IPL 2022: 46 ಎಸೆತಗಳಲ್ಲಿ 87 ರನ್ ಚಚ್ಚಿದ ಆರ್​ಸಿಬಿ ಆಲ್​ರೌಂಡರ್! ತಂಡದಲ್ಲಿ ಸಿಗುತ್ತಾ ಅವಕಾಶ?

IPL 2022: ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಸುಯಶ್ ಪ್ರಭುದೇಸಾಯಿ 46 ಎಸೆತಗಳಲ್ಲಿ 87 ರನ್ ಗಳಿಸಿದರು. ಈ ಬಲಗೈ ಆಲ್ ರೌಂಡರ್ ತನ್ನ ಬಿರುಸಿನ ಬ್ಯಾಟಿಂಗ್​ನಿಂದ ಎಲ್ಲರ ಮನ ಗೆದಿದ್ದಾರೆ. ಸುಯಾಶ್ ಅವರನ್ನು ಆರ್‌ಸಿಬಿ ಕೇವಲ 30 ಲಕ್ಷಕ್ಕೆ ಖರೀದಿಸಿದೆ.

IPL 2022: 46 ಎಸೆತಗಳಲ್ಲಿ 87 ರನ್ ಚಚ್ಚಿದ ಆರ್​ಸಿಬಿ ಆಲ್​ರೌಂಡರ್! ತಂಡದಲ್ಲಿ ಸಿಗುತ್ತಾ ಅವಕಾಶ?
ಸುಯಶ್ ಪ್ರಭುದೇಸಾಯಿ
Follow us
TV9 Web
| Updated By: ಪೃಥ್ವಿಶಂಕರ

Updated on: Mar 25, 2022 | 5:51 PM

ಎಲ್ಲಾ ತಂಡಗಳಂತೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಹ ಐಪಿಎಲ್ (IPL 2022) ನ 15 ನೇ ಸೀಸನ್ ಗೆಲ್ಲಲು ತನ್ನ ತಯಾರಿಯಲ್ಲಿ ನಿರತವಾಗಿದೆ. ಈ ತಂಡದಲ್ಲಿ ಯಾವಾಗಲೂ ಒಂದಕ್ಕಿಂತ ಹೆಚ್ಚು ಸ್ಟಾರ್ ಆಟಗಾರರು ಇರುತ್ತಾರೆ. ಆದರೆ RCB ಗೆ ಚಾಂಪಿಯನ್ ಆಗುವ ಭಾಗ್ಯ ಸಿಗಲೇ ಇಲ್ಲ. ಆದರೆ, ಈ ಬಾರಿ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿ ತಂಡವಿದೆ. ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿರುವುದರಿಂದ ಆರ್‌ಸಿಬಿ ಹೊಸ ಆರಂಭವನ್ನು ಮಾಡುತ್ತಿದೆ. ಇದೀಗ ತಂಡದ ಹಿಡಿತ ಫಾಫ್ ಡು ಪ್ಲೆಸಿಸ್ ಕೈಯಲ್ಲಿದೆ. ಐಪಿಎಲ್ 2022 ರ ಸಿದ್ಧತೆಗಳ ಕುರಿತು ಮಾತನಾಡುವುದಾದರೆ, ಆರ್​ಸಿಬಿ ಅಭ್ಯಾಸ ಪಂದ್ಯಗಳ ಮೂಲಕ ಸ್ವತಃ ತಯಾರಿ ನಡೆಸುತ್ತಿದೆ. ಗುರುವಾರ, RCB ತಂಡ ಅಭ್ಯಾಸ ಪಂದ್ಯವನ್ನು ಆಡಿತು, ಇದರಲ್ಲಿ ತಂಡದ ಐವರು ಬ್ಯಾಟ್ಸ್‌ಮನ್‌ಗಳು ಅದ್ಭುತ ಫಾರ್ಮ್ ತೋರಿಸಿದರು. ಆದರೆ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಆಲ್ ರೌಂಡರ್ ಸುಯಶ್ ಪ್ರಭುದೇಸಾಯಿ ಎಲ್ಲರ ಗಮನ ಸೆಳೆದರು.

ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಸುಯಶ್ ಪ್ರಭುದೇಸಾಯಿ 46 ಎಸೆತಗಳಲ್ಲಿ 87 ರನ್ ಗಳಿಸಿದರು. ಈ ಬಲಗೈ ಆಲ್ ರೌಂಡರ್ ತನ್ನ ಬಿರುಸಿನ ಬ್ಯಾಟಿಂಗ್​ನಿಂದ ಎಲ್ಲರ ಮನ ಗೆದಿದ್ದಾರೆ. ಸುಯಾಶ್ ಅವರನ್ನು ಆರ್‌ಸಿಬಿ ಕೇವಲ 30 ಲಕ್ಷಕ್ಕೆ ಖರೀದಿಸಿದೆ. ಅಷ್ಟಕ್ಕೂ, ಸುಯಶ್ ಯಾರು, ಅವರ ವಿಶೇಷತೆ ಏನು ಮತ್ತು ಅವರು RCB ಯ ಪ್ಲೇಯಿಂಗ್ XI ನ ಭಾಗವಾಗಬಹುದೇ ಎಂಬುದರ ಬಗ್ಗೆ ಇಲ್ಲಿದೆ ವಿವರ.

ಸುಯಶ್ ಪ್ರಭುದೇಸಾಯಿ ಅತ್ಯುತ್ತಮ ಆಲ್ ರೌಂಡರ್ ಸುಯಶ್ ಪ್ರಭುದೇಸಾಯಿ ಗೋವಾ ಪರ ಫಸ್ಟ್ ಕ್ಲಾಸ್ ಮತ್ತು ಲಿಸ್ಟ್ ಎ ಕ್ರಿಕೆಟ್ ಆಡುತ್ತಾರೆ. ಸುಯಶ್ 2016-17ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎಗೆ ಪಾದಾರ್ಪಣೆ ಮಾಡಿದರು ಮತ್ತು 2018-19ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. 2018-19ರಲ್ಲಿಯೇ ಅವರು ಸೈಯದ್ ಮುಷ್ತಾಕ್ ಟಿ20 ಟ್ರೋಫಿಯಲ್ಲಿ ಗೋವಾ ಪರ ಆಡಿದ್ದರು. ಸುಯಶ್ ಪ್ರಭುದೇಸಾಯಿ ಇದುವರೆಗೆ 19 ಪ್ರಥಮ ದರ್ಜೆ ಪಂದ್ಯಗಳು, 34 ಲಿಸ್ಟ್ ಎ ಪಂದ್ಯಗಳು ಮತ್ತು 22 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ ಈ ಆಟಗಾರನ ಸರಾಸರಿ 42 ಕ್ಕಿಂತ ಹೆಚ್ಚು ಮತ್ತು ಸುಯಾಶ್ ಅವರ ಹೆಸರಿಗೆ ಶತಕ ಮತ್ತು 8 ಅರ್ಧ ಶತಕಗಳಿವೆ. ಸುಯಾಶ್ ಲಿಸ್ಟ್ ಎ ನಲ್ಲಿ 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಸುಯಾಶ್ ಇದುವರೆಗೆ 22 ಟಿ20 ಪಂದ್ಯಗಳಲ್ಲಿ 31ಕ್ಕೂ ಅಧಿಕ ಸರಾಸರಿಯಲ್ಲಿ 443 ರನ್ ಗಳಿಸಿದ್ದಾರೆ. ಇದರಲ್ಲಿ ಸುಯಾಶ್ ಸ್ಟ್ರೈಕ್ ರೇಟ್ 150ರ ಆಸುಪಾಸಿನಲ್ಲಿದೆ.

ಅತ್ಯುತ್ತಮ ಸ್ವಿಂಗ್ ಬೌಲರ್ ಸುಯಶ್ ಪ್ರಭುದೇಸಾಯಿ ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲದೆ ಉತ್ತಮ ಬೌಲರ್ ಕೂಡ. ಸುಯಶ್ ಇದುವರೆಗೆ ಪ್ರಥಮ ದರ್ಜೆ ಪಂದ್ಯಗಳಲ್ಲಿ 4, ಲಿಸ್ಟ್ ಎ ಪಂದ್ಯಗಳಲ್ಲಿ 4 ಮತ್ತು ಟಿ20ಯಲ್ಲಿ 2 ವಿಕೆಟ್ ಪಡೆದಿದ್ದಾರೆ. ಆದರೆ ಈ ಆಟಗಾರನಿಗೆ ಬೌಲಿಂಗ್ ಮಾಡಲು ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದರೆ ಸುಯಶ್ ಬಳಿ ಸ್ವಿಂಗ್ ರೂಪದಲ್ಲಿ ಅತ್ಯಂತ ಅಪಾಯಕಾರಿ ಅಸ್ತ್ರವಿದೆ. ಈ ಆಟಗಾರನು ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದಾನೆ. ಹೀಗಾಗಿ ಈ ಆಟಗಾರ RCB ಗೆ ತುಂಬಾ ಉಪಯುಕ್ತವಾಗಬಹುದು. ಇದಲ್ಲದೇ ಸುಯಶ್ ಶ್ರೇಷ್ಠ ಫೀಲ್ಡರ್ ಕೂಡ. ಅಂತಹ ಪರಿಸ್ಥಿತಿಯಲ್ಲಿ, ಆರಂಭಿಕ ಪಂದ್ಯಗಳಲ್ಲಿ ಈ ಆಟಗಾರರು RCB ಆಡುವ XI ನಲ್ಲಿ ಕಾಣಿಸಿಕೊಂಡರೆ, ಯಾರು ಆಶ್ಚರ್ಯ ಪಡಬೇಕಿಲ್ಲ.

ಇದನ್ನೂ ಓದಿ:CSK vs KKR, IPL 2022 Match Prediction: ಮೊದಲ ಪಂದ್ಯದಲ್ಲಿ ಯಾರಿಗೆ ಗೆಲುವು? ಅಂಕಿ- ಅಂಶ ನೀಡಿದೆ ನಿಖರ ಫಲಿತಾಂಶ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ