Women’s IPL in 2023: 6 ತಂಡಗಳ ರಚನೆ! ಮಹಿಳಾ ಐಪಿಎಲ್ ಕುರಿತು ಬಿಗ್​ ಅಪ್​ಡೇಟ್ ನೀಡಿದ ಬಿಸಿಸಿಐ

Women's IPL in 2023: ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಈ 6 ತಂಡಗಳ ಆಯ್ಕೆಯ ಮೊದಲ ಪ್ರಸ್ತಾಪವನ್ನು ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಗಳಿಗೆ ಮಾತ್ರ ನೀಡಲಾಗುವುದು ಎಂದು ಮಂಡಳಿ ನಿರ್ಧರಿಸಿದೆ.

Women's IPL in 2023: 6 ತಂಡಗಳ ರಚನೆ! ಮಹಿಳಾ ಐಪಿಎಲ್ ಕುರಿತು ಬಿಗ್​ ಅಪ್​ಡೇಟ್ ನೀಡಿದ ಬಿಸಿಸಿಐ
ಮಹಿಳಾ ಆಟಗಾರ್ತಿಯರು
Follow us
TV9 Web
| Updated By: ಪೃಥ್ವಿಶಂಕರ

Updated on: Mar 25, 2022 | 8:55 PM

ಮಹಿಳಾ ಐಪಿಎಲ್ (Women’s IPL) ಕುರಿತ ಬಹುದಿನಗಳ ಬೇಡಿಕೆಗೆ ಕೊನೆಗೂ ಬಿಸಿಸಿಐ ಮನ್ನಣೆ ನೀಡಿದ್ದು, ಮುಂದಿನ ವರ್ಷದಿಂದ 6 ತಂಡಗಳ ಟೂರ್ನಿ ನಡೆಸಲು ಮುಂದಾಗಿದೆ. ಶುಕ್ರವಾರ, ಮಾರ್ಚ್ 25 ರಂದು ಮುಂಬೈನಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ, ಐಪಿಎಲ್ 2022 ರ ಸೀಸನ್ ಪ್ರಾರಂಭವಾಗುವ ಒಂದು ದಿನದ ಮೊದಲು, ಬಿಸಿಸಿಐ ಅಧಿಕಾರಿಗಳು ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸುವ ಬಗ್ಗೆ ಚರ್ಚಿಸಿದರು. ಈ ರೀತಿಯಾಗಿ ಬಿಸಿಸಿಐ 6 ತಂಡಗಳೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಲು ಪ್ರಸ್ತಾಪಿಸಿದ್ದು, 2023 ರಲ್ಲಿ ಅದನ್ನು ಪ್ರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ.

ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಈ 6 ತಂಡಗಳ ಆಯ್ಕೆಯ ಮೊದಲ ಪ್ರಸ್ತಾಪವನ್ನು ಅಸ್ತಿತ್ವದಲ್ಲಿರುವ ಐಪಿಎಲ್ ಫ್ರಾಂಚೈಸಿಗಳಿಗೆ ಮಾತ್ರ ನೀಡಲಾಗುವುದು ಎಂದು ಮಂಡಳಿ ನಿರ್ಧರಿಸಿದೆ. ಬಿಸಿಸಿಐ ಹೊಸ ಸೀಸನ್‌ನಿಂದ ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆಯನ್ನು 8 ರಿಂದ 10 ಕ್ಕೆ ಹೆಚ್ಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಫ್ರಾಂಚೈಸಿಗಳ ಮುಂದೆ ಮಹಿಳಾ ತಂಡ ರಚಿಸಲು ಮಂಡಳಿ ಮುಂದಾಗಿದೆ. ಇದು ಸಂಪೂರ್ಣವಾಗಿ ಯಶಸ್ವಿಯಾಗದಿದ್ದರೆ, ಮಂಡಳಿಯು ಫ್ರಾಂಚೈಸಿಗಳಿಗೆ ಹೊಸ ಅರ್ಜಿಗಳನ್ನು ಆಹ್ವಾನಿಸುತ್ತದೆ.

ಮಹಿಳೆಯರ T20 ಚಾಲೆಂಜ್ ಮೇ ತಿಂಗಳಲ್ಲಿ ಮರಳಲಿದೆ ಇದರೊಂದಿಗೆ ಮಹಿಳಾ ಟಿ20 ಚಾಲೆಂಜ್ ಟೂರ್ನಿಯು ಈ ವರ್ಷ ಮತ್ತೆ ಮರಳಲಿದೆ ಎಂದು ಮಂಡಳಿ ನಿರ್ಧರಿಸಿದೆ. ಈ ಮೂರು ತಂಡಗಳ ಪಂದ್ಯಾವಳಿಯು 2019 ರಲ್ಲಿ ಪ್ರಾರಂಭವಾಯಿತು, ಇದನ್ನು ಐಪಿಎಲ್‌ನ ಪ್ಲೇಆಫ್ ಪಂದ್ಯಗಳ ಸಮಯದಲ್ಲಿ ಆಡಲಾಯಿತು. ಕೇವಲ 4 ಪಂದ್ಯಗಳ ಈ ಟೂರ್ನಿಯನ್ನು ಕಳೆದ ವರ್ಷ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಈ ಋತುವಿನಲ್ಲಿ ಬಹುಶಃ ಮೇ ತಿಂಗಳಲ್ಲಿ ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಈ ಪಂದ್ಯಾವಳಿಗೆ ಸಂಬಂಧಿಸಿದಂತೆ ಪ್ರಾಯೋಜಕರು ತೋರಿದ ಬೆಂಬಲ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸಲು ಪ್ರಚೋದನೆಯನ್ನು ನೀಡಿದೆ ಎಂದು ಮಂಡಳಿ ತಿಳಿಸಿದೆ.

ಮಹಿಳಾ ಐಪಿಎಲ್ ಆರಂಭಕ್ಕೆ ಕಾರಣವೇನು? 15 ವರ್ಷಗಳ ಹಿಂದೆ ವಿಶ್ವದ ಮೊದಲ ಹಾಗೂ ಅತ್ಯಂತ ಯಶಸ್ವಿ ಟಿ20 ಲೀಗ್ ಆರಂಭಿಸಿದ್ದ ಬಿಸಿಸಿಐ, ಮಹಿಳಾ ಟೂರ್ನಿಯ ಬಗ್ಗೆ ಬಹಳ ಹಿಂದಿನಿಂದಲೂ ನಿರಾಸಕ್ತಿ ತಾಳಿದೆ. ಐಪಿಎಲ್ ನಂತರ ಆರಂಭವಾದ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಮತ್ತು ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಮತ್ತು ದಿ ಹಂಡ್ರೆಡ್‌ನಂತಹ ಲೀಗ್‌ಗಳಲ್ಲಿ ಮಹಿಳೆಯರ ಪಂದ್ಯಾವಳಿಯನ್ನು ಕಳೆದ ಕೆಲವು ವರ್ಷಗಳಿಂದ ಆಡಲಾಗುತ್ತಿದೆ. ಅದೇ ಸಮಯದಲ್ಲಿ, ಕೆಲವು ತಿಂಗಳ ಹಿಂದೆ, ಮಹಿಳಾ ಪಿಎಸ್ಎಲ್ ಅನ್ನು ಪ್ರಾರಂಭಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರವು ಬಿಸಿಸಿಐ ಮುಂದೆ ಮಹಿಳಾ ಐಪಿಎಲ್ಗಾಗಿ ಬೇಡಿಕೆಯನ್ನು ತೀವ್ರಗೊಳಿಸಿತು. ಇದು ಮಂಡಳಿಯ ಮೇಲೆ ನಿರಂತರ ಒತ್ತಡವನ್ನು ಹಾಕಿತು. ಅದೇ ಸಮಯದಲ್ಲಿ, ಈ ವರ್ಷ ಕೆರಿಬಿಯನ್ ಪ್ರೀಮಿಯರ್ ಲೀಗ್‌ನೊಂದಿಗೆ 3-ತಂಡಗಳ ಮಹಿಳಾ CPL ಅನ್ನು ಪರಿಚಯಿಸಿದ್ದು, BCCI ಗೆ ಮತ್ತಷ್ಟು ಒತ್ತಡ ಹೇರಿತು.

ಗಂಗೂಲಿ ಹೇಳಿಕೆಗೆ ತೀವ್ರ ಆಕ್ರೋಶ ಕೆಲವು ತಿಂಗಳ ಹಿಂದೆ, ಮಹಿಳಾ ಐಪಿಎಲ್ ಬಗ್ಗೆ ಬಿಸಿಸಿಐ ಗಂಭೀರವಾಗಿ ಯೋಚಿಸಿರಲಿಲ್ಲ. ಜೊತೆಗೆ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಹಗುರವಾಗಿ ಮಾತನಾಡಿದ್ದರು. ಅಂದಿನಿಂದ ಮಂಡಳಿಯ ಮೇಲೆ ತೀವ್ರ ಟೀಕೆಗಳು ಕೇಳಿಬಂದಿದ್ದವು. ಇದೀಗ ಒಂದೇ ತಿಂಗಳಲ್ಲಿ 6 ತಂಡಗಳೊಂದಿಗೆ ಟೂರ್ನಿ ಆರಂಭಿಸಲು ಮಂಡಳಿ ಸಿದ್ಧವಾಗಿದೆ. ಅದೇ ವೇಳೆ ಪ್ರಮುಖ ಪಂದ್ಯಗಳಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಏರುಪೇರು ಪ್ರದರ್ಶನದಿಂದಾಗಿ ಟೂರ್ನಿಗೆ ಬೇಡಿಕೆಯೂ ಹೆಚ್ಚಾಗುತ್ತಿದ್ದು, ವಿಶ್ವಕಪ್ ನಂತಹ ದೊಡ್ಡ ಟೂರ್ನಿಗಳಲ್ಲಿ ಸಂಕಷ್ಟದ ಸಂದರ್ಭಗಳನ್ನು ಎದುರಿಸಿದ ಅನುಭವ ಭಾರತದ ಆಟಗಾರ್ತಿಯರು ಪಡೆಯುವಂತಾಗಿತ್ತು.

ಇದನ್ನೂ ಓದಿ:IPL 2022: ವಿವಿಧ ಕಾರಣಗಳಿಂದ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಗೈರಾಗುತ್ತಿರುವ ಎಲ್ಲಾ ತಂಡಗಳ ಆಟಗಾರರಿವರು..!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ