ಇಂಡಿಯನ್ ಪ್ರೀಮಿಯರ್ ಲೀಗ್ 2022 ಸೀಸನ್ (IPL 2022) ಪ್ರಾರಂಭವಾಗಿದ್ದು ಅದರೊಂದಿಗೆ ಪಂದ್ಯಾವಳಿಯ ಗಾತ್ರವೂ ಹೆಚ್ಚಾಗಿದೆ. 10 ವರ್ಷಗಳ ಬಳಿಕ ಮತ್ತೆ 10 ತಂಡಗಳು ಐಪಿಎಲ್‌ನಲ್ಲಿ ಆಡುತ್ತಿವೆ. ಹೀಗಾಗಿ ಪ್ರಸಕ್ತ ಋತುವಿನ ನಂತರ, ಐಪಿಎಲ್ ಪ್ರಸಾರದ ಹಕ್ಕಿನ ಒಪ್ಪಂದವು ಅಂತ್ಯಗೊಳ್ಳಲಿದ್ದು ಹೊಸ ಒಪ್ಪಂದವು ಮುಂದಿನ ಆವೃತ್ತಿಯಿಂದ ಪ್ರಾರಂಭವಾಗಲಿದೆ. ಸುದೀರ್ಘ ಕಾಯುವಿಕೆಯ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಂತಿಮವಾಗಿ ಟೆಂಡರ್ ಕರೆದಿದೆ. ಬಿಸಿಸಿಐ, ಮಾರ್ಚ್ 29, ಮಂಗಳವಾರದಂದು 2023 ರಿಂದ 2027 ರ ಸೀಸನ್‌ಗಾಗಿ ಐಪಿಎಲ್ ಪ್ರಸಾರದ ಹಕ್ಕಿನ ಒಪ್ಪಂದಕ್ಕಾಗಿ ಟೆಂಡರ್‌ಗಳನ್ನು ಆಹ್ವಾನಿಸಿದೆ. ಆಸಕ್ತ ಕಂಪನಿಗಳು ಅರ್ಜಿ ಸಲ್ಲಿಸಲು ಮೇ 10, 2022 ರವರೆಗೆ ಅವಕಾಶ ನೀಡಲಾಗಿದೆ.
ಬಿಸಿಸಿಐ ಹೇಳಿಕೆಯ ಪ್ರಕಾರ, ಹರಾಜು ನಿಯಮಗಳನ್ನು ತಿಳಿಯಲು ITT ದಾಖಲೆಗಳನ್ನು ಖರೀದಿಸಬೇಕು. ಆಸಕ್ತರು ITT ದಾಖಲೆಗಳನ್ನು ಖರೀದಿಸಲು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ ಈ ಮೊತ್ತವನ್ನು ಹಿಂತಿರುಗಿಸಲಾಗುವುದಿಲ್ಲ. ಇದರಡ್ಡಿಯಲ್ಲಿ ಐಟಿಟಿ ಖರೀದಿಸಲು ಒಬ್ಬರು 25 ಲಕ್ಷ (4.50 ಲಕ್ಷ ಜಿಎಸ್‌ಟಿ ಹೆಚ್ಚುವರಿ) ಪಾವತಿಸಬೇಕು. ಅರ್ಜಿದಾರರು ಐಟಿಟಿ ಖರೀದಿಸಲು ಮೇ 10 ರವರೆಗೆ ಅವಕಾಶ ನೀಡಲಾಗಿದೆ. ITT ಖರೀದಿಗಾಗಿ ಮಾಡಿದ ಪಾವತಿ ಸೇರಿದಂತೆ ವಿವರಗಳನ್ನು iplmediarights2020@bcci.tv ಗೆ ಇಮೇಲ್ ಮಾಡಲು ಆಸಕ್ತರನ್ನು ವಿನಂತಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಈ ಬಾರಿ ಇ-ಹರಾಜು ಅದೇ ಸಮಯದಲ್ಲಿ, ಮಂಡಳಿಯ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಹಕ್ಕುಗಳ ಬಿಡುಗಡೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ, ಬಿಸಿಸಿಐ ಹೊಸ ಬಿಡ್ಡರ್‌ಗಳಿಗಾಗಿ ಇ-ಹರಾಜು ವ್ಯವಸ್ಥೆ ಮಾಡಲಿದ್ದು, ಈ ಪ್ರಕ್ರಿಯೆ ಜೂನ್ 12 ರಿಂದ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಶಾ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹೊಸ ಪ್ರಸಾರದ ಹಕ್ಕುಗಳಿಂದ ಹೆಚ್ಚಿನ ಆದಾಯದೊಂದಿಗೆ ಐಪಿಎಲ್‌ನ ಪ್ರಾಮುಖ್ಯತೆ ಹೆಚ್ಚಾಗುತ್ತದೆ ಎಂದು ಜಯ್ ಶಾ ಹೇಳಿದ್ದಾರೆ. “ಈ ಪ್ರಕ್ರಿಯೆಯು ಗರಿಷ್ಠ ಆದಾಯ ಮಾತ್ರವಲ್ಲದೆ ಗರಿಷ್ಠ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಇದು ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.
ಹೆಚ್ಚು ತಂಡಗಳು, ಹೆಚ್ಚು ಪಂದ್ಯಗಳು, ಹೆಚ್ಚು ಆದಾಯ ಭಾರತೀಯ ಮಂಡಳಿಯು ಐಪಿಎಲ್ನಿಂದ ಸುಮಾರು ರೂ. 50,000 ಕೋಟಿ ಗಳಿಸುವ ನಿರೀಕ್ಷೆಯಿದೆ. ಗುಜರಾತ್ ಮತ್ತು ಲಕ್ನೋ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ, ಐಪಿಎಲ್ ಪಂದ್ಯಗಳ ಸಂಖ್ಯೆ 60 ರಿಂದ 74 ಕ್ಕೆ ಏರಿದೆ. ಇದು ಹರಾಜಿನಲ್ಲಿ ಪ್ರಬಲ ಬಿಡ್ಡಿಂಗ್ ಸ್ಪರ್ಧೆಗೆ ಕಾರಣವಾಗುವ ಸಾಧ್ಯತೆಯಿದೆ. ಏಕೆಂದರೆ ಈಗ ಈ ವಿಭಾಗದಲ್ಲಿ ಜಿ-ಸೋನಿ ಮತ್ತು ರಿಲಯನ್ಸ್ ವಯಾಕಾಮ್ 18 ಸೇರ್ಪಡೆಗೊಂಡಿವೆ. ಅಮೆಜಾನ್ ಪ್ರೈಮ್, ಮೆಟಾ ಮತ್ತು ಯೂಟ್ಯೂಬ್‌ನಿಂದ ‘ಡಿಜಿಟಲ್ ಸ್ಪೇಸ್’ಗಾಗಿ ಆಕ್ರಮಣಕಾರಿ ಬಿಡ್‌ಗಳನ್ನು ಬಿಸಿಸಿಐ ನಿರೀಕ್ಷಿಸುತ್ತಿದೆ. ಪ್ರಸ್ತುತ, ಭಾರತದಲ್ಲಿ IPL ಪ್ರಸಾರದ ಹಕ್ಕು ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸ್ಟಾರ್ ನೆಟ್‌ವರ್ಕ್‌ನ ಭಾಗವಾಗಿರುವ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಕೈಯಲ್ಲಿದೆ.
ಇದನ್ನೂ ಓದಿ:Women’s IPL in 2023: 6 ತಂಡಗಳ ರಚನೆ! ಮಹಿಳಾ ಐಪಿಎಲ್ ಕುರಿತು ಬಿಗ್ ಅಪ್ಡೇಟ್ ನೀಡಿದ ಬಿಸಿಸಿಐ