IPL 2022: ವಿವಿಧ ಕಾರಣಗಳಿಂದ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಗೈರಾಗುತ್ತಿರುವ ಎಲ್ಲಾ ತಂಡಗಳ ಆಟಗಾರರಿವರು..!

IPL 2022 Players Unavailable: ಪ್ರತಿ ಬಾರಿಯಂತೆ, ಈ ಬಾರಿಯೂ ಹಲವಾರು ವಿದೇಶಿ ಆಟಗಾರರು ಪ್ರತಿ ತಂಡದ ಪ್ರಮುಖ ಭಾಗವಾಗಿದ್ದಾರೆ ಆದರೆ ಈ ಅನೇಕ ಆಟಗಾರರು ವಿವಿಧ ಕಾರಣಗಳಿಂದ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಗೆ ಲಭ್ಯವಿಲ್ಲ ಎಂಬುದು ಎಲ್ಲಾ ತಂಡಗಳಿಗೂ ದೊಡ್ಡ ತಲೆನೋವಾಗಿದೆ.

IPL 2022: ವಿವಿಧ ಕಾರಣಗಳಿಂದ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಗೈರಾಗುತ್ತಿರುವ ಎಲ್ಲಾ ತಂಡಗಳ ಆಟಗಾರರಿವರು..!
ದೀಪಕ್, ಮಾರ್ಕ್ ವುಡ್, ವಾರ್ನರ್
Follow us
TV9 Web
| Updated By: ಪೃಥ್ವಿಶಂಕರ

Updated on: Mar 25, 2022 | 6:54 PM

IPL 2022 15ನೇ ಸೀಸನ್‌ ಮಾರ್ಚ್ 26 ರ ಶನಿವಾರದಿಂದ, ಸೀಸನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಘರ್ಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಈ ಬಾರಿ 11 ಸೀಸನ್‌ಗಳ ನಂತರ ಐಪಿಎಲ್ ಮತ್ತೆ 10 ತಂಡಗಳೊಂದಿಗೆ ನಡೆಯಲಿದೆ. ಅಂದರೆ ಹೆಚ್ಚು ಪಂದ್ಯಗಳು, ಹೆಚ್ಚು ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಪ್ರತಿ ಬಾರಿಯಂತೆ, ಈ ಬಾರಿಯೂ ಹಲವಾರು ವಿದೇಶಿ ಆಟಗಾರರು ಪ್ರತಿ ತಂಡದ ಪ್ರಮುಖ ಭಾಗವಾಗಿದ್ದಾರೆ ಆದರೆ ಈ ಅನೇಕ ಆಟಗಾರರು ವಿವಿಧ ಕಾರಣಗಳಿಂದ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಗೆ ಲಭ್ಯವಿಲ್ಲ ಎಂಬುದು ಎಲ್ಲಾ ತಂಡಗಳಿಗೂ ದೊಡ್ಡ ತಲೆನೋವಾಗಿದೆ.

ಆಸ್ಟ್ರೇಲಿಯ ತಂಡದ ಐತಿಹಾಸಿಕ ಪಾಕಿಸ್ತಾನ ಪ್ರವಾಸ ನಡೆಯುತ್ತಿರುವಾಗಲೇ ಐಪಿಎಲ್ ಆರಂಭವಾಗುತ್ತಿದೆ. ಈ ಪ್ರವಾಸದಲ್ಲಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯು ಶುಕ್ರವಾರ ಮಾರ್ಚ್ 25 ರಂದು ಕೊನೆಗೊಳ್ಳುತ್ತದೆ. ಅಂದರೆ ಐಪಿಎಲ್ ಪ್ರಾರಂಭವಾಗುವ ಒಂದು ದಿನದ ಮೊದಲು, ಆದರೆ ಅದರ ನಂತರ ODI ಸರಣಿ ಮತ್ತು T20 ಪಂದ್ಯಗಳನ್ನು ಸಹ ಆಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕ್ರಿಕೆಟ್ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ನಂತರ ODI ಅಥವಾ T20 ತಂಡದ ಭಾಗವಾಗದ ಆಟಗಾರರು ಏಪ್ರಿಲ್ 6 ರ ಮೊದಲು IPL ಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಆರಂಭಿಕ ಪಂದ್ಯಗಳಿಗೆ ಲಭ್ಯವಿಲ್ಲದ ಆಟಗಾರರು ಯಾರು ಎಂಬುದನ್ನು ಈಗ ನೋಡೋಣ.

ಚೆನ್ನೈ ಸೂಪರ್ ಕಿಂಗ್ಸ್ ಹಾಲಿ ಚಾಂಪಿಯನ್ ಚೆನ್ನೈ ಈ ಆವೃತ್ತಿಯಲ್ಲಿ ತಮ್ಮ ಪ್ರಮುಖ ಬೌಲರ್ ದೀಪಕ್ ಚಹಾರ್ ಅವರನ್ನು ಕಳೆದುಕೊಳ್ಳಲಿದೆ. ಬಲಗೈ ವೇಗಿ ಚಹರ್ ಅವರನ್ನು ಚೆನ್ನೈ ಹರಾಜಿನಲ್ಲಿ 14 ಕೋಟಿ ರೂ.ಗೆ ಮರು ಖರೀದಿಸಿತು. ಆದಾಗ್ಯೂ, ಹರಾಜಿನ ಒಂದು ವಾರದ ನಂತರ ಇಂಜುರಿಗೆ ತುತ್ತಾಗಬೇಕಾಯಿತು. ಪ್ರಸ್ತುತ ದೀಪಕ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್ನೆಸ್​ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು ಅನೇಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆಯಿದೆ. ಇವರ ಹೊರತಾಗಿ, ತಂಡದ ಇಂಗ್ಲಿಷ್ ಆಲ್‌ರೌಂಡರ್ ಮೊಯಿನ್ ಅಲಿ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ವೀಸಾ ವಿಳಂಬದಿಂದಾಗಿ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಹೊರತಾಗಿ ದಕ್ಷಿಣ ಆಫ್ರಿಕಾದ ಬೌಲರ್ ಡ್ವೇನ್ ಪ್ರಿಟೋರಿಯಸ್ ಕೂಡ ಮೊದಲ ಪಂದ್ಯಕ್ಕೆ ಲಭ್ಯರಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್ ಕೋಲ್ಕತ್ತಾ ನೈಟ್ ರೈಡರ್ಸ್‌ ಹಾಗೂ ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಮತ್ತು ಆರಂಭಿಕ ಆಟಗಾರ ಆರೋನ್ ಫಿಂಚ್ ಮೊದಲ ಕೆಲವು ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕಮ್ಮಿನ್ಸ್ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಮುಗಿಸಿದ ನಂತರ ಆಸ್ಟ್ರೇಲಿಯಾಕ್ಕೆ ಹಿಂತಿರುಗಲಿದ್ದಾರೆ. ಅಲ್ಲಿ ಅವರು ದಿವಂಗತ ಲೆಗ್-ಸ್ಪಿನ್ನರ್ ಶೇನ್ ವಾರ್ನ್‌ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಭಾರತಕ್ಕೆ ಬಂದು ಮೂರು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು. ಅವರ ಹೊರತಾಗಿ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ODI ಮತ್ತು T20 ಸರಣಿಗಳಿಗೆ ಆರನ್ ಪಿಂಚ್ ತಂಡದ ನಾಯಕರಾಗಿರುವುದರಿಂದ ಅವರು ಸಹ ಏಪ್ರಿಲ್ 6 ರ ಮೊದಲು ಐಪಿಎಲ್​ಗೆ ಲಭ್ಯವಿರುವುದಿಲ್ಲ. ಈ ಹಿಂದೆ ಐಪಿಎಲ್​ನಿಂದ ಹಿಂದೆ ಸರಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಬದಲಿಗೆ ಫಿಂಚ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು CSK ಮತ್ತು KKR ನಂತೆ, RCB ಕೂಡ ಆರಂಭದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ತಂಡದ ಇಬ್ಬರು ಪ್ರಮುಖ ಆಸ್ಟ್ರೇಲಿಯಾದ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಆರಂಭಿಕ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಹ್ಯಾಜಲ್‌ವುಡ್ ಪಾಕಿಸ್ತಾನ ಪ್ರವಾಸದಲ್ಲಿದ್ದರೆ, ಮ್ಯಾಕ್ಸ್‌ವೆಲ್ ಮದುವೆಯ ಕಾರಣ ಆಡಲು ಸಾಧ್ಯವಾಗುವುದಿಲ್ಲ. ಹೇಜಲ್‌ವುಡ್ ಜೊತೆಗೆ ಮಧ್ಯಮ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಕೂಡ ಪಾಕಿಸ್ತಾನ ಪ್ರವಾಸದಲ್ಲಿರಲಿದ್ದು, ಏಪ್ರಿಲ್ 6ರ ನಂತರ ಮಾತ್ರ ಲಭ್ಯವಾಗಲಿದ್ದಾರೆ.

ಮುಂಬೈ ಇಂಡಿಯನ್ಸ್ ಮುಂಬೈ ಇಂಡಿಯನ್ಸ್ ಪಟ್ಟಿಯಲ್ಲಿ ದೊಡ್ಡ ಹೆಸರು ಜೋಫ್ರಾ ಆರ್ಚರ್, ಅವರು ಇಡೀ ಆವೃತ್ತಿಗೆ ಲಭ್ಯವಿಲ್ಲ. ಗಾಯದ ನಡುವೆಯೂ ಆರ್ಚರ್ ಅವರನ್ನು ಮುಂಬೈ 8 ಕೋಟಿಗೆ ಖರೀದಿಸಿದೆ. ಇವರನ್ನು ಹೊರತುಪಡಿಸಿದರೆ ತಂಡದ ಪ್ರಮುಖ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಅವರು ಡೆಲ್ಲಿ ವಿರುದ್ಧದ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುತ್ತಿಲ್ಲ. ಕಳೆದ ತಿಂಗಳು ವಿಂಡೀಸ್ ಸರಣಿಯ ವೇಳೆ ಸೂರ್ಯಕುಮಾರ್ ಗಾಯಗೊಂಡಿದ್ದು, ಇನ್ನು ಚೇತರಿಸಿಕೊಂಡಿಲ್ಲ.

ದೆಹಲಿ ಕ್ಯಾಪಿಟಲ್ಸ್ ಆರಂಭಿಕ ಪಂದ್ಯಗಳಲ್ಲಿ ದೆಹಲಿ ತಂಡದ ಹೆಚ್ಚಿನ ಆಟಗಾರರು ಅಲಭ್ಯರಾಗಲಿದ್ದಾರೆ. ತಂಡದ ಸ್ಟಾರ್ ದಕ್ಷಿಣ ಆಫ್ರಿಕಾದ ವೇಗಿ ಎನ್ರಿಕ್ ನಾರ್ಕಿಯಾ ಫಿಟ್‌ನೆಸ್‌ನೊಂದಿಗೆ ಹೋರಾಡುತ್ತಿದ್ದಾರೆ. ಅವರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ, ಆದರೆ ಅವರು ಯಾವಾಗ ಆಡಲು ಪ್ರಾರಂಭಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಮೊದಲ 2-3 ಪಂದ್ಯಗಳಲ್ಲಿ ಅವರು ಮರಳುವ ಸಾಧ್ಯತೆ ಇಲ್ಲ ಎಂದು ಊಹಿಸಲಾಗಿದೆ. ತಂಡದ ಆಸ್ಟ್ರೇಲಿಯದ ಕ್ರಿಕೆಟಿಗರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಮೊದಲ 2-3 ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇಬ್ಬರೂ ಪಾಕಿಸ್ತಾನ ಪ್ರವಾಸದಲ್ಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಅವರಂತೆ, ವಾರ್ನರ್ ಶೇನ್ ವಾರ್ನ್ ಅವರ ಶ್ರದ್ಧಾಂಜಲಿ ಸಭೆಗಾಗಿ ಆಸ್ಟ್ರೇಲಿಯಾಕ್ಕೆ ಹಿಂತಿರುಗಲಿದ್ದಾರೆ. ಆದರೆ ಮಾರ್ಷ್ ಪಾಕಿಸ್ತಾನದಲ್ಲಿ ODI ಸರಣಿಯನ್ನು ಆಡಲಿದ್ದಾರೆ. ಇವರಲ್ಲದೆ ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಮತ್ತು ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಕೂಡ ಮೊದಲ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಇಬ್ಬರೂ ಆಟಗಾರರು ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ತಂಡವು ತನ್ನ ಇಬ್ಬರು ಪ್ರಮುಖ ಆಟಗಾರರಿಲ್ಲದೆ ಮೊದಲ ಪಂದ್ಯವನ್ನು ಆಡಲಿದೆ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಮುಗಿಸಿದ ನಂತರ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಅವರು ಮೊದಲ 3 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಇದರಿಂದಾಗಿ ಅವರು ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ, ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಆಡುತ್ತಿದ್ದು, ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಗುಜರಾತ್ ಟೈಟಾನ್ಸ್ ಚೊಚ್ಚಲ ಬಾರಿಗೆ ಐಪಿಎಲ್ ಪ್ರವೇಶಿಸುತ್ತಿರುವ ಗುಜರಾತ್ ಈ ವಿಚಾರದಲ್ಲಿ ಅಷ್ಟಾಗಿ ತೊಂದರೆಗೊಳಗಾಗಿಲ್ಲ. ಟೆಸ್ಟ್ ಸರಣಿಯಿಂದಾಗಿ ವೆಸ್ಟ್ ಇಂಡೀಸ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಮಾತ್ರ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಆದರೆ, ಈಗಾಗಲೇ ಟೂರ್ನಿಯಿಂದ ಹಿಂದೆ ಸರಿದಿದ್ದ ಇಂಗ್ಲೆಂಡ್ ಆರಂಭಿಕ ಆಟಗಾರ ಜೇಸನ್ ರಾಯ್ ಅವರಿಂದ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಅವರ ಸ್ಥಾನಕ್ಕೆ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ಗುಜರಾತ್‌ನಂತೆ, ಮತ್ತೊಂದು ಹೊಸ ತಂಡ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಅದು ಕೂಡ ಕೆಲವು ಪ್ರಮುಖ ಆಟಗಾರರಿಲ್ಲದೆ ಆಡಬೇಕಾಗುತ್ತದೆ. ಇದರಲ್ಲಿ ತಂಡ ಉಳಿಸಿಕೊಂಡಿರುವ ಮಾರ್ಕಸ್ ಸ್ಟೊಯಿನಿಸ್ ಪ್ರಮುಖರಾಗಿದ್ದಾರೆ. ಪಾಕಿಸ್ತಾನ ಪ್ರವಾಸದ ಕಾರಣ ಅವರು ಮೊದಲ 2-3 ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅವರಂತೆಯೇ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಮತ್ತು ಕೈಲ್ ಮೇಯರ್ಸ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಾಗಿ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಗಾಯದ ಸಮಸ್ಯೆಯಿಂದ ಇಡೀ ಋತುವಿನಿಂದಲೇ ಹೊರಗುಳಿದಿದ್ದ ಮಾರ್ಕ್ ವುಡ್ ಅವರ ರೂಪದಲ್ಲಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಸನ್ ರೈಸರ್ಸ್ ಹೈದರಾಬಾದ್ ಕೇನ್ ವಿಲಿಯಮ್ಸನ್ ತಂಡಕ್ಕೆ ಹೆಚ್ಚಿನ ತೊಂದರೆ ಇಲ್ಲ. ಕ್ಯಾಪ್ಟನ್ ಕೇನ್ ಫಿಟ್ ಆಗಿ ಕಾಣುತ್ತಿದ್ದಾರೆ. ಪಾಕಿಸ್ತಾನದ ಸರಣಿಯಿಂದಾಗಿ ಆಸ್ಟ್ರೇಲಿಯಾದ ವೇಗಿ ಶಾನ್ ಅಬಾಟ್ ಮಾತ್ರ ಆರಂಭದಲ್ಲಿ ಲಭ್ಯವಿರುವುದಿಲ್ಲ, ಆದರೆ ಅವರು ಆಡುವ XI ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರ ಕಡಿಮೆ.

ಇದನ್ನೂ ಓದಿ:IPL 2022: 46 ಎಸೆತಗಳಲ್ಲಿ 87 ರನ್ ಚಚ್ಚಿದ ಆರ್​ಸಿಬಿ ಆಲ್​ರೌಂಡರ್! ತಂಡದಲ್ಲಿ ಸಿಗುತ್ತಾ ಅವಕಾಶ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್