AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?

MS Dhoni | CSK: ನಾಯಕತ್ವದಿಂದ ಕೆಳಗಿಳಿಯುವ ಧೋನಿಯ ನಿರ್ಧಾರದ ನಂತರದ ಮಾತುಕತೆಯ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೆ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

Devon Conway: ‘ನಿಮ್ಮ ನಾಯಕತ್ವದಲ್ಲಿ ನಾನು ಆಡಬೇಕು’; ಕಿವೀಸ್ ಆಟಗಾರನ ಕೋರಿಕೆಗೆ ಧೋನಿ ಉತ್ತರ ಏನಿತ್ತು?
ಡೆವೊನ್ ಕಾನ್ವೆ, ಎಂ.ಎಸ್ ಧೋನಿ
TV9 Web
| Updated By: shivaprasad.hs|

Updated on: Mar 30, 2022 | 12:51 PM

Share

ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಪ್ರಾರಂಭವಾಗುವ ಮೊದಲು ಅಚ್ಚರಿಯ ಬೆಳವಣಿಗೆಗಳಲ್ಲಿ ಸೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದಿಂದ ಕೆಳಗಿಳಿಯುವುದನ್ನು ಘೋಷಿಸಿದ್ದರು. ಅವರ ನಂತರ ರವೀಂದ್ರ ಜಡೇಜಾ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡರು. ನಾಯಕತ್ವದಿಂದ ಕೆಳಗಿಳಿಯುವ ಧೋನಿಯ ನಿರ್ಧಾರದ ನಂತರದ ಮಾತುಕತೆಯ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೆ (Devon Conway) ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸಿಎಸ್​ಕೆ ಟ್ವಿಟರ್​ ಖಾತೆಯಲ್ಲಿ ಮಂಗಳವಾರ ಕಾನ್ವೇ ಮಾತನಾಡಿದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಧೋನಿ ಬಗ್ಗೆ ಹಾಗೂ ರವೀಂದ್ರ ಜಡೇಜ ಬಗ್ಗೆ ಅವರು ಮಾತನಾಡಿದ್ದಾರೆ.

ಡೆವೊನ್ ಕಾನ್ವೆ ತಮ್ಮ ಮಾತಿನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಬೇಕು ಎಂಬ ಬಯಕೆ ಇದ್ದಿದ್ದನ್ನು ಹೇಳಿಕೊಂಡಿದ್ದಾರೆ. ಇದನ್ನು ಸ್ವತಃ ಧೋನಿಯ ಬಳಿಯೇ ಕಾನ್ವೆ ಹೇಳಿಕೊಂಡಿದ್ದರಂತೆ. ‘‘ನನಗೆ ಧೋನಿ ನಾಯಕತ್ವದಲ್ಲಿ ಆಡಬೇಕು ಎಂಬ ಆಸೆ ಇತ್ತು. ಇದನ್ನು ಅವರ ಬಳಿ ಹೇಳುತ್ತಾ, ನೀವು ಇದೊಂದು ಸೀಸನ್​ನಲ್ಲಿ ನಾಯಕನಾಗಿ ಆಡಬಹುದೇ? ಕಾರಣ, ನಿಮ್ಮ ನಾಯಕತ್ವದ ಅಡಿಯಲ್ಲಿ ನಾನು ಆಡಬೇಕು ಎನ್ನುವ ಆಸೆ ಇದೆ’’ ಎಂದು ಕೋರಿಕೊಂಡಿದ್ದರು ಡೆವೊನ್ ಕಾನ್ವೆ.

ಕಾನ್ವೆ ಪ್ರಶ್ನೆಗೆ ಉತ್ತರಿಸಿದ್ದ ಎಂಎಸ್ ಧೋನಿ, ‘‘ಇಲ್ಲ, ಅದು ಸಾಧ್ಯವಿಲ್ಲ. ಆದರೆ ನಾನು ನಿಮ್ಮ ಸುತ್ತಲೇ ಇರುತ್ತೇನೆ’’ ಎಂದು ಹೇಳಿದ್ದರು. ಕೆಲವು ದಿನಗಳ ಹಿಂದೆ ಜಡೇಜಾ ಹಾಗೂ ಧೋನಿ ಜತೆಗೆ ಕುಳಿತು ಊಟ ಮಾಡಿದ್ದೆ ಎಂದು ಹೇಳಿರುವ ಕಾನ್ವೆ, ಆ ಸಂದರ್ಭದಲ್ಲಿ ಅವರೀರ್ವರನ್ನು ಮತ್ತಷ್ಟು ತಿಳಿಯಲು ಸಾಧ್ಯವಾಯಿತು ಎಂದಿದ್ದಾರೆ.

‘‘ಅವರೀರ್ವರೂ ವಿನಮ್ರರು ಮತ್ತು ಡೌನ್​ ಟು ಅರ್ಥ್’’ ಎಂದಿದ್ದಾರೆ ಡೆವೊನ್ ಕಾನ್ವೆ. ಐಪಿಎಲ್​ ಇತಿಹಾಸದಲ್ಲಿಯೇ ಧೋನಿ ಅದ್ಭುತ ಆಟಗಾರ ಎಂದೂ ಕಾನ್ವೆ ಬಣ್ಣಿಸಿದ್ದಾರೆ.

ಡೆವೊನ್ ಕಾನ್ವೆ ಮಾತಿನ ವಿಡಿಯೋ ಇಲ್ಲಿದೆ:

30 ವರ್ಷದ ಕಿವೀಸ್ ಆಟಗಾರ ಡೆವೊನ್ ಕಾನ್ವೆ ಕೋಲ್ಕತ್ತ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದರು. ಆದರೆ ಅವರಿಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕಳೆದ ಬಾರಿಯ ಆರೆಂಜ್ ಕ್ಯಾಪ್ ವಿಜೇತ ರುತುರಾಜ್ ಗಾಯಕ್ವಾಡ್ ಜತೆ ಇನ್ನಿಂಗ್ಸ್ ಆರಂಭಿಸಿದ ಕಾನ್ವೆ 8 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು. ಹರಾಜಿನಲ್ಲಿ ಡೆವೊನ್ ಕಾನ್ವೆ ಅವರನ್ನು ಮೂಲಬೆಲೆ 1 ಕೋಟಿ ರೂ ನೀಡಿ ಸಿಎಸ್​ಕೆ ಖರೀದಿಸಿತ್ತು. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಡೆವೊನ್ ಕಾನ್ವೆ ಹೊಂದಿದ್ದಾರೆ.

ಸಿಎಸ್​ಕೆ ಮೊದಲ ಪಂದ್ಯ ಧೋನಿ ಕಮ್​ಬ್ಯಾಕ್​ ಇನ್ನಿಂಗ್ಸ್​ಗೆ ಸಾಕ್ಷಿಯಾಗಿತ್ತು. ಸಂಕಷ್ಟದಲ್ಲಿದ್ದ ತಂಡವನ್ನು ಆಧರಿಸಿದ್ದ ಧೋನಿ, 38 ಎಸೆತಗಳಲ್ಲಿ 50 ರನ್​ಗಳಿಸಿದ್ದರು. ಆದರೆ ಚೆನ್ನೈ ತಂಡವು ಆ ಪಂದ್ಯದಲ್ಲಿ ಆರು ವಿಕೆಟ್​ಗಳ ಸೋಲನುಭವಿಸಿತ್ತು. ಚೆನ್ನೈ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಜತೆ ಗುರುವಾರ (ಮಾ.31) ಆಡಲಿದೆ.

ಇದನ್ನೂ ಓದಿ:

Imran Khan: ನಿವೃತ್ತಿಯಿಂದ ಮರಳಿ ವಿಶ್ವಕಪ್ ಗೆಲುವಿನವರೆಗೆ; ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿಯ ಕ್ರಿಕೆಟ್ ಪಯಣದ ಮೆಲುಕು

IPL 2022: ರಾಜಸ್ಥಾನ್ ರಾಯಲ್ಸ್ ಎದುರು ಹೀನಾಯ ಪ್ರದರ್ಶನ; ಬೇಡದ ದಾಖಲೆ ಬರೆದ ಸನ್​ರೈಸರ್ಸ್​​ ಹೈದರಾಬಾದ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ