CSK vs KKR Playing XI, IPL 2022: ಮೊದಲ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ

CSK vs KKR Playing XI, IPL 2022: ಐಪಿಎಲ್ 2022 ರ ಮೆಗಾ ಹರಾಜಿನ ನಂತರ, ಎಲ್ಲಾ ತಂಡಗಳು ಬದಲಾಗಿವೆ. ಸಿಎಸ್​ಕೆ ಮತ್ತು ಕೆಕೆಆರ್ ಕೂಡ ಇದಕ್ಕೆ ಭಿನ್ನವಾಗಿಲ್ಲ. ಈ ಎರಡು ತಂಡಗಳಲ್ಲು ಸಾಕಷ್ಟು ಆಟಗಾರರು ಬದಲಾಗಿದ್ದಾರೆ.

CSK vs KKR Playing XI, IPL 2022: ಮೊದಲ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ
ಶ್ರೇಯಸ್, ಜಡೇಜಾ
Follow us
TV9 Web
| Updated By: ಪೃಥ್ವಿಶಂಕರ

Updated on: Mar 25, 2022 | 4:48 PM

ಐಪಿಎಲ್ 2022 (IPL 2022)ರ ಕಾಯುವಿಕೆ ಈಗ ಮುಗಿಯುವ ಹಂತದಲ್ಲಿದೆ. ಇನ್ನು 2 ತಿಂಗಳು ಬರಿ ಕ್ರಿಕೆಟ್ ಸದ್ದು ಮಾಡಲಿದೆ. IPL 2022 ರಲ್ಲಿ ಮೊದಲ ಮುಖಾಮುಖಿ ಹಿಂದಿನ ಆವೃತ್ತಿಯ ಇಬ್ಬರು ಫೈನಲಿಸ್ಟ್‌ಗಳ ನಡುವೆ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲ ಪಂದ್ಯವನ್ನಾಡಲಿವೆ. ಉಭಯ ತಂಡಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದು, ಎರಡೂ ತಂಡಗಳ ನಾಯಕರು ಹೊಸಬರಾಗಿದ್ದಾರೆ. ಚೆನ್ನೈ ಈಗ ರವೀಂದ್ರ ಜಡೇಜಾ ಕೈಯಲ್ಲಿದ್ದರೆ, ಶ್ರೇಯಸ್ ಅಯ್ಯರ್ ಕೋಲ್ಕತ್ತಾ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ನಾಳಿನ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದರ ಬಗ್ಗೆ ಇಲ್ಲಿದೆ ವಿವರ.

ಐಪಿಎಲ್ 2022 ರ ಮೆಗಾ ಹರಾಜಿನ ನಂತರ, ಎಲ್ಲಾ ತಂಡಗಳು ಬದಲಾಗಿವೆ. ಸಿಎಸ್​ಕೆ ಮತ್ತು ಕೆಕೆಆರ್ ಕೂಡ ಇದಕ್ಕೆ ಭಿನ್ನವಾಗಿಲ್ಲ. ಈ ಎರಡು ತಂಡಗಳಲ್ಲು ಸಾಕಷ್ಟು ಆಟಗಾರರು ಬದಲಾಗಿದ್ದಾರೆ. ಹೀಗಿರುವಾಗ ಮೊದಲ ಪಂದ್ಯದಲ್ಲಿ ಆಡುವ ಇಲೆವೆನ್ ಹೇಗಿರುತ್ತದೆ, ತಂಡದ ಕಾಂಬಿನೇಷನ್ ಹೇಗಿರುತ್ತದೆ ಎಂಬುದಕ್ಕೆ ಊಹಾಪೋಹ ಮಾತ್ರವೇ ಮೂಡಬಹುದು.

ಈ ಆಟಗಾರರು ಸಿಎಸ್‌ಕೆಯಲ್ಲಿ ಅವಕಾಶ ಪಡೆಯಬಹುದು ಮೊದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ಹೇಳುವುದಾದರೆ, ಈ ತಂಡದ ಆರಂಭಿಕ ಜೋಡಿ ಈ ಬಾರಿ ಹೊಸದಾಗಿರಲಿದೆ ಏಕೆಂದರೆ ಈಗ ರಿತುರಾಜ್ ಅವರನ್ನು ಬೆಂಬಲಿಸಲು ಫಾಫ್ ಡು ಪ್ಲೆಸಿಸ್ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಬಿನ್ ಉತ್ತಪ್ಪ ಅಥವಾ ಡೆವೊನ್ ಕಾನ್ವೇ ರಿತುರಾಜ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದು. ಮೊದಲ ಪಂದ್ಯಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ಡ್ವೇನ್ ಬ್ರಾವೋ ಮತ್ತು ರವೀಂದ್ರ ಜಡೇಜಾ ಇರಲಿದ್ದಾರೆ. ನಂತರ ಧೋನಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾತ್ರ ತುಂಬಲಿದ್ದಾರೆ.

ಮೊದಲ ಪಂದ್ಯಕ್ಕೆ ಮೊಯಿನ್ ಅಲಿ, ದೀಪಕ್ ಚಹಾರ್ ಅವರಂತಹ ಆಟಗಾರರ ಲಭ್ಯತೆ ತಂಡದಲ್ಲಿ ಇರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಯುವ ಆಲ್‌ರೌಂಡರ್‌ಗಳಾದ ರಾಜವರ್ಧನ್ ಹಂಗೇಕರ್ ಮತ್ತು ಶಿವಂ ದುಬೆಗೆ ಅವಕಾಶ ಸಿಗಬಹುದು. ಅದೇ ಸಮಯದಲ್ಲಿ, ಆಡಮ್ ಮಿಲ್ನೆ ಮತ್ತು ಮಹಿಷ್ ಟೀಕ್ಷಣ ಇತರ ಬೌಲಿಂಗ್ ಆಯ್ಕೆಗಳಲ್ಲಿ ಆಡುವುದನ್ನು ಕಾಣಬಹುದು.

ಚೆನ್ನೈ ಸೂಪರ್ ಕಿಂಗ್ಸ್‌ನ ಸಂಭಾವ್ಯ ಪ್ಲೇಯಿಂಗ್ XI ರಿತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಡೆವೊನ್ ಕಾನ್ವೇ, ಅಂಬಟಿ ರಾಯುಡು, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ, ಶಿವಂ ದುಬೆ, ರಾಜವರ್ಧನ್ ಹಂಗೇಕರ್, ಆಡಮ್ ಮಿಲ್ನೆ, ಮಹಿಷ್ ಟೀಕ್ಷಣ

ಕೆಕೆಆರ್ ಈ ಆಟಗಾರರಿಗೆ ಅವಕಾಶ ನೀಡಬಹುದು ಈಗ ಕೋಲ್ಕತ್ತಾ ನೈಟ್ ರೈಡರ್ಸ್ ಬಗ್ಗೆ ಮಾತನಾಡುವುದಾದರೆ, ಈ ತಂಡಕ್ಕೂ ಆರಂಭಿಕ ಜೋಡಿ ದೊಡ್ಡ ಪ್ರಶ್ನೆಯಾಗಲಿದೆ. ಸ್ಯಾಮ್ ಬಿಲ್ಲಿಂಗ್ಸ್ ಅಥವಾ ಸುನಿಲ್ ನರೈನ್ ವೆಂಕಟೇಶ್ ಅಯ್ಯರ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಬಹುದು. ಇದಲ್ಲದೇ ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಮತ್ತು ಆಂಡ್ರೆ ರಸೆಲ್ ಬಿಗ್ ಹಿಟ್ಟರ್ ಆಲ್ ರೌಂಡರ್ ಆಗಿ ತಂಡದಲ್ಲಿರಲಿದ್ದಾರೆ.

ಕೆಕೆಆರ್‌ನ ದೊಡ್ಡ ಮ್ಯಾಚ್ ವಿನ್ನರ್ ಆಂಡ್ರೆ ರಸೆಲ್ ಆಡುವ XI ನಲ್ಲಿರುವುದು ಖಚಿತವಾಗಿದೆ. ಬೌಲರ್‌ಗಳ ಪೈಕಿ ಉಮೇಶ್ ಯಾದವ್, ಶಿವಂ ಮಾವಿ ಆಡುವ ಇಲೆವೆನ್‌ನಲ್ಲಿರಬಹುದು. ಅದೇ ವೇಳೆ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಈ ತಂಡದ ಬಲವನ್ನು ಹೆಚ್ಚಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ XI: ವೆಂಕಟೇಶ್ ಅಯ್ಯರ್, ಸ್ಯಾಮ್ ಬಿಲ್ಲಿಂಗ್ಸ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ

ಇದನ್ನೂ ಓದಿ:MS Dhoni Quits CSK Captaincy: ಐಪಿಎಲ್​ನಲ್ಲಿ ಧೋನಿ ಯಶಸ್ಸಿಗೆ ಪ್ರಮುಖ 5 ಕಾರಣಗಳಿವು