CSK vs KKR, IPL 2022 Match Prediction: ಮೊದಲ ಪಂದ್ಯದಲ್ಲಿ ಯಾರಿಗೆ ಗೆಲುವು? ಅಂಕಿ- ಅಂಶ ನೀಡಿದೆ ನಿಖರ ಫಲಿತಾಂಶ

CSK vs KKR, IPL 2022 Match Prediction: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿದೆ. ಇವರಿಬ್ಬರ ನಡುವೆ 26 ಪಂದ್ಯಗಳು ನಡೆದಿದ್ದು, ಚೆನ್ನೈ 17ರಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ ಕೇವಲ 8 ಪಂದ್ಯಗಳಲ್ಲಿ ಯಶಸ್ಸು ಕಂಡಿದೆ.

CSK vs KKR, IPL 2022 Match Prediction: ಮೊದಲ ಪಂದ್ಯದಲ್ಲಿ ಯಾರಿಗೆ ಗೆಲುವು? ಅಂಕಿ- ಅಂಶ ನೀಡಿದೆ ನಿಖರ ಫಲಿತಾಂಶ
ಶ್ರೇಯಸ್- ಜಡೇಜಾ
Follow us
TV9 Web
| Updated By: ಪೃಥ್ವಿಶಂಕರ

Updated on:Mar 25, 2022 | 4:11 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರದಿಂದ ಐಪಿಎಲ್ (IPL 2022) 15 ನೇ ಸೀಸನ್ ಆರಂಭವಾಗಲಿದೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಚೆನ್ನೈ ಮತ್ತು ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ (Chennai Super Kings vs Kolkata Knight Riders) ನಡುವೆ ನಡೆಯಲಿದೆ. ಕಳೆದ ವರ್ಷ ಎರಡೂ ತಂಡಗಳು ಅಮೋಘ ಆಟ ಪ್ರದರ್ಶಿಸಿದ್ದವು. ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್‌ನಲ್ಲಿ ಅದ್ಭುತವಾಗಿ ಸ್ಥಾನ ಪಡೆದಿತ್ತು, ಆದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಪಂದ್ಯದಲ್ಲಿ ಈ ತಂಡವನ್ನು ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನ ವಶಪಡಿಸಿಕೊಂಡಿತು. ಪಂದ್ಯದ ಬಳಿಕ ಕೋಲ್ಕತ್ತಾ ತಂಡವನ್ನು ಎಂಎಸ್ ಧೋನಿ ಕೂಡ ಹೊಗಳಿದ್ದರು. ಅದು ಹಿಂದಿನ ವಿಷಯ ಆದರೆ ಈಗ ಇದು ಹೊಸ ಆವೃತ್ತಿಯ ಆರಂಭವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ? ಕೋಲ್ಕತ್ತಾದ ಹೊಸ ನಾಯಕ ಶ್ರೇಯಸ್ ಅಯ್ಯರ್ ಕಮಾಲ್ ಮಾಡುತ್ತಾರೆಯೇ ಅಥವಾ ರವೀಂದ್ರ ಜಡೇಜಾ ಅವರ ಚೆನ್ನೈ ಸೂಪರ್ ಕಿಂಗ್ಸ್ (IPL 2022 Match Prediction) ಮತ್ತೆ ಗೆಲುವಿನ ಲಯವನ್ನು ಮುಂದುವರೆಸಲಿದೆಯೇ ಎಂಬುದರ ಬಗ್ಗೆ ಇಲ್ಲಿದೆ ವಿವರ

ಕೋಲ್ಕತ್ತಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ನಾಯಕರನ್ನು ಬದಲಾಯಿಸಿವೆ. ಶ್ರೇಯಸ್ ಅಯ್ಯರ್ ಅವರಿಗೆ ಕೆಕೆಆರ್ ಕಮಾಂಡ್ ನೀಡಿದ್ದು, ಧೋನಿ ಚೆನ್ನೈ ನಾಯಕತ್ವವನ್ನು ತೊರೆದು ಜಡೇಜಾಗೆ ತಮ್ಮ ಸಿಂಹಾಸನವನ್ನು ಹಸ್ತಾಂತರಿಸಿದ್ದಾರೆ. ಎರಡೂ ತಂಡಗಳಲ್ಲೂ ಅನೇಕ ಹೊಸ ಮ್ಯಾಚ್ ವಿನ್ನರ್ ಆಟಗಾರರು ಇದ್ದಾರೆ. ಆದ್ದರಿಂದ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ನಿಖರವಾಗಿ ಹೇಳಲು ಕಷ್ಟವಾಗುತ್ತದೆ. ಆದಾಗ್ಯೂ, ಕ್ರಿಕೆಟ್‌ನಲ್ಲಿ ಅಂಕಿಅಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದು ಯಾವ ತಂಡವು ಮೇಲುಗೈ ಸಾಧಿಸಲಿದೆ ಎಂಬುದನ್ನು ಸೂಚಿಸುತ್ತದೆ.

ಚೆನ್ನೈ ಸೂಪರ್ ಕಿಂಗ್ಸ್ ಪ್ರಾಬಲ್ಯ ನಾವು ಅಂಕಿಅಂಶಗಳ ಬಗ್ಗೆ ಮಾತನಾಡುವುದಾದರೆ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿದೆ. ಇವರಿಬ್ಬರ ನಡುವೆ 26 ಪಂದ್ಯಗಳು ನಡೆದಿದ್ದು, ಚೆನ್ನೈ 17ರಲ್ಲಿ ಗೆದ್ದಿದ್ದರೆ, ಕೋಲ್ಕತ್ತಾ ಕೇವಲ 8 ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. ಐಪಿಎಲ್ 2021 ರ ಬಗ್ಗೆ ಮಾತನಾಡುವುದಾದರೆ, ಚೆನ್ನೈ ಸೂಪರ್ ಕಿಂಗ್ಸ್ ಎರಡೂ ಲೀಗ್ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತು. ಮೊದಲ ಪಂದ್ಯವನ್ನು ಚೆನ್ನೈ 6 ವಿಕೆಟ್‌ಗಳಿಂದ ಗೆದ್ದುಕೊಂಡರೆ, ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಸೋತಿತ್ತು. ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 27 ರನ್‌ಗಳಿಂದ ಕೋಲ್ಕತ್ತಾವನ್ನು ಸೋಲಿಸಿತು.

ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆ ತೀರಾ ಕಳಪೆಯಾಗಿತ್ತು. ಚೆನ್ನೈ ಐಪಿಎಲ್‌ನ ಆರಂಭಿಕ ಪಂದ್ಯವನ್ನು ಇದುವರೆಗೆ 12 ಬಾರಿ ಆಡಿದ್ದು, ಅದರಲ್ಲಿ 6 ರಲ್ಲಿ ಸೋತಿದೆ. ಮತ್ತೊಂದೆಡೆ ಕೋಲ್ಕತ್ತಾ 14 ಪಂದ್ಯಗಳಲ್ಲಿ 10 ಅನ್ನು ಗೆದ್ದಿದೆ. ಈ ಅಂಕಿ ಅಂಶವು ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಹೋಗುತ್ತಿದೆ ಎಂದು ತೋರುತ್ತದೆ.

ಕೋಲ್ಕತ್ತಾ-ಚೆನ್ನೈ ಕಡೆಯಿಂದ ಅತಿ ಹೆಚ್ಚು ಸಿಕ್ಸರ್‌ ಹೊಡೆದವರು ಯಾರು? ಕೋಲ್ಕತ್ತಾ ಪರ ಆಂಡ್ರೆ ರಸೆಲ್ 140 ಸಿಕ್ಸರ್ ಬಾರಿಸಿದ್ದಾರೆ. ರಸೆಲ್ ಕೇವಲ 66 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೋಲ್ಕತ್ತಾ ಪರ ರಸೆಲ್ ಕೇವಲ 114 ಬೌಂಡರಿಗಳನ್ನು ಬಾರಿಸಿದ್ದು ದೊಡ್ಡ ವಿಷಯ. ಅರ್ಥಾತ್ ರಸೆಲ್ ಕೇವಲ ಸಿಕ್ಸರ್‌ಗಳಲ್ಲಿ ವ್ಯವಹರಿಸುತ್ತಾರೆ ಎಂಬುದು ಇಲ್ಲಿ ಸಾಭೀತಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೇಂದ್ರ ಸಿಂಗ್ ಧೋನಿ 189 ಸಿಕ್ಸರ್ ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ಧೋನಿ ತಮ್ಮ 200 ಐಪಿಎಲ್ ಸಿಕ್ಸರ್‌ಗಳನ್ನು ಪೂರ್ಣಗೊಳಿಸಬಹುದು. ಈ ಅಂಕಿಅಂಶಗಳು ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್‌ ಎರಡರಿಂದ ಕೂಡಿವೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಚೆನ್ನೈ-ಕೋಲ್ಕತ್ತಾ ಪರ ಅತಿ ಹೆಚ್ಚು ವಿಕೆಟ್ ಪಡೆದವರು ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಸೇರಿದಂತೆ, ಆಫ್ ಸ್ಪಿನ್ನರ್ ಸುನಿಲ್ ನರೈನ್ ಕೋಲ್ಕತ್ತಾ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಈ ದಿಗ್ಗಜ ಬೌಲರ್ 161 ವಿಕೆಟ್ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ ಅತಿ ಹೆಚ್ಚು 138 ವಿಕೆಟ್ ಕಬಳಿಸಿದ್ದಾರೆ.

ಚೆನ್ನೈ-ಕೋಲ್ಕತ್ತಾ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದವರು ಯಾರು? ಚೆನ್ನೈ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ 98 ಕ್ಯಾಚ್‌ಗಳನ್ನು ಪಡೆದಿದ್ದಾರೆ, ಆದರೆ ಈಗ ಅವರು ತಂಡದ ಭಾಗವಾಗಿಲ್ಲ. ಪ್ರಸ್ತುತ ತಂಡದ ನಾಯಕ ರವೀಂದ್ರ ಜಡೇಜಾ 63 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ಕೋಲ್ಕತ್ತಾ ತಂಡದಲ್ಲಿ ಆಂಡ್ರೆ ರಸೆಲ್ 26 ಕ್ಯಾಚ್‌ಗಳನ್ನು ಪಡೆದಿದ್ದಾರೆ.

ಈ ಪಂದ್ಯದಲ್ಲಿ ಗೆಲುವು ಯಾರ ಪಾಲಾಗಬಹುದು? ಇದೀಗ ಐಪಿಎಲ್‌ನ ಮೊದಲ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬುದೇ ಪ್ರಶ್ನೆಯಾಗಿದೆ. ನಾವು ಅಂಕಿಅಂಶಗಳು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಅನುಭವಿ ಆಟಗಾರರನ್ನು ನೋಡಿದರೆ, ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಕೊಂಚ ಹಿನ್ನಡೆಯಾಗಬಹುದು. ಆದರೆ, ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು.

ಇದನ್ನೂ ಓದಿ:IPL 2022: ಐಪಿಎಲ್​ನಲ್ಲಿ 100 ಕೋಟಿಗೂ ಅಧಿಕ ಹಣ ಸಂಪಾಧಿಸಿದ ಆಟಗಾರರ ಬಗ್ಗೆ ನಿಮಗೆಷ್ಟು ಗೊತ್ತು?

Published On - 4:10 pm, Fri, 25 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ