿಂದ ಪತ್ನಿ ಕಳೆದುಕೊಂಡಿದ್ದರು. ಹೆಂಡತಿಯ ಸಾವಿನಿಂದ ಮಾನಸಿಕವಾಗಿ ಖಿನ್ನತೆಗೊಳಾಗಾಗಿದ್ದರು. ಹೊಸಪೇಟೆಯ ಬಸ್ ನಿಲ್ದಾಣದ ಬಳಿಯ ಲಾಡ್ಜ್ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ
ಈಗಾಗಲೇ FSSAI ಇರುವಾಗ ಹಲಾಲ್ನ ಪ್ರತ್ಯೇಕ ಅಗತ್ಯವಿಲ್ಲ; 2020ರಲ್ಲೇ ಕೇಂದ್ರಕ್ಕೆ ಪತ್ರ ಬರೆದಿದ್ದ ಹಿಂದೂ ಮುಖಂಡ
Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?
Published On - 1:08 pm, Wed, 30 March 22