AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹಿತ ಮಹಿಳೆ ಜೊತೆ ಯುವಕನ ಲವ್ವಿಡವ್ವಿ; ಬೇರೆ ಯುವತಿ ಜೊತೆ ಎಂಗೇಜ್ಮೆಂಟ್ ಆದ ಮೂರೇ ದಿನಕ್ಕೆ ರಕ್ತದಲ್ಲಿ ಪತ್ರ ಬರೆದು ಯುವಕ ಆತ್ಮಹತ್ಯೆ

ಯುವಕ ಆತ್ಮಹತ್ಯೆಗೂ ಮುನ್ನ ರಕ್ತದಲ್ಲಿ ಪ್ರೇಯಸಿಗೆ ಪತ್ರ ಬರೆದಿದ್ದು ಪ್ರೇಮ ಪತ್ರದುದ್ದಕ್ಕೂ ಸಾರಿ.. ಐ ಲವ್ ಯು ಸಾಲುಗಳೇ ಹೆಚ್ಚಾಗಿವೆ. ಕೆನ್ನೆ ಬಾಸುಂಡೆ ಬರುವಂತೆ ಬಾರಿಸಿಕೊಳ್ಳುತ್ತಲೇ ಪಶ್ಚಾತ್ತಾಪ ಪಡುತ್ತಾ ದುರಂತ ಅಂತ್ಯ ಕಂಡಿದ್ದಾನೆ.

ವಿವಾಹಿತ ಮಹಿಳೆ ಜೊತೆ ಯುವಕನ ಲವ್ವಿಡವ್ವಿ; ಬೇರೆ ಯುವತಿ ಜೊತೆ ಎಂಗೇಜ್ಮೆಂಟ್ ಆದ ಮೂರೇ ದಿನಕ್ಕೆ ರಕ್ತದಲ್ಲಿ ಪತ್ರ ಬರೆದು ಯುವಕ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Mar 29, 2022 | 10:35 PM

Share

ಚಿಕ್ಕಬಳ್ಳಾಪುರ: ಎಂಗೇಜ್ಮೆಂಟ್(Engagement) ಆದ ಮೂರೇ ದಿನಕ್ಕೆ ಯುವಕ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿಯಲ್ಲಿ ನಡೆದಿದೆ. ಯುವಕ ಆತ್ಮಹತ್ಯೆಗೂ ಮುನ್ನ ರಕ್ತದಲ್ಲಿ ಪ್ರೇಯಸಿಗೆ ಪತ್ರ ಬರೆದಿದ್ದು ಪ್ರೇಮ ಪತ್ರದುದ್ದಕ್ಕೂ ಸಾರಿ.. ಐ ಲವ್ ಯು ಸಾಲುಗಳೇ ಹೆಚ್ಚಾಗಿವೆ. ಕೆನ್ನೆ ಬಾಸುಂಡೆ ಬರುವಂತೆ ಬಾರಿಸಿಕೊಳ್ಳುತ್ತಲೇ ಪಶ್ಚಾತ್ತಾಪ ಪಡುತ್ತಾ ದುರಂತ ಅಂತ್ಯ ಕಂಡಿದ್ದಾನೆ.

ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿ ನಿವಾಸಿ ಮುನಿಕೃಷ್ಣ ಎಂಬ ಯುವಕ ವಿಷ ಕುಡಿದು ಸೂಸೈಡ್ ಮಾಡ್ಕೊಂಡಿದ್ದಾನೆ. ಬಿಎಸ್ಸಿ ಪದವೀಧರನಾಗಿದ್ದ ಮುನಿಕೃಷ್ಣ, ಚಿಂತಾಮಣಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಮೂರು ದಿನಗಳ ಹಿಂದೆ ಮುನಿಕೃಷ್ಣಗೆ ಗುಂಡಿಬಂಡೆ ತಾಲೂಕಿನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಲಾಗಿತ್ತು. ಆದ್ರೆ, ಎಂಗೇಜ್ಮೆಂಟ್ ಆದ ಮೂರೇ ದಿನಕ್ಕೆ ಮುನಿಕೃಷ್ಣ ಸಾವಿನ ಮನೆ ಸೇರಿದ್ದಾನೆ. ರಕ್ತದಲ್ಲಿ ಪ್ರೇಮ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿವಾಹಿತ ಮಹಿಳೆಯ ಬ್ಲ್ಯಾಕ್ಮೇಲ್? ಯುವಕ ಸೂಸೈಡ್? ಮುನಿಕೃಷ್ಣ ಮೃತಪಟ್ಟ ನಂತ್ರ ಆತನ ಮೊಬೈಲ್ ನೋಡಿದಾಗ ಬೆಚ್ಚಿ ಬೀಳುವ ರಹಸ್ಯ ಬಯಲಾಗಿದೆ. ವಿವಾಹಿತ ಮಹಿಳೆಯೊಬ್ಬಳು ಮುನಿಕೃಷ್ಣನ ಹಿಂದೆ ಬಿದ್ದಿದ್ದು ಗೊತ್ತಾಗಿದೆ. ಸಾವಿಗೂ ಮುನ್ನ ಮುನಿಕೃಷ್ಣ ರಕ್ತದಲ್ಲಿ ವಿವಾಹಿತ ಮಹಿಳೆಗೆ ಸಾರಿ ಐ ಲವ್ ಯೂ ಅಂತ ಪತ್ರ ಬರೆದಿದ್ದಾನೆ. ಅಲ್ದೆ, ಮಹಿಳೆಯ ಜೊತೆ ಚಾಟಿಂಗ್ ಮಾಡಿದ್ದು, ವಿಡಿಯೋ ಕಾಲ್ ಮಾಡಿದ್ದು, ಮೆಸೇಜ್ ಮಾಡಿದ್ದು ಬಯಲಾಗಿದೆ. ಈಕೆ ತಮ್ಮ ಸಂಬಂಧಿಯೇ ಆಗಿದ್ದು, ಈಗ ಬೇರೊಂದು ಮದುವೆಗೆ ಮುಂದಾಗಿದ್ದಕ್ಕೆ ಬ್ಲ್ಯಾಕ್ಮೇಲೆ ಮಾಡಿದ್ದಾಳೆ. ಈ ಸಾವಿಗೆ ನ್ಯಾಯ ಕೊಡಿಸಬೇಕೆಂದು ಮುನಿಕೃಷ್ಣ ತಂದೆ ದೂರು ನೀಡಿದ್ದಾರೆ.

ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಆತ್ಮಹತ್ಯೆಗೂ ಮೊದಲು ಏನೆಲ್ಲಾ ಆಯ್ತು? ಮಹಿಳೆ ಮತ್ತು ಮುನಿಕೃಷ್ಣ ಮಧ್ಯೆ ನಡೆದ ಚಾಟಿಂಗ್ ಏನು? ಮಹಿಳೆ ಬ್ಲ್ಯಾಕ್ಮೇಲ್ ಮಾಡಿದ್ದು ನಿಜಾನಾ ಅನ್ನೋ ಬಗ್ಗೆ ತನಿಖೆ ನಡೆಸ್ತಿದ್ದಾರೆ.

ವರದಿ: ಭೀಮಪ್ಪ, ಟಿವಿ9 ಚಿಕ್ಕಬಳ್ಳಾಪುರ

ಇದನ್ನೂ ಓದಿ: ನಮ್ಮ ಔದಾರ್ಯದಿಂದಾಗಿ ಇದುವರೆಗೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ನಡೆಯಿತು, ಇನ್ನು ಮುಂದೆ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

ಹಲಾಲ್ ಕಟ್ ಅಂತ ಬೋರ್ಡ್ ಹಾಕಿರುವ ಮುಸಲ್ಮಾನರ ಮಾಂಸದ ಅಂಗಡಿಗಳಿಗೆ ಹೋಗುವುದನ್ನು ನಿಲ್ಲಿಸಿ: ಕಾಳಿ ಸ್ವಾಮಿ